Breaking News

ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದ ಗಡಿಬಿಡಿ,…!!

ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ

ಬೆಳಗಾವಿ-ಬೆಳಗಾವಿಯ ಶಾಂತಿಗೆ ಭಂಗ ತರಲು,ನಾಳೆ ಬೆಳಗಾವಿಗೆ ಮಹಾರಾಷ್ಟ್ರದ ಇಬ್ಬರು ಮಂತ್ರಿಗಳು ಬರುತ್ತಿದ್ದು, ಮಹಾರಾಷ್ಟ್ರದ ಮಂತ್ರಿಗಳ ಹಠಮಾರಿ ಧೋರಣೆ ಖಂಡಿಸಿ,ಇವರನ್ನು ಬೆಳಗಾವಿಗೆ ಬಾರದಂತೆ ಯಾವುದೇ ಕಠಿಣ ಕ್ರಮ ಜರುಗಿಸದ ಕರ್ನಾಟಕ ಸರ್ಕಾರದ ನಿರ್ಲಕ್ಷ್ಯ ವನ್ಬು ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ.

ಕುಂದಾನಗರಿ ಬೆಳಗಾವಿಯಲ್ಲಿ ಬೀದಿಗಿಳಿದ ಕನ್ನಡ ಹೋರಾಟಗಾರರು,ಹಾಗೂಬೆಂಗಳೂರಿನ ಕರ್ನಾಟಕ ಏಕೀಕರಣ ಸಮಿತಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದ್ದು,ಕರ್ನಾಟಕ ಏಕೀಕರಣ ಸಮಿತಿ ರಾಜ್ಯಾಧ್ಯಕ್ಷ ನರಸಿಂಹ ಮೂರ್ತಿ ನೇತೃತ್ವದಲ್ಲಿ,ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಮಹಾರಾಷ್ಟ್ರ ಮಂತ್ರಿಗಳು ಬೆಳಗಾವಿ ಗೆ ಬರದಂತೆ ತಡೆಯಲು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.ಎಂಇಎಸ ಪುಂಡರನ್ನ ನಿಷೇಧಿಸಲು ಒತ್ತಾಯ ಮಾಡಿವೆ. ಬೆಂಗಳೂರಿನ ವಿವಿಧ ಕನ್ನಡಪರ ಸಙಘಟನೆಗಳು ಬೆಳಗಾವಿಯಚೆನ್ನಮ್ಮ ವೃತ್ತದಲ್ಲಿ ಉರುಸೇವೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ.

ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರುವ ವಿಚಾರದಲ್ಲಿ ಬೆಳಗಾವಿ ಡಿಸಿ ಹೇಳುದ್ದು…

ನಾಳೆಗೆ ಬೆಳಗಾವಿ ಮಹಾರಾಷ್ಟ್ರ ಸಚಿವರು, ಸಂಸದ ಆಗಮನ ವಿಚಾರವಾಗಿ ಬೆಳಗಾವಿ ಜಿಲ್ಲಾಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿ ಜಿಲ್ಲಾಢಳಿತದಿಂದ ಸೆಕ್ಷನ್ 143ರ ಅನ್ವಯ ಪ್ರತಿಬಂಧಕ ಕಾಯ್ದೆ ಹಾಕಲು ಸಿದ್ದತೆ ನಡೆದಿದೆ.ಎಂದುಬೆಳಗಾವಿಯಲ್ಲಿ ಡಿಸಿ ನಿತೇಶ್ ಪಾಟೀಲ್ ಹೇಳಿದ್ದಾರೆ.ಮಹಾರಾಷ್ಟ್ರ ಸಚಿವರ ಆಗಮನ ಹಿನ್ನೆಲೆ ಪರಿಸ್ಥಿತಿ ಬಿಗಡಾಯಿಸಿದೆ.ಮಹಾರಾಷ್ಟ್ರ ಸಚಿವರು ಬಂದರೇ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ.ಅವರ ಸುರಕ್ಷಿತೆಗು ಸಹ ಸಮಸ್ಯೆ ಇದೆ.ಬೆಳಗಾವಿಗೆ ಬರುವ ನಿರ್ಧಾರವಾಪಸ್ ತೆಗೆದಕೊಳ್ಳಬಹುದು ಎಂಬ ನಿರೀಕ್ಷೆ ಇದೆ.ಬಂದೇ ತೀರುತ್ತೇವೆ ಎಂದು ಹಠ ಹಿಡಿದ್ರೆ..ಇಲ್ಲವೇ ನಾವೇ ಪ್ರತಿಬಂಧಕ ಕಾಯಿದೆ ಹಾಕುತ್ತೇವೆ.ಎಂದು ಬೆಳಗಾವಿ ಡಿಸಿ ಹೇಳಿದ್ದಾರೆ.

ರಾಜ್ಯದ ಮುಖ್ಯಕಾರ್ಯದರ್ಶಿ ಸಹ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.ಕಾನೂನು ಸುವ್ಯವಸ್ಥೆ ಸರಿಯಲ್ಲ ಎಂದು ಹೇಳಿದ್ದೇವೆ.ಅದ್ಯಾಗ್ಯೂ ಬಂದ್ರೆ ಪ್ರತಿಬಂಧಕ ಕಾಯ್ದೆ ಜಾರಿ ಮಾಡುತ್ತೇವೆ.ಇಬ್ಬರು ಸಚಿವರು, ಮಹಾರಾಷ್ಟ್ರ ಹೈಪವರ್ ಕಮಿಟಿ ಅಧ್ಯಕ್ಷ ಧೈರ್ಯಶೀಲ್ ಮಾನೆ ಆಗಮನಕ್ಕೆ ಪಟ್ಟು.ಹಿಡಿದಿದ್ದು
ಗಡಿ ಭಾಗದಲ್ಲಿ ಎಸ್ಪಿ ನೇತೃತ್ವದಲ್ಲಿ ಬೀಗಿ ಭದ್ರತೆ ನಿಯೋಜನೆ ಮಾಡಿದ್ದೇವೆ.ಎಲ್ಲಾ ಗಡಿ ಭಾಗದಲ್ಲಿ ಭದ್ರತೆ ನಿಯೋಜನೆ.ಮಾಡಿದ್ದೇವೆ ಎಂದು ಬೆಳಗಾವಿ ಡಿಸಿ ಹೇಳಿದ್ದಾರೆ.

ನಾಳೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ್ರು ಬೆಳಗಾವಿಗೆ…

ಬೆಳಗಾವಿಗೆ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರುತ್ತಿರುವದನ್ನು ಖಂಡಿಸಿ ಮಹಾ ಸಚಿವರನ್ನು ಬೆಳಗಾವಿಗೆ ಬಾರದಂತೆ ಅವರನ್ನು ಗಡಿಯಲ್ಲೇ ಬಂಧಿಸುವಂತೆ ಆಗ್ರಹಿಸಿ ಕರವೇ ರಾಜ್ಯಾಧ್ಯಕ್ಷ ಟಿ‌ಎ ನಾರಾಯಣಗೌಡ್ರು ನಾಳೆ ಮಂಗಳವಾರ ಬೆಳಗಾವಿಗೆ ಆಗಮಿಸುತ್ತಿದ್ದಾರೆ.

ಸಾವಿರಾರು ಕರವೇ ಸೇನಾನಿಗಳು ನಾಳೆ ಬೆಳಗಾವಿಯಲ್ಲಿ ಬೃಹತ್ತ ಪ್ರತಿಭಟನೆ ನಡೆಸುವದರಬ ಜೊತೆಗೆ ಬಹಿರಂಗ ಸಭೆ ನಡೆಸಿ ಮಹಾರಾಷ್ಟ್ರದ ಮಂತ್ರಿಗಳನ್ನು ಬಂಧಿಸುವಂತೆ ಒತ್ತಾಯಿಸಲಿದ್ದಾರೆ.

ಫಡ್ನವೀಸ್ ಪ್ರತಿಕ್ರಿಯೆ

ಬೆಳಗಾವಿ ಗಡಿ ವಿವಾದ ಈಗ ಸರ್ವೋಚ್ಚ ನ್ಯಾಯಾಲಯದಲ್ಲಿದೆ,ಈ ವಿಚಾರವಾಗಿ ಕರ್ನಾಟಕ ಆಗಲಿ ಮಹಾರಾಷ್ಟ್ರ ಸರ್ಕಾರ ಆಗಲಿ ಯಾವುದೇ ನಿರ್ಧಾರ ಮಾಡಲು ಸಾಧ್ಯವಿಲ್ಲ, ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಹೋಗುವ ವಿಚಾರದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಅಂತಿಮ ನಿರ್ಣಯ ಕೈಗೊಳ್ಳುತ್ತಾರೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *