Breaking News
Home / Breaking News / ಬೆಳಗಾವಿ ಉತ್ತರ: ಆರಂಭದಲ್ಲಿ “ವಿನಯ” ಕೊನೆಯ ಕ್ಷಣದಲ್ಲಿ “ಕಿರಣ”…!!!

ಬೆಳಗಾವಿ ಉತ್ತರ: ಆರಂಭದಲ್ಲಿ “ವಿನಯ” ಕೊನೆಯ ಕ್ಷಣದಲ್ಲಿ “ಕಿರಣ”…!!!

ಬೆಳಗಾವಿ- ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಪಕ್ಚ ಅರ್ಜಿ ಅಹ್ವಾನಿಸಿ, ಎಲ್ಲ ಆಕಾಂಕ್ಷಿಗಳಿಂದ ಅರ್ಜಿಯ ಜೊತೆಗೆ ಎರಡು ಲಕ್ಷ ರೂ ದೇಣಿಗೆ ಪಡೆದಿದೆ. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಕೊನೆಯ ಕ್ಷಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ.

ಬೆಳಗಾವಿ ಉತ್ತರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಆರಂಭದಲ್ಲಿ ಮಾಜಿ ಶಾಸಕ ಫಿರೋಜ್ ಸೇಠ, ರಾಜು ಸೇಠ,ಫೈಜಾನ್ ಸೇಠ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ,ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಹಾಶಮ್ ಭಾವಿಕಟ್ಟಿ,ನಗರ ಸೇವಕ ಅಜೀಂ ಪಟವೇಗಾರ,ಯುವ ಕಾರ್ಯಕರ್ತ ಸಿದ್ದೀಕ ಅಂಕಲಗಿ ಸುಧೀರ ಗಡ್ಡೆ ಅವರು ಕೈ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು,ಇದೇ ಕ್ಷೇತ್ರದಿಂದ ಮಾಜಿ ಸಚಿವ ಹಿರಿಯ ಕಾಂಗ್ರೆಸ್ ನಾಯಕ. ಎಬಿ ಪಾಟೀಲ ಅವರು ಅರ್ಜಿ ಸಲ್ಲಿಸುವ ಸುದ್ದಿ ಹರಡಿತ್ತು ಆದ್ರೆ ಕೊನೆಯ ಕ್ಷಣದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಎಬಿ ಪಾಟೀಲರು ಹುಕ್ಕೇರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದು, ಕೊನೆಯ ಕ್ಷಣದಲ್ಲಿ ಬೆಳಗಾವಿ ಉತ್ತರದಿಂದ ಕೈ ಟಿಕೆಟ್ ಗಾಗಿ ಕಿರಣ ಸಾಧುನವರ ಅರ್ಜಿ ಸಲ್ಲಿಸಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದಿಂದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿದು ಬಂದಿದ್ದು ಈ ವಿಚಾರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತ್ತು ಮಾಜಿ ಶಾಸಕ ಫಿರೋಜ್ ಸೇಠ ನಡುವೆ ರಾಜಿ ಸಂಧಾನ ಮಾಡಿಸುವ ವಿಫಲಯತ್ನ ನಡೆದಿದೆ ಎಂದು ತಿಳಿದು ಬಂದಿದೆ.

ಇತ್ತೀಚಿಗೆ ಬೆಂಗಳೂರಿನ ಗೋಲ್ಡ್ ಪಿಂಚ್ ಹೊಟೇಲ್ ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ,ಸರ್ಜೆವಾಲಾ,ಡಿಕೆ ಶಿವಕುಮಾರ್ ಸಿದ್ರಾಮಯ್ಯ, ಅವರು ಸತೀಶ್ ಜಾರಕಿಹೊಳಿ ಮತ್ತು ಫಿರೋಜ್ ಸೇಠ ಅವರನ್ನು ಒಂದುಗೂಡಿಸುವ ಪ್ರಯತ್ನ ನಡೆಸಿದ್ದಾರೆ ಎನ್ನುವ ಸುದ್ದಿ ಹರದಾಡುತ್ತಿದೆ.ಆದ್ರೆ ಈ ಸಭೆಯಲ್ಲಿ ಏನಾಯ್ತು ? ಇಬ್ಬರ ನಡುವಿನ ಭಿನ್ನಾಭಿಪ್ರಾಯ ಅಂತ್ಯವಾಯಿತಾ ? ಈ ಎಲ್ಲ ಪ್ರಶ್ನೆಗಳಿಗೆ ಕಾಂಗ್ರೆಸ್ ನಾಯಕರೇ ಉತ್ತರ ನೀಡಬೇಕಾಗಿದೆ.

ಬೆಳಗಾವಿ ಉತ್ತರದಿಂದ ಪ್ರಭಾವಿ ಲಿಂಗಾಯತ ಅಭ್ಯರ್ಥಿಗೆ ಈ ಬಾರಿ ಟಿಕೆಟ್ ಕೊಡಬೇಕು ಎನ್ನುವ ಚಿಂತನೆಯನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.ಒಂದು ವೇಳೆ ಲಿಂಗಾಯತ ಅಭ್ಯರ್ಥಿಗೆ ಬೆಳಗಾವಿ ಉತ್ತರದಿಂದ ಕಾಂಗ್ರೆಸ್ ಟಿಕೆಟ್ ಕೊಡುವ ಪರಿಸ್ಥಿತಿ ಎದರಾಗಬಹುದು ಎನ್ನುವ ಮುಂದಾಲೋಚಣೆಯಿಂದಲೇ ಕಾಂಗ್ರೆಸ್ ನಾಯಕರು ವಿನಯ ನಾವಲಗಟ್ಟಿ ಮತ್ರು ಕಿರಣ ಸಾಧುನವರ ಅವರಿಗೆ ಕೈ ಟಿಕೆಟ್ ಗಾಗಿ ಅರ್ಜಿ ಫಾರಂ ತುಂಬುವಂತೆ ಸೂಚಿಸಿದ್ದಾರೆ ಹೀಗಾಗಿ ಕಿರಣ ಸಾಧುನವರ ಕೊನೆಯ ಕ್ಷಣದಲ್ಲಿ ಕೈ ಟಿಕೆಟ್ ಗಾಗಿ ಅರ್ಜಿ ಹಾಕಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಅನೀಲ ಬೆನಕೆ ಶಾಸಕರಾಗಿದ್ದಾರೆ ಅವರು ಮರಾಠಾ ಸಮಾಜಕ್ಕೆ ಸೇರಿದವರಾಗಿದ್ದಾರೆ.ಇವರನ್ನು ಸೋಲೀಸಬೇಕಾದ್ರೆ ಲಿಂಗಾಯತ ಸಮಾಜದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದು , ಮಾಜಿ ಶಾಸಕ ಫಿರೋಜ್ ಸೇಠ ಅವರ ಪರವಾಗಿ ಸರ್ಜೆವಾಲಾ ಬ್ಯಾಟೀಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿಯೂ ಇದೆ.

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಪ್ರಭಾವಿ ನಾಯಕರ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ, ಈ ಬಾರಿ ಫಿರೋಜ್ ಸೇಠ ಅವರಿಗೆ ಟಿಕೆಟ್ ಸಿಗುತ್ತಾ ? ಅಥವಾ ಲಿಂಗಾಯತ ಸಮಾಜದ ಅಭ್ಯರ್ಥಿಗೆ ಕಣಕ್ಕಿಳಿಸಲಿದೆಯಾ ? ಅನ್ನೋದನ್ನು ಕಾಯ್ದು ನೋಡಬೇಕಾಗಿದೆ.

Check Also

ಅಮೀತ್ ಶಾ ಅವರನ್ನು ಭೇಟಿಯಾದ ಡಾ.ಸೋನಾಲಿ ಸರ್ನೋಬತ್,ಖಾನಾಪೂರ ಕ್ಷೇತ್ರದಲ್ಲಿ ಸಂಚಲನ..!!

ಬೆಳಗಾವಿ-ಬೆಳಗಾವಿ ಬಿಜೆಪಿ ಸಂಘಟನೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತಿರುವ ಬಿಜೆಪಿ ನಾಯಕಿ,ಡಾ.ಸೋನಾಲಿ ಸರ್ನೋಬತ್ ಅವರು ಖಾನಾಪೂರ ತಾಲ್ಲೂಕಿನ ಬಿಜೆಪಿ …

Leave a Reply

Your email address will not be published. Required fields are marked *