Breaking News
Home / Breaking News / ಕಿತ್ತೂರು ಕ್ಷೇತ್ರದ ಧಣಿ,ಸತೀಶ್ ಸಾಹುಕಾರ್ ಸಮ್ಮಿಲನ….!!!

ಕಿತ್ತೂರು ಕ್ಷೇತ್ರದ ಧಣಿ,ಸತೀಶ್ ಸಾಹುಕಾರ್ ಸಮ್ಮಿಲನ….!!!

ಬೆಳಗಾವಿ-ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ,ಶಾಶ್ವತ ಶತ್ರುಗಳೂ ಅಲ್ಲ ಅನ್ನೋದು ನೂರಕ್ಕೆ ನೂರು ಸತ್ಯ,ಒಂದೇ ಪಕ್ಷದಲ್ಲಿದ್ದರೂ ವ್ಯಯಕ್ತಿಕವಾಗಿ ಅಂತರ ಕಾಯ್ದುಕೊಂಡಿದ್ದ ಕಿತ್ತೂರು ಕ್ಷೇತ್ರದ ಧಣಿ ಎಂದೇ ಕರೆಯಲ್ಪಡುವ ಡಿಬಿ ಇನಾಮದಾರ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಸಮ್ಮಿಲನ ವಾಯಿತು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಇಂದು ಶನಿವಾರ ಸಂಜೆ ನೇಗಿನಹಾಳ ಗ್ರಾಮದಲ್ಲಿರುವ ಡಿ.ಬಿ ಇನಾಮದಾರ ಮನೆಗೆ ಭೇಟಿ ನೀಡಿ ಸುಧೀರ್ಘ ಚರ್ಚೆ ಮಾಡಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ವಿದ್ಯಮಾನಗಳು ಬದಲಾಗುತ್ತಿರುವ ಸಂಧರ್ಭದಲ್ಲಿ ಸತೀಶ್ ಜಾರಕಿಹೊಳಿ ಮತ್ತು ಡಿಬಿ ಇನಾಮದಾರ ಭೇಟಿ ಮಹತ್ವದ ಚರ್ಚೆಗೆ ಕಾರಣವಾಗಿದೆ.ಇಬ್ಬರ ಭೇಟಿಯನ್ನು ಹಲವಾರು ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.

ಡಿ ಬಿ‌ ಇನಾಮದಾರ, ಸತೀಶ್ ಜಾರಕಿಹೊಳಿ, ಅವರು ಸಿದ್ರಾಮಯ್ಯ ನವರ ಗರಡಿಯಲ್ಲಿ ಪಳಗಿದವರು, ಇಬ್ಬರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರು. ಎಂಬುದು ವಿಶೇಷವಾಗಿದೆ. ರಾಜ್ಯದಲ್ಲಿ ಸಿದ್ರಾಮಯ್ಯ ನವರ ಗುಂಪಿನ ನಾಯಕರು ಒಗ್ಗಟ್ಟಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಬೆಳಗಾವಿ ಜಿಲ್ಲೆಯಲ್ಲಿ ಪಂಚಮಸಾಲಿ ಸಮಾಜದ ಘಟನೆ ಬಲಿಷ್ಠವಾಗುತ್ತಿದ್ದಂತೆಯೇ ಅಹಿಂದ ವರ್ಗದಲ್ಲೂ ಒಮ್ಮತ ಮೂಡುತ್ತಿದೆ.

ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ,ಮತ್ರು ಲಖನ್ ಜಾರಕಿಹೊಳಿ,ಅವರು ಈಗಾಗಲೇ ಅಹಿಂದ ವರ್ಗದ ಶ್ರೀಗಳಿಂದ ಆಶೀರ್ವಾದ ಪಡೆದು,ಗೋಕಾಕ ತಾಲ್ಲೂಕಿನಲ್ಲಿ ಕನಕ ಜಯಂತಿಯನ್ನು ಅದ್ಧೂರಿಯಾಗಿ ಆಚರಸಿ ಅಹಿಂದ ವರ್ಗವನ್ನು ಸಂಘಟಿಸುತ್ತಿರುವದು ಗುಟ್ಟಾಗಿ ಉಳಿದಿಲ್ಲ.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *