ಬೆಳಗಾವಿ-ಡಿಸಬರ್ 19 ರಿಂದ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನ ಇಂದು ಸಂಜೆ 5 ಗಂಟೆಗೆ ಮುಕ್ತಾಯವಾಗುವ ಸಾಧ್ಯತೆ ಇದೆ.
ಈ ಬಾರಿಯ ಚಳಿಗಾಲದ ಅಧಿವೇಶನ ಗದ್ದಲ ಗಲಾಟೆ ಇಲ್ಲದೇ ಅತ್ಯಂತ ಶಾಂರವಾಗಿ ನಡೆಯಿತು. ಸದನದ ಒಳಗೆ ಫೈಟ್ ನಡೆಯದಿದ್ದರೂ ಸದನದ ಹೊರಗೆ ವಿವಿಧ ಸಮಾಜಗಳು ಮೀಸಲಾತಿಗಾಗಿ ನಡೆಸಿದ ಹೋರಾಟಗಳು ಸರ್ಕಾರಕ್ಕೆ ಸವಾಲ್ ಆಗಿದ್ದು ನಿಜ.
ಪಂಚಮಸಾಲಿ ಸಮಾಜದ ಶ್ರೀಗಳು 2 ಎ ಮೀಸಲಾತಿಗಾಗಿ ನಡೆಸಿದ ಹೋರಾಟ ಬೆಳಗಾವಿಯಲ್ಲಿ ದಾಖಲೆ ನಿರ್ಮಿಸಿದ್ದು ಈ ಕುರಿತು ಸರ್ಕಾರ ಮಹತ್ವದ ನಿರ್ಣಯ ಕೈಗೊಳ್ಳಲಿದೆ. ಅದಕ್ಕಾಗಿಯೇ ಇಂದು ಸಂಜೆ ಸಚಿವ ಸಂಪುಟದ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಹಲವು ಮಹತ್ವದ ನಿರ್ಣಯಗಳನ್ನು ಸಚಿವಸಂಪುಟದ ಸಭೆಯಲ್ಲಿ ಕೈಗೊಳ್ಳಲಿದೆ,ಎಂದು ಹೇಳಲಾಗುತ್ತಿದೆ.
ಈ ರಾಜ್ಯದ ಲಕ್ಷಾಂತರ ಪಂಚಮಸಾಲಿ ಬಂಧುಗಳು ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಇವತ್ತಿನ ದಿನ ಐತಿಹಾಸಿಕ ದಿನವಾಗುವ ಎಲ್ಲ ಲಕ್ಷಣಗಳು ಕಂಡುಬಂದಿವೆ.ಕ್ರಿಕೆಟ್ ಪ್ರೇಮಿಗಳು ಯಾವರೀತಿ ವಿಶ್ವಕಪ್ ಪೈನಲ್ ಮ್ಯಾಚ್ ನೋಡುತ್ತಾರೆಯೋ ಅದೇ ರೀತಿಯಲ್ಲಿ ಪಂಚಮಸಾಲಿ ಬಂಧುಗಳು ಸರ್ಕಾರ ಮೀಸಲಾತಿ ವಿಚಾರದಲ್ಲಿ ಯಾವರೀತಿಯ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವದನ್ನು ಕಾಯುತ್ತಿದ್ದಾರೆ.
ಪಂಚಮಸಾಲಿ ಸಮಾಜದ ಪಾಲಿಗೆ ಇವತ್ತಿನ ದಿನ ಸಮಾಜದ ಭವಿಷ್ಯವನ್ನು ರೂಪಿಸುವ ದಿನವಾಗಿದ್ದು ಸರ್ಕಾರದ ಪಾಲಿಗೆ ಇವತ್ತಿನ ದಿನ ಅಗ್ನಿಪರೀಕ್ಷೆಯ ದಿನವಾಗಿದ್ದು ಸತ್ಯ.ಒಟ್ಟಾರೆ ಸರ್ಕಾರ ವಿವಿಧ ಸಮಾಜಗಳ ಮೀಸಲಾತಿ ಹೋರಾಟಗಳನ್ನು ಎದುರಿಸಿ,ಚಳಿಗಾಲದ ಅಧಿವೇಶನ ಮುಗಿಸಿ ಇಂದು ಸಂಜೆ ಗಂಟುಮೂಟೆ ಕಟ್ಟುಕೊಂಡು ಬೆಂಗಳೂರಿಗೆ ವಾಪಸ್ ಹೋಗಲಿದೆ.