Breaking News

ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್ ಮಾಡಿದ ಆರೋಪಿಗಳು ಇವರೇ…!!

ಬೆಳಗಾವಿ-ಬೆಳಗಾವಿ ಪಕ್ಕದ ಹಿಂಡಲಗಾ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿ ಪ್ರಕರಣವನ್ನು ಭೇದಿಸುವ ಮೂಲಕ ಬೆಳಗಾವಿ ಪೋಲೀಸರು ಅನೇಕ ರಾಜಕೀಯ ಆಟಗಳಿಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಕುಂದಾನಗರಿಯಲ್ಲಿ ಕಂಟ್ರಿ ಪಿಸ್ತೂಲ್ ಮತ್ತೆ ಸದ್ದು ಮಾಡಿದೆ. ಸೂರ್ಯ ಮುಳುಗುವ ಹೊತ್ತಿನಲ್ಲೇ ಬೆಳಗಾವಿಯಲ್ಲಿ ಗುಂಡಿನ ಸದ್ದು ಮೊಳಗಿತ್ತು. ಹಿಂದೂ ಮುಖಂಡನ ಗುರಿಯಾಗಿಸಿಯೇ ನಿನ್ನೆ ಸಂಜೆ ಫೈರಿಂಗ್ ಮಾಡಲಾಗಿತ್ತು. ಇದು ದೊಡ್ಡಮಟ್ಟದ ಸುದ್ದಿಯಾಗಿ ಸದ್ದನ್ನೂ‌ ಮಾಡಿತ್ತು. ಘಟನೆ ನಡೆಯುತ್ತಿದ್ದಂತೆ‌ ಕಾರ್ಯ ಪ್ರವರ್ತರಾದ‌ ಪೊಲೀಸರು ಕೇವಲ 18 ಗಂಟೆಯೊಳಗೆ ‌ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳಗಾವಿ ‌ನಗರದಿಂದ ಹಿಂಡಲಗಾ ‌ಗ್ರಾಮದ ಕಡೆಗೆ ಹೊರಟಿದ್ದ ವಾಹನದ ಮೇಲೆ‌ ದುಷ್ಕರ್ಮಿಗಳು ‌ಗುಂಡು ಹಾರಿಸಿದ್ದರು. ಶ್ರೀರಾಮ ‌ಸೇನೆ ಜಿಲ್ಲಾಧ್ಯಕ್ಷ ರವಿ‌ ಕೋಕಿತ್ಕರ್ ಗುರಿಯಾಗಿ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಗುಂಡು ರವಿ ಗದ್ದಕ್ಕೆ ತಾಗಿ ಡ್ರೈವರ್ ಕೈಗೂ ತಾಕಿತ್ತು. ಇಬ್ಬರು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಕ್ಯಾಂಪ್ ಠಾಣೆ ಪೊಲೀಸರು ಘಟನೆ ನಡೆದ 18 ಗಂಟೆಯೊಳಗೆ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ‌ ನಡೆಸಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ವೈಯಕ್ತಿಕ ದ್ವೇಷ ಹಾಗೂ ಹಣಕಾಸಿನ ವ್ಯವಹಾರ ಹಿನ್ನೆಲೆ ಘಟನೆ ನಡೆದಿದೆ. ನಿನ್ನೆ ಸಂಜೆ 7.30 ಸುಮಾರಿಗೆ ಹಿಂಡಲಗಾ ಬಳಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಸಂಗಡಿಗರು ವಾಹನದಲ್ಲಿ ಹೋಗಬೇಕಾದ್ರೆ ಫೈರಿಂಗ್ ಮಾಡಲಾಗಿದೆ‌. ದ್ವಿಚಕ್ರವಾಹನದಲ್ಲಿ ಬಂದಿದ್ದ ಮೂವರು ಫೈರಿಂಗ್ ಮಾಡಿರುತ್ತಾರೆ. ಸದ್ಯ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಪೊಲೀಸ್ ಸಿಬ್ಬಂದಿ ಅಲರ್ಟ್ ಆಗಿ 18 ಗಂಟೆಯೊಳಗೆ ಪ್ರಮುಖ ಆರೋಪಿಗಳ ಬಂಧಿಸಿದ್ದು ಪ್ರಮುಖ ಆರೋಪಿ ಬೆಳಗಾವಿ ನಿವಾಸಿ ಅಭಿಜಿತ್ ಭಾತ್ಕಾಂಡೆ, ಬಸ್ತವಾಡ ಗ್ರಾಮದ ನಿವಾಸಿ ರಾಹುಲ್ ಕೊಡಚವಾಡ, ಜ್ಯೋತಿಬಾ ಗಂಗಾರಾ ಬಂಧಿತರು. ಅಭಿಜಿತ್ ಹಾಗೂ ರವಿ ಕೋಕಿತಕರ್ ಮಧ್ಯೆ ರಿಯಲ್ ಎಸ್ಟೇಟ್ ವ್ಯವಹಾರ ಇತ್ತು.2020ರಲ್ಲಿ ಜನವರಿ 1ರಂದು ಆರೋಪಿ ಅಭಿಜಿತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಪ್ರಕರಣದಲ್ಲಿ ಗಾಯಾಳು ರವಿ ಕೋಕಿತಕರ್ ಪ್ರಮುಖ ಆರೋಪಿಯಾಗಿದ್ದ. ಹಣಕಾಸಿನ ವ್ಯವಹಾರ ಹಳೆಯ ವೈಷಮ್ಯ ಹಿನ್ನೆಲೆ ಈ ಘಟನೆ ನಡೆದಿದೆ. ಯಾವುದೇ ದ್ವೇಷ ಇದ್ದರೂ ಫೈರ್ ಆರ್ಮ್ ಬಳಸಿದ್ದು ಗಂಭೀರ ಅಪರಾಧ. ಪ್ರಾಥಮಿಕ ಮಾಹಿತಿ ಪ್ರಕಾರ ಅಭಿಜಿತ್ ಭಾತ್ಕಾಂಡೆ ಫೈರ್ ಮಾಡಿದ್ದಾನೆ‌ ಕಂಟ್ರಿ ಪಿಸ್ತೂಲ್ ಬಳಸಿ ಫೈರ್ ಮಾಡಿದ್ದಾರೆ, ಯಾವುದೇ ಲೈಸನ್ಸ್ ಇಲ್ಲ‌ಜನರು ಯಾವುದೇ ವದಂತಿ, ಊಹಾಪೋಹಗಳಿಗೆ ಕಿವಿಗೊಡಬಾರದು’ ಎಂದು ನಗರ ಪೋಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರಮೋದ ಮುತಾಲಿಕ್ ಒತ್ತಾಯ

ಇನ್ನು ಅರೋಪಿಗಳ ಬಂಧನ ಸುದ್ದಿ ತಿಳಿದ ಬಳಿಕ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ ನೀಡಿದರು. ಘಟನೆ ನಡೆದು 18 ಗಂಟೆಯೊಳಗೆ ಆರೋಪಿಗಳ ಬಂಧಿಸಿದ್ದಕ್ಕೆ ನಗರ ಪೊಲೀಸ್ ಆಯುಕ್ತರಿಗೆ ಧನ್ಯವಾದ ತಿಳಿಸಿದರು. ಬಳಿಕ ಮಾತನಾಡಿದ ಪ್ರಮೋದ್ ಮುತಾಲಿಕ್, ಘಟನೆಯ ಹಿಂದೆ ಯಾವುದೋ ಸಂಘಟನೆಯ ಕೈವಾಡ ಎಂದು ಶಂಕೆ ವ್ಯಕ್ತಪಡಿಸಿದರು. ಶ್ರೀರಾಮಸೇನೆ ಸಂಘಟನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದು ಘಟನಾ ಸ್ಥಳಕ್ಕೂ ಭೇಟಿ ನೀಡಿದ್ದೇನೆ‌‌. ನಗರ ಪೊಲೀಸ್ ಆಯುಕ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ. ತಪ್ಪಿತಸ್ಥರನ್ನು 18 ಗಂಟೆಯೊಳಗೆ ಬಂಧಿಸಿದ್ದಕ್ಕೆ ಧನ್ಯವಾದ. ವೈಯಕ್ತಿಕ ಜಗಳ ಹಿನ್ನೆಲೆ ಘಟನೆ ನಡೆದಿದೆ ಅಂತ ಪೊಲೀಸರು ಹೇಳಿದ್ದಾರೆ. ಆದ್ರೆ ಆ ಘಟನೆ ನಡೆದು ಎರಡು ವರ್ಷ ಕಳೆದಿದೆ. ಇವತ್ತಿ‌ನ ವಿರಾಟ ಹಿಂದೂ ಸಮಾವೇಶದ ಕಾರ್ಯಕ್ರಮ ಹಿನ್ನೆಲೆ ಘಟನೆ ನಡೆದ ಅನುಮಾನ ಇದ್ದು ಅದರ ಸಂಬಂಧ ತನಿಖೆ ಆಗಿ ಅವರ ಬಂಧ‌ನ ಆಗಬೇಕು.‌ ಶ್ರೀರಾಮಸೇನೆ ಕಾರ್ಯಕ್ರಮ ಡಿಸ್ಟರ್ಬ್ ಮಾಡಬೇಕು ಅಂತಾ ಈ ರೀತಿ ಕೃತ್ಯವೆಸಗಿದ್ದಾರೆ. ನಾಲ್ಕೈದು ದಿನಗಳಿಂದ ರವಿ ಕೋಕಿತಕರ್ ಫಾಲೋ ಮಾಡ್ತಿದ್ರು. ಇವತ್ತಿನ ಕಾರ್ಯಕ್ರಮ ಆಗಬಾರದು ಅಂತಾ ವಿಚಾರ ಇತ್ತು ಅನಿಸುತ್ತೆ. ಆರೋಪಿ ಅಭಿಜಿತ್ ಈ ಹಿಂದೆ ನಮ್ಮ ಜೊತೆ ಭಜರಂಗದಳದಲ್ಲಿ ಇದ್ದ, ಭಜರಂಗದಳ ಸಂಚಾಲಕನಾಗಿದ್ದ. ಇದರ ಹಿಂದೆ ಯಾವ ಸಂಘಟನೆ ಅನ್ನೋದು ತನಿಖೆ ಆಗಬೇಕು. ಚಲಿಸುತ್ತಿದ್ದ ವಾಹನ ಮೇಲೆ ಫೈರಿಂಗ್ ಮಾಡೋದು ಶಾರ್ಪ್ ಶೂಟರ್‌ಗೆ ಮಾತ್ರ ಸಾಧ್ಯ. ಶಾರ್ಪ್ ಶೂಟರ್ ಯಾರು ಎಂಬುದನ್ನು ತನಿಖೆ ಆಗಬೇಕು. ನಮಗೆ ಸಂಶಯ ಇದೆ. ಅದನ್ನ ಪೊಲೀಸ್ ಇಲಾಖೆ ಹೊರತಗೆಯಬೇಕು ಇಲ್ಲವಾದ್ರೆ ನಾವು ತಗೆಯುತ್ತೇವೆ. ಇದರ ಹಿಂದೆ ಯಾರೋ ಕಿಂಗ್‌ ಪಿನ್, ರಾಜಕೀಯ ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪ್ರಮೋದ್ ಮುತಾಲಿಕ್ ಈ ಘಟನೆ ಹಿಂದೆ ಯಾರೋ ಇದ್ದಾರೆ, ರಾಜಕಾರಣವೂ ಇರಬಹುದು. ಅತ್ಯಂತ ಶಾಂತಿಯುತವಾಗಿ ಯಶಸ್ವಿಯಾಗಿ ಇವತ್ತಿನ ಕಾರ್ಯಕ್ರಮ ನಡೆಯುತ್ತೆ. ಈ ರೀತಿ ಗೂಂಡಾಗಿರಿ ನಡೆಯಲ್ಲ. ಶ್ರೀರಾಮಸೇನೆ ಆಗಲಿ ನಮ್ಮ ಕಾರ್ಯಕರ್ತರಾಗಲಿ ಹೆದರಲ್ಲ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ಆರೋಪಿಗಳ ಬಂಧನವಾಗಿದ್ದು ಊಹಾಪೋಹಗಳಿಗೆ ತೆರೆ ಬಿದ್ದಿದೆ. ಘಟನೆ ಹಿಂದೆ ಯಾರೋ ಕಿಂಗ್‌ಪಿನ್ ಇದ್ದಾರೆ, ಯಾವುದೋ ಸಂಘಟನೆ ಇದೆ ಅಂತಾ ಪ್ರಮೋದ್ ಮುತಾಲಿಕ್ ಆರೋಪಿಸಿದ್ದು ಈ ಕುರಿತಂತೆ ತನಿಖೆಗೆ ಆಗ್ರಹಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು ಮುಂದೆ ಏನಾಗುತ್ತೋ ಕಾದು ನೋಡಬೇಕು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *