ಬೆಳಗಾವಿ- ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ಸಿನ ಪ್ರಜಾಧ್ವನಿ ಯಾತ್ರೆ, ಕಾರ್ಯಕರ್ತರಿಗೆ ಅನೇಕ ಸಂದೇಶಗಳನ್ನು ನೀಡಿದೆ. ಈ ಸಂಧರ್ಭದಲ್ಲಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿರುವ ತಿಲಕವಾಡಿಯ ಐತಿಹಾಸಿಕ ವೀರಸೌಧದಲ್ಲಿ ಬಸ್ ಯತ್ರೆಗೆ ಚಾಲನೆ ಕೊಡುವ ಮೊದಲು ಗಾಂಧಿ ಟೋಪಿಧಾರಿಗಳಾಗಿದ್ದ ಮಾಜಿ ಶಾಸಕ ಫಿರೋಜ್ ಸೇಠ,ಹಾಗೂ ವಿಧಾನ ಪರಿಷತ್ ಸದಸ್ಯ ಚನ್ಬರಾಜ್ ಹಟ್ಟಿಹೊಳಿ ಕ್ಯಾಮೆರಾಗೆ ಫೋಜು ಕೊಟ್ಟು ಎಲ್ಲರ ಗಮನ ಸೆಳೆದರು.
ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಆಕಾಂಕ್ಷಿಗಳಲ್ಲಿ ಪ್ರಬಲ ಪೈಪೋಟಿ ನಡೆಯುತ್ತಿದೆ.ಫಿರೋಜ್ ಸೇಠ,ರಾಜು ಸೇಠ, ವಿನಯ ನಾವಲಗಟ್ಟಿ ಅಜೀಂ ಪಟವೇಗಾರ್,ಹಾಶಮ್ ಭಾವಿಕಟ್ಟಿ, ಸಿದ್ದೀಕ ಅಂಕಲಗಿ,ಹಾಗು ಕುರುಬ ಸಮಾಜದ ಸುಧೀರ್ ಗಡ್ಡೆ ಅವರು ಟಿಕೆಟ್ ಗಾಗಿ ಅರ್ಜಿ ಹಾಕಿದ್ದು ಕೆಪಿಸಿಸಿ ಚುನಾವಣಾ ಸ್ಕ್ಯಾನೀಂಗ್ ಕಮೀಟಿ ಸಭೆ ಮಾಡಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನಾಯಕರ ಅಭಿಪ್ರಾಯ ಪಡೆದು, ಅರ್ಜಿ ಹಾಕಿದ ಆಕಾಂಕ್ಷಿಗಳಲ್ಲಿ ಕೆಲವರ ಹೆಸರು ಕೈಬಿಟ್ಟು ಕೇವಲ ಮೂರು ಜನರ ಹೆಸರನ್ಬು ಶಿಫಾರಸು ಮಾಡಿದೆ ಎಂದು ಹೇಳಲಾಗುತ್ತಿದೆ.
ಕೆಪಿಸಿಸಿ ಸ್ಕ್ಯಾನೀಂಗ್ ಕಮೀಟಿ ಬೆಳಗಾವಿ ಉತ್ತರದಿಂದ ಶಿಫಾರಸು ಮಾಡಿದ ಮೂರು ಹೆಸರುಗಳನ್ನು ಗೌಪ್ಯವಾಗಿಡಲಾಗಿದ್ದು,ಈ ಮೂರು ಹೆಸರುಗಳ ಈಗ ಚರ್ಚೆ ಜೋರಾಗಿಯೇ ನಡೆದಿದೆ.ಸ್ಕ್ಯಾನಿಂಗ್ ಕಮೀಟಿ ಅಂತಿಮಗೊಳಿಸಿರುವ ಮೂರು ಜನರ ಪಟ್ಟಿಯಲ್ಲಿ ನಾನ… ನೀನಾ ? ಎಂದು ಆಕಾಂಕ್ಷಿಗಳೇ ಪರಸ್ಪರ ಪ್ರಶ್ನೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಬೆಳಗಾವಿ ಉತ್ತರದ ಕಾಂಗ್ರೆಸ್ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಜವಾಬ್ದಾರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದ್ದು, ಸೇಠ ಸಹೋದರರಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರ ಕೃಪಾಕಟಾಕ್ಷವಿದ್ದು ಸೇಠ ಸಹೋದರರ ಪೈಕಿ ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ಸಿಗುತ್ತದೆ ಎಂದು ಹೇಳಲಾಗುತ್ತದೆ…
ಬೆಳಗಾವಿ ಉತ್ತರದ ಇನ್ನೋರ್ವ ಪ್ರಬಲ ಆಕಾಂಕ್ಷಿ ಅಜೀಂ ಪಟವೇಗಾರ ಅವರು ಸತೀಶ್ ಜಾರಕಿಹೊಳಿ ಅವರ ಆಪ್ತರಾಗಿದ್ದು,ಅವರು ಮತ್ತು ಹಾಶಂ ಭಾವಿಕಟ್ಟಿ ಅವರು ಸದ್ದಿಲ್ಲದೇ ಲಾಭಿ ನಡೆಸಿರುವುದು ಸತ್ಯ.
ಕಾಂಗ್ರೆಸ್ ಲಿಂಗಾಯತ ಸಮಾಜದ ಅಭ್ಯರ್ಥಿಗೆ ಟಿಕೆಟ್ ಕೊಡುವ ನಿರ್ಧಾರ ಕೈಗೊಂಡರೆ ವಿನಯ ನಾವಲಗಟ್ಟಿ, ಕುರುಬ ಸಮಾಜಕ್ಕೆ ಕೊಡುವದಾರೆ ಸುಧೀರ್ ಗಡ್ಡೆ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ.ಯುಥ್ ಕಾಂಗ್ರೆಸ್ ಪದಾಧಿಕಾರಿಗಳಿಗೆ ಈ ಬಾರಿ ಹೆಚ್ವಿನ ಸಂಖ್ಯೆಯಲ್ಲಿ ಟಿಕೆಟ್ ಕೊಡುವಂತೆ ಯುಥ್ ಕಾಂಗ್ರೆಸ್ ಬೇಡಿಕೆ ಇಟ್ಟಿದ್ದು ಯುಥ್ ಕೋಟಾದಲ್ಲಿ ಬೆಳಗಾವಿ ಉತ್ತರದಿಂದ ಟಿಕೆಟ್ ಕೊಡುವಂತೆ ಸಿದ್ಧೀಕ್ ಅಂಕಲಗಿ ಉತ್ತರಕ್ಕಾಗಿ ಸಿದ್ಧ ಎನ್ನುವ ಅಭಿಯಾನ ಶುರು ಮಾಡಿದ್ದಾರೆ.