ಬೆಳಗಾವಿ-ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮುಸುಕಿನ ಗುದ್ದಾಟ ನಡೆದಿದ್ದು ಮಾಜಿ ಶಾಸಕ ಫಿರೋಜ್ ಸೇಠ,ಮತ್ತು ರಾಜು ಸೇಠ ಇಬ್ಬರೂ ಅರ್ಜಿ ಸಲ್ಲಿಸಿದ್ದು,ಫಿರೋಜ್ ಸೇಠ ಪುತ್ರ ಫೈಜಾನ್ ಸೇಠ ಅವರೂ ಸಹ ಕೆಪಿಸಿಸಿ ಕಚೇರಿಯಿಂದ ಅರ್ಜಿ ಪಡೆದಿದ್ದು,ಇನ್ನುವರೆಗೆ ಅರ್ಜಿ ಸಲ್ಲಿಸಿಲ್ಲ.
ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿತ್ತು,ಆದ್ರೆ ಇವತ್ತು ಕೊನೆಯ ಕ್ಷಣದಲ್ಲಿ ದಿನಾಂಕ ವಿಸ್ತರಿಸಲಾಗಿದ್ದು, ಪ್ರಮುಖರು ಇವತ್ತೇ ಅರ್ಜಿ ಸಲ್ಲಿಸಿದ್ದು ಇನ್ನು ಕೆಲವರು ನಾಳೆ ನಾಡಿದ್ದು ಅರ್ಜಿ ಸಲ್ಲಿಸಲಿದ್ದಾರೆ.
ಬೆಳಗಾವಿ ಉತ್ತರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಫಿರೋಜ್ ಸೇಠ,ರಾಜು ಸೇಠ,ಅರ್ಜಿ ಸಲ್ಲಿಸಿದ್ದು,ಫೈಜಾನ್ ಸೇಠ ಅರ್ಜಿ ಪಡೆದುಕೊಂಡಿದ್ದು ಇನ್ನುವರೆಗೆ ಸಲ್ಲಿಸಿಲ್ಲ,ಫೈಜಾನ್ ಅರ್ಜಿ ಸಲ್ಲಿಸಿದರೆ ಒಂದೇ ಕುಟುಂಬದಿಂದ ಮೂವರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದಂತಾಗುತ್ತದೆ.
ಸೇಠ ಕುಟುಂಬ ಹೊರತುಪಡಿಸಿ ಇನ್ನೂ ಅನೇಕ ಜನ ಬೆಳಗಾವಿ ಉತ್ತರದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.ಹಾಶಮ ಭಾವಿಕಟ್ಟಿ,ಅಜೀಂ ಪಟವೇಗಾರ,ಸಿದ್ಧೀಕ ಅಂಕಲಗಿ,ಸಹ ಅರ್ಜಿ ಸಲ್ಲಿಸಿದ್ದು, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷರ ವಿನಯ ನಾವಲಗಟ್ಟಿ ಅವರೂ ನಾಳೆ ಬೆಳಗಾವಿ ಉತ್ತರ ಕ್ಷೇತ್ರದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಲಿದ್ದಾರೆ.
ಮಾಜಿ ಸಚಿವ ಎಬಿ ಪಾಟೀಲ ಅವರು ಹುಕ್ಕೇರಿ ಕ್ಷೇತ್ರದ ಜೊತೆಗೆ ಬೆಳಗಾವಿ ಉತ್ತರದಿಂದಲೂ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.ಸವದತ್ತಿ ಕ್ಷೇತ್ರದಿಂದ ವಿಶ್ವಾಸ ವೈದ್ಯ, ಪಂಚನಗೌಡ್ರು ಸೌರಬ ಚೋಪ್ರಾ,ಮತ್ತು ಉಮೇಶ್ ಬಾಳಿ ಅವರು ಕಾಂಗ್ರೆಸ್ ಟೆಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳು ಅರ್ಜಿಯ ಜೊತೆಗೆ ಕೆಪಿಸಿಸಿಗೆ ಎರಡು ಲಕ್ಷ ರೂ ಡೋನೇಶನ್ ಕೊಟ್ಟಿದ್ದು ವಿಶೇಷ.