Breaking News

ನೀವು ನಂಬ್ತೀರಾ ? ಈ ಕಟ್ಟಡ ಇರೋದು ಬೆಳಗಾವಿಯಲ್ಲಿ,

ಬೆಳಗಾವಿ-ಬೆಳಗಾವಿ ಮಹಾನಗರ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ.ಸ್ವಾತಂತ್ರ್ಯ ಪೂರ್ವದಲ್ಲೇ ಜಾಗತಿಕ ಭೂಪಟದಲ್ಲಿ ಮಿಂಚಿದ್ದ ಈ ನಗರದಲ್ಲಿ ಐತಿಹಾಸಿಕ ಘಟನೆಗಳನ್ನು ಇವತ್ತಿನ ಪೀಳಿಗೆ ಸ್ಮರಿಸುವಂತಹ ಅನೇಕ ಪ್ರಾಚೀನ ಕಟ್ಟಡಗಳು ಬೆಳಗಾವಿ ನಗರದಲ್ಲಿವೆ.

ಹತ್ತೊಂಬತ್ತರ ದಶಕದಲ್ಲಿ ದೇಶದಲ್ಲಿ ಅನೇಕ ಮಹಾಮಾರಿ ರೋಗಗಳು ಮರಣಮೃದಂಗ ನಡೆಸಿದ ಸಂಧರ್ಭದಲ್ಲಿ ದೇಶದ ಅನೇಕ ಭಾಗಗಳಲ್ಲಿ ವ್ಯಾಕ್ಸೀನ ತಯಾರಿಸುವ ಘಟಕಗಳನ್ನು ನಿರ್ಮಿಸಲಾಯಿತು.ಅದೇ ಸಂಧರ್ಭದಲ್ಲಿ ಬೆಳಗಾವಿಯ ತಿಲಕವಾಡಿ ಪ್ರದೇಶದಲ್ಲಿ ವ್ಯಾಕ್ಸೀನ್ ಡಿಪೋ ಮಾಡಲಾಗಿತ್ತು.ಈ ಡಿಪೋ ನೋಡಿದ್ರೆ ಹತ್ತೊಂಬತ್ತನೇಯ ಶತಮಾನದಲ್ಲಿ ಕರಾಳ ಕಹಾನಿ ಕಣ್ಣೆದುರಿಗೆ ಬಂದಂತಾಗುತ್ತದೆ.

ವ್ಯಾಕ್ಸೀನ್ ಡಿಪೋದಲ್ಲಿಬ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿಗಳಿಗಾಗಿ 1906 ರಲ್ಲಿ ಗೆಸ್ಟ್ ಹೌಸ್ ನಿರ್ಮಿಸಲಾಗಿತ್ತು ಒಂದು ಶತಮಾನದ ಹಿಂದೆ ನಿರ್ಮಿಸಲಾಗಿದ್ದ ಈ ವೆಸ್ಟ್ ಹೌಸ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.ಹಸಿರುಮಯವಾದ ನಿಸರ್ಗದಲ್ಲಿ,ಗಿಡಮರಗಳ ನಡುವೆ,ಹಕ್ಕಿಗಳ ಚಿಲಿಪಿಲಿ ಕೇಳುವ ಪರಿಸರದಲ್ಲಿ ಈ ಗೆಸ್ಟ್ ಹೌಸ್ ನಿರ್ಮಿಸಲಾಗಿತ್ತು.1980 ರ ದಶಕದಲ್ಲಿ ಈ ಕಟ್ಟಡ, ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿಗಳ ನಿವಾಸವಾಗಿತ್ತು.ಆದ್ರೆ ಕಳೆದ ಒಂದೆರಡು ದಶಕದಿಂದ ಈ ಕಟ್ಟಡ ಸಂಪೂರ್ಣವಾಗಿ ಭೂತಬಂಗಲೆಯಾಗಿತ್ತು.ಈ ಕಟ್ಟಡ ಈಗ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರ ದೃಷ್ಟಿಗೆ ಬಿದ್ದಿದೆ‌.ಹೀಗಾಗಿ ಈ ಕಟ್ಟಡ ಈಗ ನವೀನ ಸ್ವರೂಪ ಪಡೆಯುತ್ತಿದೆ.

ಶಾಸಕ ಅಭಯ ಪಾಟೀಲ ಅವರು ಈ ಪ್ರಾಚೀನ ಕಟ್ಟಡವನ್ನು ಶಾಸಕರ ಅನುದಾನದಲ್ಲಿ 90 ಲಕ್ಷ ರೂ ಅನುದಾನದಲ್ಲಿ ನವೀಕರಣ ಮಾಡುತ್ತಿದ್ದಾರೆ . ಕಟ್ಟಡದ ನವೀಕರಣ ಕಾಮಗಾರಿ ಭರದಿಂದ ಸಾಗಿದ್ದು ಮಾರ್ಚನಲ್ಲಿ ಕಾಮಗಾರಿ ಮುಗಿದು ಪ್ರಾಚೀನ ಕಟ್ಟಡಕ್ಕೆ ಹೊಸ ಲುಕ್ ಬರಲಿದೆ.ಈ ಕಟ್ಟಡವನ್ನು ಸಂಪೂರ್ಣವಾಗಿ ಕರಿ ಬಣ್ಣದ ಕಲ್ಲುಗಳಿಂದ ಕಟ್ಟಲಾಗಿದೆ.ಈ ಕಟ್ಟಡದ ಪ್ರಾಚೀನತೆಗೆ ಧಕ್ಕೆ ಆಗದಂತೆ ನವೀಕರಣ ಮಾಡಲಾಗುತ್ತಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *