ಬೆಳಗಾವಿಯಲ್ಲಿ ಸದನ…
ಮಹಾರಾಷ್ಟ್ರದಲ್ಲಿ ಕದನ…!!
ಬೆಳಗಾವಿ- ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶದಲ್ಲಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಮಹಾರಾಷ್ಡ್ರದ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲಿಯೇ ಅತ್ತ ಮಹಾರಾಷ್ಟ್ರದ ನಾಗಪೂರದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಹಾರಾಷ್ಟ್ರದ ನಾಯಕರು ಕರ್ನಾಟಕದ ವಿರುದ್ಧ ತಿರುಗಿಬಿದ್ದಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಪುಂಡ ನಾಯಕರ ಮತ್ತೊಂದು ತಗಾದೆ ತೆಗೆದಿದ್ದಾರೆ.ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗಡಿ ವಿಚಾರವಾಗಿ ಚರ್ಚೆ ನಡೆಸಿದ್ದಾರೆ.
ಈ ವೇಳೆ ಬೆಳಗಾವಿ ಎಂಇಎಸ್ ಪರವಾಗಿಯೂ ಕೆಲವರಿಂದ ಚರ್ಚೆ ನಡೆದಿದೆ.ಕರ್ನಾಟಕಕ್ಕೆ ಮಹಾರಾಷ್ಟ್ರ ಜಲಾಶಯದಿಂದ ನೀರು ಕೊಡದಂತೆ ಉದ್ಧಟತನದ ಹೇಳಿಕೆ ನೀಡುವ ಮೂಲಕ ಮಹಾರಾಷ್ಟ್ರದ ನಾಯಕರು ಪುಂಡಾಟಿಕೆ ಮುಂದುವರೆಸಿದ್ದಾರೆ.
ಗಡಿ ವಿವಾದ ಆಯ್ತು ಜಲ ವಿವಾದ ಸೃಷ್ಟಿಸಲು ಮಹಾ ಪುಂಡ ನಾಯಕರ ಯತ್ನಿಸಿದ್ದು,ಮಹಾರಾಷ್ಟ್ರದ ಚಳಿಗಾಲದ ಅಧಿವೇಶನದಲ್ಲಿಮಹಾರಾಷ್ಟ್ರ ಸದನದಲ್ಲಿ ಕರ್ನಾಟಕ ಸಿಎಂ ಬಸವರಾಜ ಬೋಮ್ಮಾಯಿಗೆ ಅಪಮಾನ ಮಾಡಿದ್ದಾರೆ.
ಮಾಜಿ ಸಚಿವ, ಎನಸಿಪಿ ಶಾಸಕ ಜಯಂತ ಪಾಟೀಲ್ ರಿಂದ ಈ ಕೃತ್ಯ ನಡೆದಿದೆ.ಕರ್ನಾಟಕ ಮುಖ್ಯಮಂತ್ರಿ ಯಾವ ಭಾಷೆಯಲ್ಲಿ ಮಾತಾಡ್ತಾರೆ.ಅವರಿಗೆ ಅದೇ ಭಾಷೆಯಲ್ಲಿ ಮಹಾರಾಷ್ಟ್ರ ಉತ್ತರ ಕೊಡಬೇಕಿದೆ.ಕರ್ನಾಟಕ ಮುಖ್ಯಮಂತ್ರಿಗೆ ತುಂಬಾನೇ ಸೊಕ್ಕು ಬಂದಿದೆ.
ಕರ್ನಾಟಕಕ್ಕೆ ಮಹಾರಾಷ್ಟ್ರ ತಕ್ಕ ಪಾಠ ಕಲಿಸಬೇಕಿದೆ ಎಂದು ಜಯಂತ ಪಾಟೀಲ ಪುಂಡಾಟಿಕೆಯ ಹೇಳಿಕೆ ನೀಡಿದ್ದಾರೆ.
ಇದೇ ಜಯಂತ ಪಾಕರ್ನಾಟಕಕ್ಕೆ,ಮಹಾರಾಷ್ಟ್ರದಿಂದ ನದಿ ನೀರು ಕೊಡದಂತೆ ಧಮ್ಕಿ ಹಾಕಿದ್ದುಮಹಾರಾಷ್ಟ್ರದ ಕೊಯ್ನಾ, ವಾರಣಾ, ಕೊಲ್ಲಾಪುರ ಜಿಲ್ಲೆಯ ಅಣೆಕಟ್ಟುಗಳ ಎತ್ತರ ಹೆಚ್ಚಿಸಿ ಕರ್ನಾಟಕಕ್ಕೆ ನೀರು ಬಿಡಬೇಡಿ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ.
ಮಹಾರಾಷ್ಟ್ರ ನದಿ ನೀರು ನಮ್ಮ ಕೈಯಲ್ಲಿದೆ.
ಆಣೆಕಟ್ಟುಗಳ ಎತ್ತರ ಹೆಚ್ಚಿಸುವಂತೆ ಹೇಳುವ ಮೂಲಕ ಕರ್ನಾಟಕಕ್ಕೆ ನೀರು ಬಿಡದಂತೆ ಹೇಳಿದ ಜಯಂತ ಪಾಟೀಲ್ ಪುಂಡಾಟಿಕೆ ಪ್ರದರ್ಶಿಸಿದ್ದಾರೆ.