ಬೆಳಗಾವಿ-ರಾಜ್ಯೋತ್ಸವದ ದಿನ ಲಕ್ಷಾಂತರ ಕನ್ನಡಿಗರು ಒಂದು ಕಡೆ ಸೇರಿ ಕನ್ನಡದ ತೇರು ಎಳೆದು ಬಾನೆತ್ತರದಲ್ಲಿ ಕನ್ನಡದ ಬಾವುಟ ಹಾರಿಸುವದನ್ನು ನೋಡಿ ಸಹಿಸಲು ನಾಡವಿರೋಧಿ ಎಂಇಎಸ್ ಸಹಿಸುವದಿಲ್ಲ,ಕನ್ನಡಿಗರ ಉತ್ಸಾಹ ನೋಡಿ ಪ್ರತಿ ವರ್ಷವೂ ಮೈ ಪರಚಿಕೊಳ್ಳುವ ಕಂಗಾಲ್ ಕಂಪನಿ ಎಂಇಎಸ್ ಈ ವರ್ಷವೂ ರಾಜ್ಯೋತ್ಸವದ ದಿನ ಕಿತಾಪತಿ ನಡೆಸಲು ಮುಂದಾಗಿದೆ.
ಬೆಳಗಾವಿಯಲ್ಲಿ ರಾಜ್ಯೋತ್ಸವದ ದಿನ ಒಂದು ಕಡೆ ಕನ್ನಡಿಗರು ಕನ್ನಡದ ಹಬ್ಬ ಆಚರಿಸಿದ್ರೆ,ಇನ್ನೊಂದು ಕಡೆ ಎಂಇಎಸ್ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಕಪ್ಪು ಬಟ್ಟೆ,ಕಪ್ಪು ಪಟ್ಟಿ,ಧರಿಸಿ ಸೈಕಲ್ ರ್ಯಾಲಿ ಮಾಡಿ, ಪಕ್ಕದ ಮಹಾರಾಷ್ಟ್ರದಿಂದ ಶಿವಸೇನೆಯ ನಾಯಕರನ್ನು ಬೆಳಗಾವಿಗೆ ಕರೆಯಿಸಿ,ಅವರಿಂದ ಪ್ರಚೋದನಕಾರಿ ಭಾಷಣ ಮಾಡಿಸಿ,ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುವದೇ ನಾಡವಿರೋಧಿ ಎಂಇಎಸ್ ಕೆಟ್ಟ ಚಾಳಿಯನ್ನು ಮುಂದುವರೆಸುತ್ತ ಬಂದಿದ್ದು ಈ ವರ್ಷವೂ ಬಾಲ ಬಿಚ್ಚಿದೆ.
ರಾಜ್ಯೋತ್ಸವದಂದು ‘ಕರಾಳ ದಿನ’ ಆಚರಿಸಲು ನಾಡದ್ರೋಹಿ MES ತಯಾರಿ ನಡೆಸಿದೆ.ನಾಡದ್ರೋಹಿ ಎಂಇಎಸ್‌ಗೆ ಶಿವಸೇನೆ ಉದ್ಧವ್ ಠಾಕ್ರೆ ಬಣದ ಬೆಂಬಲ ವ್ಯಕ್ತವಾಗಿದೆ.ನವೆಂಬರ್ 1ರಂದು ಮಹಾರಾಷ್ಟ್ರದ ಶಿವಸೇನೆ ಪುಂಡರು ಬೆಳಗಾವಿಗೆ ಬರುವದಾಗಿ ಬಹಿರಂಗ ಹೇಳಿಕೆ ನೀಡಿ ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ನಿನ್ನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಸಭೆ ಸೇರಿದ್ದ ಶಿವಸೇನೆ ಉದ್ಧವ್ ಠಾಕ್ರೆ ಬಣ,ಕೊಲ್ಲಾಪುರ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ನೇತೃತ್ವದಲ್ಲಿ ಸಭೆ ಮಾಡಿ,ಸಭೆ ಬಳಿಕ ನಾಡದ್ರೋಹಿ ಘೋಷಣೆ ಕೂಗಿ ಉದ್ಧಟತನ ಪ್ರದರ್ಶಿಸಿದ್ದಾರೆ.ಬೆಳಗಾವಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕು ಎಂದು ಘೋಷಣೆ ಹಾಕಿದ್ದಾರೆ.
ನವೆಂಬರ್ 1ರಂದು ನಡೆಯುವ ಎಂಇಎಸ್ ಕರಾಳ ದಿನಾಚರಣೆಗೆ ಬೆಂಬಲ ವ್ಯಕ್ತಪಡಿಸಿ,ಅಕ್ಟೋಬರ್ 31ರಂದು ಶಿವಸೇನೆಯ ಎಲ್ಲಾ ಪದಾಧಿಕಾರಿಗಳು ಬೆಳಗಾವಿಯಲ್ಲಿ, ಸೇರ್ತಿವಿ,ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜ ಸಮಾಧಿ ಸ್ಥಳದಲ್ಲಿ ಸೇರ್ತಿವಿ.ಕೊಲ್ಲಾಪುರ – ಕಾಗಲ್ – ನಿಪ್ಪಾಣಿ – ಸಂಕೇಶ್ವರ ಮಾರ್ಗವಾಗಿ ಬೆಳಗಾವಿಗೆ ಹೋಗ್ತೀವಿ ಎಂದು ಸವಾಲು ಹಾಕಿದ್ದಾರೆ.
ಅಕ್ಟೋಬರ್ 31ರಂದು ಬೆಳಗಾವಿ ಎಂಇಎಸ್ ಮುಖಂಡರು ಕೊಲ್ಲಾಪುರ ಬರ್ತಾರೆ,ಅವರು ನಾವು ಸೇರಿ ಬೆಳಗಾವಿಯವರೆಗೂ ರ್ಯಾಲಿ ಮಾಡ್ತೀವಿ,ಎಂಇಎಸ್, ಶಿವಸೇನೆ ಕಾರ್ಯಕರ್ತರು ಕೈಯಲ್ಲಿ ಭಗವಾ ಧ್ವಜ, ಮಶಾಲ್ ಹಿಡಿದು ಬೆಳಗಾವಿಗೆ ಹೋಗ್ತೇವೆ ಎಂದಿದ್ದಾರೆ.
ಅಕ್ಟೋಬರ್ 31 ರಂದು ಬೆಳಗಾವಿಯಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆಗೆ ಅಭಿಷೇಕ ಮಾಡ್ತೀವಿ,ನವೆಂಬರ್ 1ರಂದು ಕರಾಳ ದಿನ ವೇಳೆ ಎಲ್ಲರೂ ಭಾಗಿಯಾಗ್ತೇವೆ.ಕಾಗಲ್ ಚೆಕ್‌ಪೋಸ್ಟ್‌ನಲ್ಲಿ ತಡೆದ್ರೆ ಶಿನೋಳಿ ಮಾರ್ಗವಾಗಿ ಬೆಳಗಾವಿಗೆ ಹೋಗ್ತೀವಿ ಎಂದು ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಎಂಇಎಸ್ ಕರಾಳ ದಿನ ರ‌್ಯಾಲಿಯಲ್ಲಿ ನಾವು ಭಾಗಿಯಾಗ್ತೇವೆ,ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಹೇಳಿಕೆ ನೀಡಿ ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.