ಬೆಳಗಾವಿ-ಕ್ರಾಂತಿಯ ನೆಲ ಬೆಳಗಾವಿಯ ಕನ್ನಡದ ಅಭಿಮಾನವೇ ಅಂತಹದ್ದು,ಮದ್ಯರಾತ್ರಿಯೇ ಇಲ್ಲಿಯ ಚನ್ನಮ್ಮ ಸರ್ಕಲ್ ನಲ್ಲಿ ಸೇರಿದ ಕನ್ನಡದ ಅಭಿಮಾನಿಗಳು ಕೇಕ್ ಕತ್ತರಿಸಿ ಕನ್ನಡದ ಹಬ್ಬಕ್ಕೆ ಚಾಲನೆ ನೀಡಿದ್ರು
ಬಾನೆತ್ತರದಲ್ಲಿ ಕನ್ನಡದ ಬಾವುಟ ಹಾರಿಸುತ್ತ ಹೆಜ್ಜೆ ಹಾಕುತ್ತ,ಪಟಾಕಿ ಸಿಡಿಸುತ್ತ,ಸಿಹಿ ಹಂಚುತ್ತ ಅಭೂತಪೂರ್ವ ರಾಜ್ಯೋತ್ಸವಕ್ಕೆ ಚಾಲನೆ ನೀಡಿದ್ರು.
ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಕೇಕ್ ಕತ್ತರಿಸಿ ಸಿಡಿಮದ್ದು ಸಿಡಿಸಿ ಚೀರಾಡಿ ಕೂಗಾಡಿ,ಯಾರಪ್ಪಂದ್ ಏನೈತಿ ಬೆಳಗಾವಿ ನಮ್ದ ಐತಿ ಎಂದು ಘೋಷಣೆ ಹಾಕುತ್ತಲೇ ಕನ್ನಡದ ಹಬ್ಬವನ್ನು ಬರಮಾಡಿಕೊಂಡರು.
ಮದ್ಯರಾತ್ರಿ ಹನ್ನೆರಡು ಗಂಟೆಯಾದರೂ ಕನ್ನಡಿಗರ ಸಂಭ್ರಮ ಉತ್ಸಾಹ ಕುಗ್ಗಲಿಲ್ಲ,ಎಲ್ಲರೂ ರಾಣಿ ಚನ್ನಮ್ಮಾಜಿಗೆ ಕೈ ಮುಗಿಯುತ್ತ,ಸೆಲ್ಫಿ ತೆಗೆಯುತ್ತ ಜನ ಕುಟುಂಬ ಸಮೇತ ಸಂಭ್ರಮದಲ್ಲಿ ಪಾಲ್ಗೊಂಡಿದ್ಸರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ