Breaking News

ಫೈರೀಂಗ್ ಪ್ರಕರಣ ಮೂರು ಜನ ಆರೋಪಿಗಳ ಅರೆಸ್ಟ್

ಬೆಳಗಾವಿ-ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಮೇಲೆ ನಡೆದ ಫೈರಿಂಗ್ ಪ್ರಕರಣವನ್ನು ಬೆಳಗಾವಿ ಪೋಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ನಗರ ಪೋಲೀಸ್ ಆಯುಕ್ತರು ನಿನ್ನೆ ರಾತ್ರಿ ಘಟನೆ ನಡೆದ ತಕ್ಷಣ ನಾಲ್ಕು ತಂಡಗಳನ್ನು ರಚಿಸಿ ತನಿಖೆಗೆ ಸೂಚನೆ ನೀಡಿದ್ದರು.ಬೆಳಗಾವಿ ನಗರ ಪೊಲೀಸರ ಶೀಫ್ರ ಕಾರ್ಯಾಚರಣೆಯಿಂದಾಗಿ
ಮೂರು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ನಗರ ಪೋಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರು ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಘಟನೆ ನಡೆದ 18 ಗಂಟೆಯಲ್ಲಿ ಬೆಳಗಾವಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ಪ್ರಕರಣ ರಾಜಕೀಯ ತಿರುವು ಪಡೆಯುವ ಮೊದಲೇ ಆರೋಪಿಗಳ ಬಂಧನವಾಗಿದೆ.ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಮೇಲೆ ಫೈರಿಂಗ್.
ನಿನ್ನೆ ಸಂಜೆ 7.30 ರಿಂದ 7.45ರ ಮದ್ಯದಲ್ಲಿ ನಡೆದಿದ್ದ ಪೈರಿಂಗ್ ಪ್ರಕರಣ.

ಘಟನೆಯ ಹಿನ್ನಲೆ…..

ಬೆಳಗಾವಿ- ನಿನ್ನೆ ಶನಿವಾರ ರಾತ್ರಿ, ಹಿಂದೂ ಸಂಘಟನೆಯ ಕಾರ್ಯಕರ್ತ ರವಿ ಕೋಕಿತ್ಕರ್ ಅವರ ಮೇಲೆ ನಡೆದ ಗುಂಡಿನದಾಳಿ ಪ್ರಕರಣಕ್ಕೆ ಸಮಂಧಿಸಿದಂತೆ ಬೆಳಗಾವಿ ಪೋಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಶೂಟೌಟ್ ಘಟನೆಯಲ್ಲಿ ಹಿಂದೂ ಸಂಘಟನೆಗಳ ನಾಯಕ ರವಿ ಕೋಕೀತ್ಕರ್ ಅವರ ಕುತ್ತಿಗೆ ಭಾಗಕ್ಕೆ ಗುಂಡು ತಗಲಿ ಸ್ವಲ್ಪದರಲ್ಲೇ ಪ್ರಣಾಪಾಯದಿಂದ ಪಾರಾಗಿದ್ರು.ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಪೋಲೀಸ್ರು 24 ಗಂಟೆಯೊಳಗಾಗಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿಯ ಶಹಾಪೂರ ಪ್ರದೇಶದ ಅಭಿಜೀತ ಭಾತಖಾಂಡೆ,ಸೇರಿದಂತೆ ಒಟ್ಟು ಮೂವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.ಅಭಿಜೀತ ಭಾತಖಾಂಡೆ ಮತ್ತು ರವಿ ಕೋಕೀತ್ಕರ್ ಅವರ ನಡುವೆ ಹಳೆಯ ವೈಷಮ್ಯವಿತ್ತು ನಿನ್ನೆ ನಡೆದ ಗೋಲೀಬಾರ್ ಪ್ರಕರಣಕ್ಕೆ ಹಳೆಯ ವೈಷಮ್ಯವೇ ಕಾರಣ ಎಂದು ಹೇಳಲಾಗುತ್ತಿದೆ.ಕೆಲ ವರ್ಷಗಳ ಹಿಂದೆ ರವಿ ಕೋಕಿತ್ಕರ್ ಅಭಿಜೀತ್ ಭಾತಖಾಂಡೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಬಗ್ಗೆ ಶಹಾಪೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ನಿನ್ಬೆ ರಾತ್ರಿ ಹಿಂಡಲಾ ಗ್ರಾಮದಲ್ಲಿ ನಡೆದ ಫೈರೀಂಗ್ ಘಟನೆಗೆ ಹಳೆಯ ವೈಷಮ್ಯವೇ ಕಾರಣ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

 

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *