ಬೆಳಗಾವಿ -ಮ್ಯಾಂಡೌಸ್ ಸೈಕ್ಲೋನ್ ಎಫೆಕ್ಟ್ ಬೆಳಗಾವಿಯಲ್ಲೂ ಆಗಿದೆ,ಬೆಳಗ್ಗೆಯಿಂದ ಬೆಳಗಾವಿ ನಗರದಲ್ಲಿ ಮೋಡಕವಿದ ವಾತಾವರಣವಿತ್ತು ಸಂಜೆ ಹೊತ್ತಿಗೆ ಜಿಟಿ ಜಿಟಿ ಮಳೆ ಸುರಿದಿದೆ.
ಬೆಳಗಾವಿ ನಗರದಲ್ಲಿ ಸಂಜೆ ಹೊತ್ತಿಗೆ ಸುರಿದ ಜಿಟಿ,ಜಿಟಿ ಮಳೆಗೆ ಬೆಳಗಾವಿಯ ಜನ ತತ್ತರಿಸಿ ಹೋಗಿದ್ದಾರೆ.ಶೀಥಗಾಳಿ,ಸುರಿದ ಮಳೆಯಿಂದಾಗಿ ಬೆಳಗಾವಿಯಲ್ಲಿ ಸಿಕ್ಕಾಪಟ್ಟೆ ಥಂಡಿ ಇತ್ತು,ಬೀದಿ ವ್ಯಾಪಾರಿಗಳು ತಳ್ಳುವ ಗಾಡಿಯ ರಸ್ತೆ ಬದಿಯ ವ್ಯಾಪಾರಿಗಳು ಆಕಸ್ಮಿಕವಾಗಿ ಸುರಿದ ಮಳೆಯಿಂದಾಗಿ ಪರದಾಡುವಂತಾಯಿತು.
ಬೆಳಗಾವಿ ನಗರದ ಎಲ್ಲೆಡೆ ರಸ್ತೆ ಕಾಮಗಾರಿಗಳು ನಡೆಯುತ್ತಿವೆ.ಜಿಟಿ ಜಿಟಿ ಮಳೆಯಿಂದಾಗಿ ರಸ್ತೆಗಳು ಕೆಸರುಮಯವಾಗಿವೆ.ಕೇವಲ ದಕ್ಷಿಣ ಕರ್ನಾಟಕದಲ್ಲಿ ಅನಾಹುತ ಸೃಷ್ಠಿಸಿದ್ದ ಮ್ಯಾಂಡೌಸ್ ಚಂಡಮಾರುತ ಗಡಿಜಿಲ್ಲೆ ಬೆಳಗಾವಿಯಲ್ಲೂ ಪರಿಣಾಮ ಬೀರಿದ್ದು,ಈ ಸೈಕ್ಲೋನ್ ಇನ್ನೆರಡು ದಿನ ತನ್ನ ಚೆಲ್ಲಾಟ ಮುಂದುವರೆಸಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ