ಖಾನಾಪುರ: ಮಂಗಳವಾರ ತಾಲೂಕಿನ ಕಣಕುಂಬಿ ಗ್ರಾಮದ ಸುತ್ತಮುತ್ತಲಿನ ಮಲಪ್ರಭಾ ಹಾಗೂಮಹದಾಯಿ ನದಿ, ಕಳಸಾ ಹಳ್ಳ ಮತ್ತು ಅಕ್ಕಪಕ್ಕದ ಜಲಾನಯನ ಪ್ರದೇಶಕ್ಕೆ ಹಿರಿಯ ಐಎಫ್ಎಸ್ಅಧಿಕಾರಿ ಅಂಜನಕುಮಾರ್ ಭೇಟಿ ನೀಡಿ ಕಣಕುಂಬಿ ಬಳಿ ಕರ್ನಾಟಕ ನೀರಾವರಿ ನಿಗಮದಿಂದಕೈಗೊಂಡಿರುವ ಕಾಮಗಾರಿಯನ್ನು ಪರಿಶೀಲಿಸಿದರು.
ಕೇಂದ್ರ ಸರ್ಕಾರದ ಕೇಂದ್ರ ಪರಿಸರ ಸಚಿವಾಲಯದ ಸೂಚನೆ ಮೇರೆಗೆ ಮಲಪ್ರಭಾ ಮತ್ತು ಮಹದಾಯಿ
ಜಲಾನಯನ ಪ್ರದೇಶಗಳಿಗೆ ತೆರಳಿ ವಸ್ತುಸ್ಥಿತಿ ವೀಕ್ಷಿಸಿದ ಅವರು, ಕಣಕುಂಬಿ ಸುತ್ತಮುತ್ತ ರಾಜ್ಯ ಸರ್ಕಾರದಿಂದ ಕೈಗೆತ್ತಿಕೊಂಡಿರುವ ಕಳಸಾ ಕಾಲುವೆಯ ಸಧ್ಯದ
ಪರಿಸ್ಥಿತಿಯ ಪರಿಶೀಲನೆ ಕೈಗೊಂಡರು. ಕರ್ನಾಟಕ ಸರ್ಕಾರ ಕಣಕುಂಬಿಯಲ್ಲಿ ಮಲಪ್ರಭಾನದಿಗೆ ಮಹದಾಯಿ ನದಿ ಮತ್ತು ಕಳಸಾ ಹಳ್ಳದ ನೀರನ್ನು ಹರಿಸುವ ಕಾಮಗಾರಿಯನ್ನು ಆರಂಭಿಸಲು ಸಿದ್ಧತೆಗಳನ್ನು ಕೈಗೊಂಡಿದ್ದು, ಮಲಪ್ರಭಾ ನದಿಗೆ ಮಹದಾಯಿ ನದಿ ಮತ್ತು ಕಳಸಾ
ಹಳ್ಳದಿಂದ ನೀರು ಸರಬರಾಜು ಕುರಿತು ಅವರು ನೀರಾವರಿ ನಿಗಮದ ಅಭಿಯಂತರಿಂದ ಕಾಮಗಾರಿಯ
ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
“ಮಹದಾಯಿ ನದಿ ಮತ್ತು ಕಳಸಾ ಹಳ್ಳ ಹಾಗೂ ಸುತ್ತಲಿನ ಅಚ್ಚುಕಟ್ಟು ಪ್ರದೇಶ ವೀಕ್ಷಿಸಿಸರ್ಕಾರಕ್ಕೆ ವರದಿ ಸಲ್ಲಿಸಲು ಮಂಗಳವಾರ ಕೇಂದ್ರದಿಂದ ಹಿರಿಯ ಅಧಿಕಾರಿಗಳು ತಾಲೂಕಿಗೆಆಗಮಿಸಲಿದ್ದಾರೆ. ಅವರಿಗೆ ಅಗತ್ಯ ಅನುಕೂಲತೆ ಕಲ್ಪಿಸಬೇಕು ಎಂದು ಸೋಮವಾರ ಸಂಜೆ
ಮೇಲಕಾರಿಗಳಿಂದ ತಮಗೆ ಸಂದೇಶ ಬಂದ ಹಿನ್ನೆಲೆಯಲ್ಲಿ ಮಂಗಳವಾರ ತಾವು ಇಲಾಖೆಯಅಭಿಯಂತರೊಂದಿಗೆ ಕಣಕುಂಬಿಗೆ ತೆರಳಿ ಅವರಿಗೆ ಮಹದಾಯಿ, ಕಳಸಾ ಯೋಜನೆಯ ಕಾಮಗಾರಿಯಕುರಿತಾದ ಅಗತ್ಯ ಮಾಹಿತಿ ನೀಡಿದ್ದು, ಮೇಲಕಾರಿಗಳ ಸೂಚನೆಯಂತೆ ಹಿರಿಯ ಅಧಿಕಾರಿಗಳತಂಡದ ಕಣಕುಂಬಿ ಭೇಟಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದೇವೆ. ಅಧಿಕಾರಿಗಳು ಕಣಕುಂಬಿ
ಪ್ರವಾಸಿ ಮಂದಿರದ ಹಿಂಭಾಗದಲ್ಲಿ ಮತ್ತು ಕಣಕುಂಬಿ ಮಾವುಲಿ ದೇವಸ್ಥಾನದ ಮುಂಭಾಗದಲ್ಲಿ
ಕರ್ನಾಟಕ ಸರ್ಕಾರದಿಂದ ಕೈಗೊಳ್ಳಲಾದ ಕಳಸಾ ತಿರುವು ಕಾಲುವೆಯನ್ನು ವೀಕ್ಷಿಸಿದ್ದಾರೆ.
ಬಳಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಕಾರಿಗಳ ಕಚೇರಿಯಲ್ಲಿ ಮಹದಾಯಿ ಮತ್ತು ಕಳಸಾ
ಯೋಜನೆಗಳ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ನೀರಾವರಿ ಇಲಾಖೆಯ ಅಭಿಯಂತರಿಂದ
ಮಾಹಿತಿ ಸಂಗ್ರಹಿಸಿದ್ದಾರೆ. ಸರಗಕಾರದ ಸೂಚನೆಯಂತೆ ಘಟನಾ ಸ್ಥಳಕ್ಕೆ ಪೊಲೀಸರು,ಮಾಧ್ಯಮದವರು ಸೇರಿದಂತೆ ಇತರೆ ಇಲಾಖೆಗಳ ಅಕಾರಿಗಳು ಮತ್ತು ಸಾರ್ವಜನಿಕರ ಪ್ರವೇಶವನ್ನುನಿರ್ಬಂಧಿಸಲಾಗಿತ್ತು” ಎಂದು ಹೆಸರು ಬಹಿರಂಗಪಡಿಸದ ನೀರಾವರಿ ನಿಗಮದ ಅಕಾರಿಯೊಬ್ಬರು
ತಿಳಿಸಿದರು.