ಖಾನಾಪೂರ-ಹಿಂಬದಿಯಿಂದ ಬೈಕಿಗೆ ಟಿಪ್ಪರ್ ಟಕ್ಕರ್ ಹೊಡೆದ ಕಾರಣ, , ಒಂದೇ ಕುಟುಂಬದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಓರ್ವನು ಗಂಭೀರವಾಗಿ ಗಾಯಗೊಂಡಿದ್ದಾನೆ.ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ.
ಖಾನಾಪುರ ತಾಲೂಕಿನ ಹಿಡಲಗಿ ಗ್ರಾಮದ ಪ್ರವೀಣ್ ಕೋಲಕಾರ (27),ಬೆಳಗಾವಿ ತಾಲ್ಲೂಕಿನ ಮಜಗಾಂವ ಗ್ರಾಮದ ಐಶ್ವರ್ಯ ನರಸನ್ನವರ(20) ಮೃತಪಟ್ಟಿದ್ದು,ಇದೆ ವೇಳೆ ಇದೇ ಟಿಪ್ಪರ್ ಮತ್ತೊಂದು ಬೈಕಿಗೂ ಗುದ್ದಿದ ಕಾರಣ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಪಾರಿಶ್ವಾಡ್ ಗ್ರಾಮದ ಸಂತೋಷ ಪಾಟೀಲ ಗಾಯಗಿಂಡಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನದಂಗಡದಿಂದ ಖಾನಾಪುರಕ್ಕೆ ಬರುತ್ತಿದ್ದ ಪ್ರವೀಣ್ ಹಾಗೂ ಸಂತೋಷ ಬೈಕಿಗೆ ಹಿಂಬದಿಯಿಂದ ಗುದ್ದಿದ ಟಿಪ್ಪರ್ ಇಷ್ಟೆಲ್ಲಾ ಅನಾಹುತ ಮಾಡಿದೆ.ಘಟನೆ ಬಳಿಕ ಸ್ಥಳದಲ್ಲೇ ಟಿಪ್ಪರ್ ಬಿಟ್ಟು ಪರಾರಿಯಾದ ಟಿಪ್ಪರ್ ಚಾಲಕ ಪತ್ತೆಗೆ ಪೋಲೀಸ್ರು ಜಾಲ ಬೀಸಿದ್ದಾರೆಸ್ಥಳಕ್ಕೆ ಖಾನಾಪುರ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದು,ಮೃತದೇಹಗಳನ್ನು ಖಾನಾಪುರ ತಾಲೂಕಾಸ್ಪತ್ರೆಗೆ ರವಾನೆ ಮಾಡಲಾಗಿದೆ.ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ