ಬೆಳಗಾವಿ- ಆಸ್ತಿ ವಿವಾದಕ್ಕೆ ಸಂಭಂದಿಸಿದಂತೆ ಕಲಹ ನಡೆದು ಸಹೋದರನಿಂದಲೇ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ವಿ ಕೊಲೆ ಮಾಡಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣೆಯ ವ್ಯಾಪ್ತಿಯ ಬಾಳಿ ಕೊಡಲ್ ಗ್ರಾಮ ಹದ್ದಿಯಲ್ಲಿರುವ ತೋಟದ ಮನೆಯಲ್ಲಿ ಕೊಲೆ ಮಾಡಲಾಗಿದೆ.
ಯಲ್ಲಪ್ಪ ಸಂತಾರಾಮ ಗುರವ ವಯ 33 ವರ್ಷ ಈತನ ಕೊಲೆ ಆಗಿದ್ದು, ಈ ಕೊಲೆಯನ್ನು ಆಸ್ತಿ ವಿಚಾರವಾಗಿ ಮೃತ ನ ಸಹೋದರ ಮಾಡಿರುವುದಾಗಿ ತಿಳಿದು ಬಂದಿದೆ.ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದು ತನಿಖೆ ಆರಂಭಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ