ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಎಲ್ಲಿಲ್ಲದ ಲಾಭಿ ನಡೆದಿದೆ. ಬೆಂಗಳೂರು ಮಟ್ಟದಲ್ಲಿ ಸೀಮೀತವಾಗಿದ್ದ ಲಾಭಿ ಈಗ ದೆಹಲಿಗೆ ತಲುಪಿದೆ.
ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಕಾಂಗ್ರೆಸ್ಸಿನ ಹಳೆಯ ಹುಲಿಗಳು, ಮತ್ತು ಹೊಸ,ಹೊಸ ಕಲಿಗಳು ಕಸರತ್ತು ನಡೆಸಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ.ಯಾಕಂದ್ರೆ ಕಾಂಗ್ರೆಸ್ಸಿನ ಹಳೆಯ ನಿಷ್ಠಾವಂತ ಕಾರ್ಯಕರ್ತ ಹಾಶಮ್ ಬಾವಿಕಟ್ಟಿ, ಕಾಂಗ್ರೆಸ್ಸಿನ ಹಿರಿಯ ನಾಯಕರಿಗೆ ಚಿರಪರಿಚಿತ, ಹೀಗಾಗಿ ಇವರು ದೆಹಲಿ ಮಟ್ಟದಲ್ಲಿ ಲಾಭಿ ನಡೆಸಿದ್ದು, ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿ ಈಬಾರಿ ಬೆಳಗಾವಿ ಉತ್ತರದಿಂದ ಸ್ಪರ್ದೆ ಮಾಡಲು ನನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಬೆಳಗಾವಿಯ ಹಾಶಮ್ ಭಾವಿಕಟ್ಟಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿರುವ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ತ್ ವೈರಲ್ ಆಗಿದೆ.
ಬೆಳಗಾವಿಯ ಮಾಜಿ ಶಾಸಕ ಶ್ಯಾಮ ಘಾಟಗೆ ಅವರೂ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಆಪ್ತರಾಗಿದ್ದು, ಹಾಶಮ್ ಭಾವಿಕಟ್ಟಿ ಮತ್ತು ಶ್ಯಾಮ್ ಘಾಟಗೆ ಒಟ್ಟಿಗೆ ಖರ್ಗೆ ಅವರನ್ಬು ಭೇಟಿಯಾಗಿರುವ ವಿಚಾರ ಈಗ ಬೆಳಗಾವಿಯ ಕಾಂಗ್ರೆಸ್ಸಿನಲ್ಲಿ ಮಿಂಚಿನ ಚರ್ಚೆಗೆ ಕಾರಣವಾಗಿದ್ದು ಸತ್ಯ.
ಬೆಳಗಾವಿ ಉತ್ತರದ ಮಾಜಿ ಶಾಸಕ ಫಿರೋಜ್ ಸೇಠ ಕೂಡಾ ಸುಮ್ಮನೆ ಕುಳಿತಿಲ್ಲ ಅವರೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಜೊತೆ ನಿಕಟ ಸಂಪರ್ಕ ಹೊಂದಿದ್ದು ಪೀರೋಜ್ ಸೇಠ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ.ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ಸಿನ ಮುಸ್ಲಿಂ ನಾಯಕರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತರಾಗಿರುವ ಅಜೀಂ ಪಟವೇಗಾರ,ಈಗಾಗಲೇ ಬೆಳಗಾವಿ ಉತ್ತರದಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ.ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಫಿರೋಜ್ ಸೇಠ,ಹಾಶಮ್ ಭಾವಿಕಟ್ಟಿ ಮತ್ತು ಅಜೀಂ ಪಟವೇಗಾರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ಕಾಂಗ್ರೆಸ್ ಹೈಕಮಾಂಡ ಈ ಬಾರಿ ಬೆಳಗಾವಿ ಉತ್ತರದಿಂದ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಲಿದೆ ಎನ್ನುವ ಸುದ್ದಿಯೂ ಸಾಕಷ್ಟು ಪ್ರಚಾರ ಪಡೆದಿದೆ. ಒಂದು ವೇಳೆ ಇದೇ ವಿಚಾರ ಅಂತಿಮವಾಗಿ ನಿರ್ಣಯವಾದಲ್ಲಿ ಈ ಕ್ಷೇತ್ರದಿಂದ ಕಿರಣ ಸಾಧುನವರ ಮತ್ತು ವಿನಯ ನಾವಲಗಟ್ಟಿ ನಡುವೆ ಪೈಪೋಟಿ ನಡೆಯಯವದರಲ್ಲಿ ಎರಡು ಮಾತಿಲ್ಲ.ಬೆಳಗಾವಿ ಉತ್ತರದ ಟಿಕೆಟ್ ವಿಚಾರ ಈ ಬಾರಿ ಕಾಂಗ್ರೆಸ್ ನಾಯಕರಿಗೆ ಕಬ್ಬಿಣದ ಕಡಲೆ ಆಗುವದರಲ್ಲಿ ಸಂಶಯವೇ ಇಲ್ಲ.ಕಾಂಗ್ರೆಸ್ ಹೈಕಮಾಂಡ್ ಬೆಳಗಾವಿ ಉತ್ತರದಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆಯೋ ಅಥವಾ ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸುತ್ತದೆಯೋ ಅನ್ನೋದನ್ನು ಕಾಯ್ದು ನೋಡಬೇಕಷ್ಟೆ.