ಬೆಳಗಾವಿ-ಕನ್ನಡ ರಾಜ್ಯೋತ್ಸವ ನಿಮಿತ್ತ ಮೂಡಲಗಿಯಲ್ಲಿ ನಡೆದ ಸಿರಿಗನ್ನಡ ಉತ್ಸವದಲ್ಲಿ ಅಪ್ಪು ಭಾವಚಿತ್ರ ಹಿಡಿದು ಸಂಭ್ರಮಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ,ಶೀಘ್ರದಲ್ಲೇ ಅಪ್ಪು ಹೆಸರಿನಲ್ಲಿ ಕೆಎಂಎಫ್ ಉತ್ಪನ್ ಬಿಡುಗಡೆ ಮಾಡುವದಾಗಿ ಘೋಷಿಸಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಸ್ವಕ್ಷೇತ್ರ ಅರಭಾವಿ ವ್ಯಾಪ್ತಿಯ ಮೂಡಲಗಿಯಲ್ಲಿ ನಡೆದ ಅದ್ಧೂರಿ ಸಿರಿಗನ್ನಡ ಉತ್ಸವದಲ್ಲಿ ಭಾಗಿಯಾಗಿ ಅಪ್ಪು ಭಾವಚಿತ್ರ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.ಅದ್ಧೂರಿ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಭಾಗಿಯಾದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂಬ್ರಮಿಸಿದರು.
ಅಪ್ಪು ಚಿತ್ರದ ಹಾಡುಗಳಿಗೆ ಯುವಕರ ಬಿಂದಾಸ್ ಸ್ಟೆಪ್ಸ್ ಹಾಕಿದ್ರು,ಬೊಂಬೆ ಹೇಳುತೈತೆ ಹಾಡಿಗೆ ಕೈಯಲ್ಲಿ ಅಪ್ಪು ಭಾವಚಿತ್ರ ಹಿಡಿದು ಸಂಭ್ರಮಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಎಲ್ಲರ ಗಮನ ಸೆಳೆದ್ತು.ಕಾರ್ಯಕ್ರಮ ಉದ್ದೇಶಿಸಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭಾಷಣ ಮಾಡಿದ್ರು,ಅಪ್ಪು ಹೆಸರಲ್ಲಿ ಶೀಘ್ರವೇ ಕೆಎಂಎಫ್ ಉತ್ಪನ್ನ ಬಿಡುಗಡೆ ಮಾಡುತ್ತೇವೆ,ಪುನೀತ್ ರಾಜ್‍ಕುಮಾರ್ ಕೆಎಂಎಫ್ ಉತ್ಪನ್ನಗಳ ರಾಯಭಾರಿ ಆಗಿದ್ದರು,ಮೂಡಲಗಿಯ ಈ ಕಾರ್ಯಕ್ರಮ ಅಪ್ಪುಗೆ ಸಮರ್ಪಿಸುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ