ಸಕ್ಕರೆ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲೆಯ ಪ್ರತಿಷ್ಢಿತ ನಾಯಕರ ಒಡೆತನದ ಸಕ್ಕರೆ ಕಾರ್ಖಾನೆಗಳ ಮೇಲೆ ಅಳತೆ ಮತ್ತು ಮಾಪನ ಇಲಾಖೆ ದಾಳಿ ಮಾಡಿದೆ,ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮತ್ತು ರಮೇಶ್ ಜಾರಕಿಹೊಳಿ ಒಡೆತನದ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆದಿದೆ.ದಾಳಿ ಮಾಡಿರುವ ಬಗ್ಗೆ ಸಕ್ಕರೆ ಆಯುಕ್ತರು ಪತ್ರಿಕಾ ಪ್ರಕಟಣೆ ಹೊರಡಿದ್ದರು, ಆದ್ರೆ ದಾಳಿಯ ನಂತರ ಯಾವ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸ ಆಗುತ್ತಿದೆ ಎನ್ನುವದರ ಬಗ್ಗೆ ಮಾಹಿತಿ ನೀಡಿಲ್ಲ.ಹೀಗಾಗಿ ಪ್ರತಿಷ್ಠಿತ ನಾಯಕರ ಬಗ್ಗೆ ಸಾರ್ವಜನಿಕರು ಅನುಮಾನದಿಂದ ನೋಡುವಂತಾಗಿದೆ.ದಾಳಿ ಮಾಡಿದ ಬಗ್ಗೆ ಸಕ್ಕರೆ ಆಯುಕ್ತರು ಪ್ರಕಟಣೆ ಹೊರಡಿದ್ದರು,ಆದ್ರೆ ಮುಂದೇನಾಯ್ತು ಅನ್ನೋದರ ಬಗ್ಗೆ ಇನ್ನೂ ಮೆಸ್ಸೇಜ್ ಬಂದಿಲ್ಲ.
ಬೆಳಗಾವಿ: ರಾಜ್ಯದ ೨೧ ಸಕ್ಕರೆ ಕಾರ್ಖಾನೆಗಳ ಮೇಲೆ ಅಳತೆ ಮತ್ತು ಮಾಪನಾ ಇಲಾಖೆ ವತಿಯಿಂದ ಏಕಕಾಲಕ್ಕೆ ದಾಳಿ ನಡೆಸಿ, ಕಬ್ಬು ವಾಹನಗಳ ತೂಕದಲ್ಲಿ ಮೋಸ ತಡೆಗೆ ಪ್ರಯತ್ನಿಸಲಾಗಿದೆ ನಿಜ. ಆದರೆ, ದಾಳಿ ಬಳಿಕ ಮುಂದೇನಾಯ್ತು?, ಯಾವ ಕಾರ್ಖಾನೆ ವಿರುದ್ಧ ಕೇಸ್ ದಾಖಲಾಯ್ತಾ? ಇದು ಕಾಟಾಚಾರದ ದಾಳಿಯೋ? ಎಂಬ ಅನುಮಾನ ಮೂಡುತ್ತಿದೆ.
ಬಹುತೇಕ ಸಕ್ಕರೆ ಕಾರ್ಖಾನೆಗಳು ಪ್ರಭಾವಿ ರಾಜಕಾರಣಿಗಳ ಹಿಡಿತದಲ್ಲಿವೆ ಎಂದು ಬೇರೆ ಹೇಳಬೇಕಿಲ್ಲ. ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ರೈತರಿಂದ ವ್ಯಾಪಕ ದೂರು ಕೇಳಿಬಂದಿತ್ತು. ಸರ್ಕಾರ ಅಂತೂ ಸಕ್ಕರೆ ಕಾರ್ಖಾನೆಗಳ ಮೇಲೆ ಏಕಕಾಲಕ್ಕೆ ಅಳತೆ ಮತ್ತು ಮಾಪನಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಬರೋಬ್ಬರಿ ೨೧ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.
ದಾಳಿಯ ಬಗ್ಗೆ ಅಳತೆ ಮತ್ತು ಮಾಪನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡದಿರುವುದು ದಾಳಿಯ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಿದೆ. ಪ್ರಭಾವಿ ರಾಜಕಾರಣಿಗಳ ಹಿಡಿತದಲ್ಲಿರುವ ಸಕ್ಕರೆ ಕಾರ್ಖಾನೆಗಳ ಮಾನ ಹರಾಜು ಹಾಕಿದ್ದಂತೂ ಸುಳ್ಳಲ್ಲ. ರೈತರ ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿರುವ ಬಗ್ಗೆ ಮೊದಲಿನಿಂದಲೂ ದೂರುಗಳು ಕೇಳಿಬರುತ್ತಿದ್ದವು.
ಈ ಹಿನೆಲೆಯಲ್ಲಿ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ ಆಯುಕ್ತ ಶಿವಾನಂದ ಕಲಕೇರಿ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಲಾಗಿದೆ. ಆದರೆ, ಯಾವ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸವಾಗುತ್ತಿದೆ. ಯಾವ ಕಾರ್ಖಾನೆಗಳಲ್ಲಿ ಪಾರದರ್ಶಕವಗಿ ತೂಕ ಮಾಡಲಾಗುತ್ತಿದೆ ಎಂಬುದರ ಕುರಿತು ಮಾಹಿತಿ ನೀಡದೇ ಇರುವುದು ರೈತರ ಮೂಗಿಗೆ ತುಪ್ಪ ಸವರುವ ತಂತ್ರ ಅಲ್ಲದೇ ಮತ್ತೇನು ಎನ್ನುವುದು ಕಬ್ಬು ಬೆಳೆಗಾರರ ಪ್ರಶ್ನೆ.