ಬೆಳಗಾವಿ-ಸರ್ಕಾರಿ ವಾಹನದ ಮೇಲೆ ಕಲ್ಲು ತೂರಿದ್ದ ಪ್ರಕರಣಕ್ಕೆ ಟ್ವಿಸ್ಟ್ ಪಡೆದಿದೆ,ಕುಡಿದ ಅಮಲಿನಲ್ಲಿಬುಲೆರೋ ವಾಹನ ಅಪಘಾತ ಮಾಡಿ ಬೆಳಗಾವಿಯ ಸುವರ್ಣವಿಧಾನಸೌಧದ ಬಳಿ ನನ್ನ ವಾಹನದ ಮೇಲೆ ಮರಾಠಿ ಭಾಷಿಕರು ಕಲ್ಲು ತೂರಾಟ ಮಾಡಿ ವಾಹನ ಜಖಂ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದ ಚಾಲಾಕಿ ಚಾಲಕನ ನಿಜ ಬಣ್ಣವನ್ನು ಹಿರೇಬಾಗೇವಾಡಿ ಪೋಲೀಸರು ಬಯಲು ಮಾಡಿದ್ದಾರೆ.
ಕಟ್ಟು ಕಥೆ ಕಟ್ಟಿದ ಡ್ರೈವರ್ ಚೇತನ್ ವಿಚಾರಿಸಿದ ಹಿರಿಯ ಪೋಲೀಸ್ ಅಧಿಕಾರಿಗಳು ಸತ್ಯಾಂಶವನ್ನು ಹೊರಹಾಕಿದ್ದಾರೆ.ಬೆಳಗಾವಿಯ ಸುವರ್ಣ ಸೌಧದ ಬಳಿ ಮರಾಠಿ ಭಾಷಿಕರು ಕಲ್ಲು ತೂರಿದ್ರೂ ಅಂತಾ ಹೇಳಿದ್ದ ಚೇತನ್ ಹಿರೇಬಾಗೇವಾಡಿ ಠಾಣೆಯಲ್ಲಿ ಬುಲೇರೋ ಚಾಲಕ ಚೇತನ್ ದೂರು ನೀಡಿದ್ದ,ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಹಿರೇಬಾಗೇವಾಡಿ ಪೊಲೀಸರು ಚೇತನ ಕಟ್ಟಿದ ಕಟ್ಟು ಕಥೆ ಕೇಳಿ ಪೋಲೀಸ್ರು ಬೆಚ್ಚಿಬಿದ್ದಿದ್ದಾರೆ.
ತನಿಖೆ ವೇಳೆ ಸರ್ಕಾರಿ ಕಾರು ಚಾಲಕ ಚೇತನ್ ಆಡಿದ್ದ ನಾಟಕ ಬಯಲಿಗೆ ಬಂದಿದೆ.ಅಧಿವೇಶನ ಕರ್ತವ್ಯಕ್ಕೆಂದು ಚಾಮರಾಜಪೇಟೆಯಿಂದ ಬೆಳಗಾವಿಗೆ ಬರ್ತಿದ್ದ ಡ್ರೈವರ್ ಚೇತನ್ಬೆಳಗಾವಿ ಬರುವ ಪೂರ್ವದಲ್ಲೇ ಬುಲೆರೋ ವಾಹನ ಅಪಘಾತ ಮಾಡಿದ್ದಾನೆ.ಈ ವೇಳೆ ವಾಹನದ ಮುಂಭಾಗದ ಗಾಜು ಜುಖಂ ಆಗಿತ್ತು,ಸುವರ್ಣ ಸೌಧ ಪೂರ್ವದಲ್ಲಿ ಬರುವ ಹಿರೇಬಾಗೇವಾಡಿ ಟೋಲ್ ನಲ್ಲಿ ಕಾರಿನ ಗಾಜು ಜಖಂ ಆಗಿರುವುದು ಬಯಲಿಗೆ ಬಂದಿದೆ.
ಹಿರೇಬಾಗೇವಾಡಿ ಟೋಲ್ ಸಿಸಿ ಕ್ಯಾಮರಾದಲ್ಲಿ ಕಾರಿನ ಗಾಜು ಜಖಂ ಆಗಿರುವುದು ಬಯಲಿಗೆ ಬಂದಿದ್ದು
ಸಿಸಿಟಿವಿ ಆಧರಿಸಿ ಡ್ರೈವರ್ ಚೇತನ್ ವಿಚಾರಿಸಿದಾಗ ತಾನೇ ಅಪಘಾತ ಮಾಡಿರುವುದಾಗಿ ಪೋಲೀಸರ ಎದುರು ಒಪ್ಪಿಕೊಂಡಿದ್ದಾನೆ.ಸುಳ್ಳು ದೂರು ನೀಡಿದ ಚಾಲಕನ ವಿರುದ್ಧ ಸೂಕ್ತ ಕ್ರಮಕ್ಕೆ ಪೋಲೀಸ್ರು ಮುಂದಾಗಿದ್ದಾರೆ.
ಸರ್ಕಾರಿ ವಾಹನ ಅಪಘಾತಕ್ಕೀಡಾದರೆ, ಅದಕ್ಕೆ ಇಲಾಖೆಯ ಅಧಿಕಾರಿಗಳಿಗೆ ಉತ್ತರ ಕೊಡಬೇಕಾಗುತ್ತದೆ.ಎಂದು ಹೆದರಿ,ಬೆಳಗಾವಿಯಲ್ಲಿ ಕನ್ನಡ ಮರಾಠಿಗರ ಜಗಳ ನಡೆಯುತ್ತದೆ.ಮರಾಠಿಗರು ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ರೆ ತಾನು ಬಚಾವ್ ಆಗ್ತೇನಿ ಅಂತಾ ಪ್ಲ್ಯಾನ್ ಮಾಡಿದ್ದ ಚೇತನ್ ಕೊನೆಗೂ ಪೋಲೀಸ್ರ ಎದುರು ತಪ್ಪು ಮಾಡಿರುವದಾಗಿ ಒಪ್ಪಿಕೊಂಡಿದ್ದಾನೆ.