ಕರ್ನಾಟಕ ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಸ್ಥಗಿತ…

ಬೆಳಗಾವಿ: ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ 300ಕ್ಕೂ ಹೆಚ್ಚು ಬಸ್ಗಳು ತಾತ್ಕಾಲಿಕ ಸ್ಥಗಿತವಾಗಿದ್ದುಅಹಿತಕರ ಘಟನೆಗಳುನಡೆಯದಂತೆ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿಪೊಲೀಸ್ ಬಂದೋ ಬಸ್ತಿ ಮಾಡಲಾಗಿದೆ.

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿಮಹಾರಾಷ್ಟ್ರದ ಪುಂಡರು ಇಂದು ಕರ್ನಾಟಕದ ಬಸ್ಗಳಿಗೆ ಮಸಿ ಬಳಿದಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿಮಹಾರಾಷ್ಟ್ರದ ಬಸ್ಗಳಿಗೂ ಕಪ್ಪು ಮಸಿ ಬಳಿಯುವ ಭೀತಿಯ ಹಿನ್ನೆಲೆಯಲ್ಲಿನಗರ ಕೇಂದ್ರ
ಬಸ್ ನಿಲ್ದಾಣದಲ್ಲಿಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಇತ್ತಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುತ್ತಿದ್ದ 300ಕ್ಕೂ ಅಧಿಕ ಬಸ್ಗಳ ಸಂಚಾರವನ್ನು ಮಹಾರಾಷ್ಟ್ರ ರಾಜ್ಯ ರಸ್ತೆಸಾರಿಗೆ ಸಂಸ್ಥೆಸ್ಥಗಿತಗೊ ಳಿಸಿ ಆದೇಶ ಮಾಡಿದೆ. ಮಹಾರಾಷ್ಟ್ರದಿಂದ ನಿತ್ಯ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ರಾಜ್ಯದ ಹಲವು ಭಾಗಗಳಿಗೆಮಹಾರಾಷ್ಟ್ರ ಬಸ್ಗಳು ಸಂಚಾರ ಮಾಡುತ್ತವೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಎಂದಿನಂತೆ ಕರ್ನಾಟಕ ಸಾರಿಗೆ ಬಸ್ಗಳುತೆರಳುತ್ತಿವೆ.
ಕನ್ನಡಪರ ಹೋ ರಾಟಗಾರರ ಬೆನ್ನು ಬಿದ್ದಪೊಲೀಸರು: ಮಹಾರಾಷ್ಟ್ರದ ಬಸ್ಗಳಿಗೂ ಕಪ್ಪು ಮಸಿ ಬಳಿಯುವ ಭೀತಿ ಹಿನ್ನೆಲೆಬೆಳಗಾವಿಯಲ್ಲಿಪೊಲೀಸರು ಕನ್ನಡಪರ ಹೋ ರಾಟಗಾರರ ಬೆನ್ನು ಬಿದ್ದಿದ್ದಾರೆ.

ಮಹಾರಾಷ್ಟ್ರದ ಬಸ್ಗಳಿಗೆ ಮಸಿ ಬಳಿಯದಂತೆ
ಕನ್ನಡಪರ ಹೋ ರಾಟಗಾರರಿಗೆ ಪೊಲೀಸರು ವಾರ್ನಿಂಗ್ ಮಾಡುತ್ತಿದ್ದಾರೆ. ಎರಡೂ ರಾಜ್ಯಗಳ ಜನಸಂಚಾರಕ್ಕೆ ಯಾವುದೇನಿರ್ಬಂಧ ಹೇರದಂತೆ ಮತ್ತುಕಾನೂನು ಕೈಗೆತ್ತಿಕೊಳ್ಳದಂತೆ ತಾಕೀತು ಮಾಡಲಾಗಿದೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *