ಬೆಳಗಾವಿ- ನಾಳೆ,ಡಿ.19ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದ್ದುಅಧಿವೇಶನದ ದಿನವೇ ಎಂಇಎಸ್ ಮಹಾಮೇಳಾವ್ ಆಯೋಜನೆ ಮಾಡಿದೆ,ಮಹಾಮೇಳಾವ್ ನಡೆಯುವ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ಸ್ಥಳ ಪರಶೀಲನೆ ಮಾಡಿದ್ದಾರೆ.
ಬೆಳಗಾವಿಯ ಟೀಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಮರಾಠಿ ಮೇಳಾವ್ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮಕ್ಕೆ ಪೊಲೀಸ್ ಭದ್ರತೆ ಸೇರಿದಂತೆ ಜಾಗ ಪರಿಶೀಲನೆ ಮಾಡಿದ ಎಡಿಜಿಪಿ ಅಲೋಕ್ ಕುಮಾರ್
ಸಿಸಿಟಿವಿ ಕ್ಯಾಮರಾ ಅಳವಡಿಸಿ, ಡ್ರೋಣ್ ಕಣ್ಗಾವಲು ಇರಿಸುವಂತೆ ಸೂಚನೆ ನೀಡಿದ್ದಾರೆ.ಮಹಾಮೇಳಾವ್ ಕಾರ್ಯಕ್ರಮಕ್ಕೆ ಬೆಳಗಾವಿಗೆ ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ಆಗಮಿಸುವ ವಿಚಾರವಾಗಿ ಸುದ್ದಿವಾಹಿನಿವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅಲೋಕ್ ಕುಮಾರ್,ಸಂಸದ ಧೈರ್ಯಶೀಲ ಮಾನೆಗೆ ಬೆಳಗಾವಿ ಗಡಿ ಪ್ರವೇಶಕ್ಕೆ ಅನುಮತಿ ನೀಡಲ್ಲಾ ಎಂದು ಹೇಳಿದ್ದಾರೆ.
ಬೆಳಗಾವಿ ಜನ ಮಹಾಮೇಳಾವ್‌ಗೆ ಬಂದ್ರೇ ನಾವು ತಡಿಯೋದಿಲ್ಲ.ಹೊರಗಡೆಯಿಂದ ಜನ ಬಂದ್ರೇ ಅದಕ್ಕೆ ನಾವು ಅನುಮತಿ ನೀಡುವುದಿಲ್ಲ.
ಮಹಾರಾಷ್ಟ್ರದಿಂದ ಬರುವ ಯಾರಿಗೂ ನಾಳೆ ಬೆಳಗಾವಿ ಪ್ರವೇಶಕ್ಕೆ ಅನುಮತಿ ಇಲ್ಲಾ ಎಂದು ಎಡಿಜಿಪಿ ಹೇಳಿದ್ದಾರೆ.
ಈಗಾಗಲೇ ಗಡಿಯಲ್ಲಿ 21ಚೆಕ್ ಪೋಸ್ಟ್ ನಿರ್ಮಿಸಿ ಬಂದೋಬಸ್ತ್.ಓರ್ವ ಎಸ್‌ಪಿ, ಮೂರು ಜನ ಡಿಎಸ್‌ಪಿ, ಆರು ಜನ ಸಿಪಿಐ, ಎಂಟು ಜನ ಎಎಸ್ಐ, ಎರಡು ಕೆಎಸ್‌ಆರ್‌ಪಿ ತುಕಡಿ, ಎರಡು ಸಿಎಆರ್ ತುಕಡಿ ಸೇರಿ 230ಜನ ಪೊಲೀಸ್ ಸಿಬ್ಬಂದಿ ನೇಮಕ.
ಅಧಿವೇಶನಕ್ಕೆ ಐದು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಿದ್ದೇವೆ.ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕಾನೂನು ಕೈಗೆ ತೆಗೆದುಕೊಳ್ಳದಂತೆ ಎಲ್ಲಾ ಮುಂಜಾಗ್ರತೆ ತೆಗೆದುಕೊಂಡಿದ್ದೇವೆ.ಇಂದು ಸಂಜೆ ಬೆಳಗಾವಿ ನಗರದಲ್ಲಿ ರೂಟ್ ಮಾರ್ಚ್ ಕೂಡ ಮಾಡಲಾಗುವುದು.
ಈ ಮೂಲಕ ಶಾಂತಿ ಕದಡುವವರಿಗೆ ಖಡಕ್ ಸಂದೇಶ್ ರವಾನಿಸುತ್ತೇವೆ.ಎಂದು ಎಡಿಜಿಪಿ ತಿಳಿಸಿದ್ದಾರೆ