Breaking News

ಗೆದ್ದವರಿಗೆ ಐದು ಲಕ್ಷ ₹ ಕೊಡ್ತಾರೆ,ಅಲ್ಲಿ ಸಾವಿರಾರು ಜನ ಸೇರ್ತಾರೆ,ಗಣ್ಯರೂ ಬರ್ತಾರೆ..!!

ಬೆಳಗಾವಿ- ಕಳೆದ ಹತ್ತು ದಿನಗಳಿಂದ ಬೆಳಗಾವಿ ಮಹಾನಗರದ ಸರ್ದಾರ್ ಮೈದಾನದಲ್ಲಿ ಧೂಳೆಬ್ಬಿಸಿರುವ MLA ಅನೀಲ ಬೆನಕೆ ಕ್ರಿಕೆಟ್ ಟ್ರೋಫಿಯ, ಫೈನಲ್ ಮ್ಯಾಚ್ ಮೋರೆ ಎಲೆವನ್ ಹಾಗೂ ಝಿಯಾನ್ ಸ್ಪೋರ್ಟ್ಸ್ ಬಲಾಡ್ಯ ತಂಡಗಳ ನಡುವೆ ಇಂದು ಬೆಳಗ್ಗೆ 10-00 ಗಂಟೆಗೆ ಅಂತಿಮ ಸೆಣಸಾಟ ನಡೆಯಲಿದೆ..

ಹತ್ತು ದಿನಗಳಿಂದ ಬೆಳಗಾವಿಯಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಠಿ ಮಾಡಿರುವ ಅನೀಲ ಬೆನಕೆ ಟ್ರೋಫಿಯಲ್ಲಿ,ಮುಂಬಯಿ, ಗೋವಾ,ಜಮ್ಮು ಕಾಶ್ಮೀರ್ ಸೇರಿದಂತೆ ನಲವತ್ತಕ್ಕೂ ಹೆಚ್ಚು ದಿಗ್ಗಜ ಕ್ರಿಕೆಟ್ ತಂಡಗಳು ಈ ಟ್ರೋಫಿಯಲ್ಲಿ ಭಾಗವಹಿಸಿ,ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿವೆ.ರೋಮಾಂಚಕ ಸೆಣಸಾಟದಕೊಡಲಿದ್ದಾರೆ.ಬುಧವಾರ ಬೆಳಗ್ಗೆ 10-00 ಗಂಟೆಗೆ ಫೈನಲ್ ಮ್ಯಾಚ್ ನಡೆಯಲಿದ್ದು ಸಾವಿರಾರು ಪ್ರೇಕ್ಷಕರು ಸರ್ದಾರ್ ಮೈದಾನದಲ್ಲಿ ಸೇರಲಿದ್ದಾರೆ.

ಇಂಟರ್ನ್ಯಾಷನಲ್ ಸ್ಟೇಡಿಯಂ ಸ್ವರೂಪ ಪಡೆದುಕೊಂಡಿರುವ ಬೆಳಗಾವಿಯ ಸರ್ದಾರ್ ಮೈದಾನದಲ್ಲಿ,ಫೈನಲ್ ಮ್ಯಾಚ್ ನಲ್ಲಿ ವಿಜಯಶಾಲಿ ಆಗುವ ತಂಡಕ್ಕೆ ಐದು ಲಕ್ಷ ಒಂದು ರೂ ನಗದು ಬಹುಮಾನದ ಜೊತೆಗೆ ಆಕರ್ಷಕ ಟ್ರೋಫಿ,ಎರಡನೇಯ ಸ್ಥಾನ ಪಡೆಯುವ ತಂಡಕ್ಕೆ ಎರಡೂವರೆ ಲಕ್ಷ ಒಂದು ರೂಪಾಯಿ ನಗದು ಬಹುಮಾನ,ಹಾಗೂ ಆಕರ್ಷಕ ಟ್ರೋಫಿ, ಹಾಗೂ ಮ್ಯಾನ್ ಆಫ್ ದೀ ಸಿರೀಜ್ ಗೆ ಭಾಜನರಾಗುವ ಆಟಗಾರನಿಗೆ ರಾಯಲ್ ಎನ್ಫೀಲ್ಡ್ ಬುಲೇಟ್ ಕೊಡಲಿದ್ದಾರೆ.

ಈ ಮ್ಯಾಚ್ ನೋಡಲು ಬೆಳಗಾವಿ ಜಿಲ್ಲೆಯ ಶಾಸಕರ,ಸಂಸದರು,ರಾಜ್ಯಸಭಾ ಸದಸ್ಯರು,ಹಾಗೂ ಅನೇಕ ಜನ ಗಣ್ಯರು ಫೈನಲ್ ಮ್ಯಾಚ್ ನೋಡಲು ಸರ್ದಾರ್ ಮೈದಾನಕ್ಕೆ ಬರಲಿದ್ದು ವಿಜಯಶಾಲಿ ಆಗುವ ತಂಡಕ್ಕೆ ಟ್ರೋಫಿ ಕೊಡಲಿದ್ದಾರೆ

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *