ಬೆಳಗಾವಿ-ಬೆಳಗಾವಿ ಗ್ರಾಮೀಣದಲ್ಲಿ ಇಲೆಕ್ಷನ್ ಯಾವ ರೀತಿ ನಡೆಯುತ್ತದೆ,ಮತದಾರರನ್ನು ಓಲೈಸಲು ಯಾರು ಯಾವ ಗಿಫ್ಟ್ ಕೊಡಬಹುದು,ಅನ್ನೋದನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ.ಯಾಕಂದ್ರೆ ಈ ಕ್ಷೇತ್ರದಲ್ಲಿ ಗಿಫ್ಟ್ ಕೊಡುವ ವಿಚಾರದಲ್ಲಿ ಸಿಂಗಲ್ ಡಬಲ್ ಎನ್ನುವ ಪೈಪೋಟಿ ಈಗಿನಿಂದಲೇ ಶುರುವಾಗಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಹಳದಿ ಕುಂಕುಮ ಕಾರ್ಯಕ್ರಮದ ಮೂಲಕ ಈ ಕ್ಷೇತ್ರದ ಮಹಿಳೆಯರಿಗೆ ಸೀರೆ ಹಂಚಿರುವ ಲಕ್ಷ್ಮೀ ಹೆಬ್ಬಾಳಕರ,ನಂತರ ಟಿಫೀನ್ ಬಾಕ್ಸ,ಕೊಟ್ಟ ನಂತರ,ಮಾಜಿ ಶಾಸಕ ಸಂಜಯ ಪಾಟೀಲ ತಮ್ಮ ಜನ್ಮದಿನದ ಕಾರ್ಯಕ್ರಮದಲ್ಲಿ ಸ್ಟೀಲ್ ತಾಟು ಮತ್ತು ಸ್ಟೀಲ್ ಗ್ಲಾಸ್ ಇರುವ ಸೆಟ್ ಗಿಪ್ಟ್ ಕೊಟ್ಟು, ಲಕ್ಷ್ಮೀ ಹೆಬ್ಬಾಳಕರ ಏನೇ ಗಿಪ್ಟ್ ಕೊಟ್ಟರೂ ಅದರ ಡಬಲ್ ನಾನೂ ಕೊಡ್ತೇನಿ,ಎಂದು ಸಂಜಯ ಪಾಟೀಲ ಜನ್ಮದಿನದ ಕಾರ್ಯಕ್ರಮದಲ್ಲೇ ಘೋಷಣೆ ಮಾಡುವ ಮೂಲಕ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಬಹಿರಂಗವಾಗಿಯೇ ಸವಾಲ್ ಹಾಕಿದ್ರು.
ಇದಾದ ಬಳಿಕ ನಾನೂ ಯಾರಿಗೂ ಕಮ್ಮಿ ಇಲ್ಲ ಅಂತಾ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಕ್ಷೇತ್ರದ ಕುಟುಂಬಗಳಿಗೆ ಮೀಕ್ಸರ್ ಹಂಚಲು ಶುರು ಮಾಡಿದ್ದಾರೆ.ಇಲೆಕ್ಷನ್ ಸಮೀಪ ಬಂದಾಗ ಲಕ್ಷ್ಮೀ ಹೆಬ್ಬಾಳಕರ ಹೊಲಿಗೆ ಯಂತ್ರ,ಫ್ರೀಡ್ಜ್ ಕೂಡಾ ಕೊಡ್ತಾರೆ ಎನ್ನುವ ಸುದ್ಧಿ ಇದೆ. ಒಟ್ಟಾರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ ಕೊಡುವ ವಿಚಾರದಲ್ಲಿ ಸಿಂಗಲ್ ,ಡಬಲ್ ಎಂಬ ಕಾಂಪಿಟೇಶನ್ ಈಗಿನಿಂದಲೇ ಶುರುವಾಗಿದೆ.
ಲಕ್ಷ್ಮೀ ಹೆಬ್ಬಾಳಕರ್ ಗೆ ಟೆಂಗಿನಕಾಯಿ ಟ್ರಬಲ್….!!
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದಲ್ಲಿ ಗಿಪ್ಟ್ ಕೊಡುವಾಗ ಮತದಾರರಿಗೆ ಟೆಂಗಿನಕಾಯಿ ಮುಟ್ಟಿಸಿ ಪ್ರಮಾಣ ಮಾಡಿಸುವ ಕಾರ್ಯವನ್ನು ಹೆಬ್ಬಾಳಕರ ಬೆಂಬಲಿಗರು ಮಾಡುತ್ತಿದ್ದಾರೆ,ಇದಕ್ಕೆ ಕೆಲವು ಹಳ್ಳಿಗಳಲ್ಲಿ ಜನ ಪ್ರಮಾಣ ಮಾಡಿಸುವ ಕಾರ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೀಡುತ್ತಿರುವ ಉಡುಗೊರೆ ಸಧ್ಯ ಸಾರ್ವಜನಿಕರಿಂದಲೇ ವಿರೋಧ ವ್ಯಕ್ತವಾಗಿದೆ. ತಾಲೂಕಿನ ಹೊನ್ನಿಹಳ್ಳಿ ಗ್ರಾದಲ್ಲಿ ಶಾಸಕಿ ಹೆಬ್ಬಾಳ್ಕರ್ ರನ್ನು ತಡೆದು ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.
ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಆಗಿನಿಂದಲೇ ಭರ್ಜರಿ ತಯಾರಿ ನಡೆಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಮತದಾರರನ್ನು ಸೆಳೆಯಲು ನಾನಾ ಬಗೆಯ ಕಸರತ್ತು ಮುಂದುವರಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ನೀಡುವಂತೆ ತೆಂಗಿನಕಾಯಿ ಮೇಲೆ ಪ್ರಮಾಣ ಮಾಡಿಸಿಕೊಂಡು ದಿನಬಳಕೆ ವಸ್ತು ಹಂಚಲಾಗುತ್ತಿದೆ. ಆದರೆ ಇದಕ್ಕೆ ಸಾರ್ವಜನಿಕರಿಂದಲೇ ವಿರೋಧ ವ್ಯಕ್ತವಾಗಿದೆ ಸಿಂಗಲ್ ಡಬಲ್ ಉಡುಗೊರೆಯ ಜೊತೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಟೆಂಗಿನಕಾಯಿ ಟ್ರಬಲ್ ಕೂಡಾ ಇದೆ.