ಬೆಳಗಾವಿ- ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಗಡಿವಿವಾದವನ್ಬು ರಾಜಕೀಯ ದಾಳವನ್ನಾಗಿ ಪ್ರಯೋಗಿಸಲು ಕುತಂತ್ರ ನಡೆಸಿದ್ದು,ಈಗ ಮತ್ತೊಂದು ಪುಂಡಾಟಿಕೆ ನಡೆಸಲು ಶಿವಸೇನೆಯ ಶಿಂಧೆ ಬನ ಮುಂದಾಗಿದೆ.
ಅಧಿವೇಶನಕ್ಕೂ ಮೊದಲು ಬೆಳಗಾವಿಯಲ್ಲಿ ದೊಂಬಿ ಎಬ್ಬಿಸಲು ಶಿವಸೇನೆಯ ಶಿಂಧೆ ಬಣ ಮುಂದಾಗಿದೆ ಶಿವಸೇನೆ ಹಾಗೂ ಎಮ್.ಈ.ಎಸ್ ಜಂಟಿಯಾಗಿ,ಗಡಿ ವಿಚಾರವಾಗಿ ಬೆಳಗಾವಿಯಲ್ಲಿ ಸಭೆ ನಡೆಸಲು ಇಬ್ಬರು ಸಚಿವರು ಬೆಳಗಾವಿಗೆ ಬರ್ತಾ ಇದ್ದಾರೆ.ಡಿಸೆಂಬರ್ 3 ರಂದು ಬೆಳಗಾವಿಯಲ್ಲಿ ಸಭೆ ನಡೆಸುವುದಾಗಿ ಶಿವಸೇನೆ ಮಹಾ ಸರ್ಕಾರದ ಇಬ್ಬರು ಸಚಿವರು ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರದ ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ್ ಹಾಗೂ ಅಬಕಾರಿ ಸಚಿವ ಶಂಬುರಾಜ ದೇಸಾಯಿ ಡಿಸೆಂಬರ 3 ರಂದು ಬೆಳಗಾವಿಗೆ ಬರುವದಾಗಿ.ಬೆಳಗಾವಿಯಲ್ಲೇ ಮೀಟೀಂಗ್ ಮಾಡುವದಾಗಿ, ಇಬ್ಬರು ಸಚಿವರು ಟ್ವಿಟರ್ ಮೂಲಕ ಘೋಷಣೆ ಮಾಡಿಕೊಂಡಿದ್ದಾರೆ.
ಎಮ್.ಈ.ಎಸ್ ಮುಖಂಡರ ಆಹ್ವಾನದ ಮೇರೆಗೆ ಬೆಳಗಾವಿಗೆ ಬರುತ್ತಿರುವುದಾಗಿ ಘೋಷಣೆ ಮಾಡಿಕೊಂಡಿರುವ ಇಬ್ಬರು ಸಚಿವರು ಬೆಳಗಾವಿಯಲ್ಲಿ ಮತ್ತೆ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ರೆಡಿಯಾಗಿದ್ದಾರೆ.ವಾರದ ಹಿಂದಷ್ಟೇ ಈ ಇಬ್ಬರು ಸಚಿವರನ್ನ ಗಡಿ ಉಸ್ತುವಾರಿ ಸಚಿವರನ್ನಾಗಿ ಮಹಾರಾಷ್ಟ್ರ ಸರ್ಕಾರ ನೇಮಕ ಮಾಡಿತ್ತು.
ಮಹಾರಾಷ್ಟ್ರ ಸರ್ಕಾರ ಇಬ್ಬರು ಸಚಿವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುತ್ತಿದ್ದಂತೆಯೇ ಬೆಳಗಾವಿಯ ಎಂಇಎಸ್ ಪುಂಡರು ಇಬ್ಬರು ಸಚಿವರಿಗೆ ಪತ್ರಬರೆದು ಬೆಳಗಾವಿಗೆ ಭೇಟಿ ನೀಡಿ ಬೆಳಗಾವಿಯಲ್ಲೇ ಸಭೆ ಮಾಡುವಂತೆ ಬೆಳಗಾವಿಯ ಎಂಇಎಸ್ ನಾಯಕರು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಇಬ್ಬರು ಗಡಿ ಉಸ್ತುವಾರಿ ಸಚಿವರುಗಳು ಡಿಸೆಂಬರ್ 3 ರಂದು ಬೆಳಗಾವಿಗೆ ಬಂದು ಬೆಳಗಾವಿಯಲ್ಲೇ ಸಭೆ ಮಾಡಲಿದ್ದಾರೆ.