ಬೆಳಗಾವಿ- ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಎಲ್ಲಿಲ್ಲದ ಪೈಪೋಟಿ ನಡೆಯುತ್ತಿದೆ.ದಿವಂಗತ ಆನಂದ ಮಾಮನಿ ಅವರ ಧರ್ಮಪತ್ನಿ ರತ್ನಾ ಮಾಮನಿ ಸೇರಿದಂತೆ ಹಲವಾರು ಜನ ಘಟಾನುಘಟಿಗಳು ಲಾಭಿ ನಡೆಸಿದ್ದಾರೆ.
ಈ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಆಧಾರಿತ ಲಾಭಿ,ಜೊತೆಗೆ ಜಾತಿ ಆಧಾರಿತ ಲಾಭಿ ಜೋರಾಗಿಯೇ ನಡೆದಿದೆ. ಆನಂದ ಮಾಮನಿ ಅವರ ಧರ್ಮಪತ್ನಿ ರತ್ನಾ ಮಾಮನಿ ಅವರು ಬಿಜೆಪಿ ಟಿಕೆಟ್ ನೀಡುವಂತೆ ರಾಜ್ಯದ ಬಿಜೆಪಿ ನಾಯಕರಲ್ಲಿ ಮನವಿ ಮಾಡಿಕೊಂಡಿರುವ ಬೆನ್ನಲ್ಲಿಯೇ ಈ ಕ್ಷೇತ್ರದ ಮೂರು ಜನ ಆಕಾಂಕ್ಷಿಗಳೂ ಸಹ ಟಿಕೆಟ್ ಗಾಗಿ ಕಸರತ್ತು ನಡೆಸಿದ್ದಾರೆ.
ಸವದತ್ತಿ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ,ರತ್ನಾ ಮಾಮನಿ,ಮಡಿವಾಳಪ್ಪ ಬಿದರಗಟ್ಟಿ,ಸಂಜೀವಕುಮಾರ್ ನವಲಗುಂದ,ಹಾಗೂ ರುದ್ರಣ್ಣಾ ಚಂದರಗಿ ಅವರು ಲಾಭಿ ನಡೆಸಿದ್ದು ಈ ಎಲ್ಲ ಆಕಾಂಕ್ಷಿಗಳು ಸಂಘ ಪರಿವಾರದ ಕಟ್ಟಾ ಕಾರ್ಯಕರ್ತರಾಗಿದ್ದಾರೆ.ಬಿಜೆಪಿ ನಾಯಕರು ಕುಟುಂಬ ರಾಜಕಾರಣಕ್ಕೆ ಸೊಪ್ಪು ಹಾಕದಿದ್ದರೆ,ಹೊಸ ಮುಖಕ್ಕೆ ಅವಕಾಶ ನೀಡಿದ್ದಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಎಲ್ಲಿಲ್ಲದ ಪೈಪೋಟಿ ನಡೆಯುವ ಎಲ್ಲ ಲಕ್ಷಣಗಳು ಕಂಡು ಬಂದಿವೆ.
ಹಲವಾರು ವರ್ಷಗಳಿದಂದ ಮಡಿವಾಳಪ್ಪ ಬಿದರಗಟ್ಟಿ,ಅವರು ಸಂಘ ಪರಿವಾರದಲ್ಲಿ ಕ್ರಿಯಾಶೀಲ ರಾಗಿದ್ದು ಬೀದರಗಟ್ಟಿ ಅವರ ಧರ್ಮಪತ್ನಿ ಭಾಗ್ಯಜ್ಯೋತಿ ಅವರು ಬಿಜೆಪಿ ಸಂಘಟನೆಯಲ್ಲಿ ಸಕ್ರೀಯವಾಗಿದ್ದು ಬೀದರಗಟ್ಟಿ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಶಿಷ್ಯ ಹಾಗೂ ಬಿಜೆಪಿಯ ಹಿರಿಯ ಮುಖಂಡ,ಕೆ.ಎಸ್ ಈಶ್ವರಪ್ಪನವರ ಆಪ್ತರಾಗಿದ್ದು,ಬೀದರಗಟ್ಟಿ ಅವರು ರಾಜ್ಯಮಟ್ಟದ ಬಿಜೆಪಿ ನಾಯಕರ ಜೊತೆ ಸಂಪರ್ಕ ಹೊಂದಿದ್ದು ಕುರುಬ ಸಮುದಾಯದ ಕೋಟಾದಲ್ಲಿ ಬಿಜೆಪಿ ಟಿಕೆಟ್ ಕೇಳುತ್ತಿದ್ದಾರೆ.
RSS ಮತ್ತು ಬಿಜೆಪಿ ಸಂಘಟನೆಯಲ್ಲಿ ಹಲವಾರು ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ,ಬಿಜೆಪಿಗೆ ನಿಷ್ಠುರವಾಗಿರುವ,ಪಂಚಮಸಾಲಿ ಸಮಾಜಕ್ಕೆ ಸೇರಿರುವ ಸಂಜೀವ ಕುಮಾರ್ ನವಲಗುಂದ ಅವರೂ ಸಹ ಬಿಜೆಪಿ ಟಿಕೆಟ್ ಗೆ ಅರ್ಜಿ ಹಾಕಿ ಈಗಾಗಲೇ ಹಲವಾರು ಜನ ಬಿಜೆಪಿ ನಾಯಕರನ್ನು ಖುದ್ದಾಗಿ ಭೇಟಿಯಾಗಿ ತಮಗೊಂದು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ರುದ್ರಣ್ಣಾ ಚಂದರಗಿ,ಸಂಘ ಪರಿವಾರ,ಬಿಜೆಪಿ,ಮತ್ತು ಪಂಚಮಸಾಲಿ ಸಂಘಟನೆಯಲ್ಲೂ ಕ್ರೀಯಾಶೀಲರಾಗಿದ್ದು ಅವರು ದಿವಂಗತ ಸುರೇಶ್ ಅಂಗಡಿ ಅವರ ಶಿಷ್ಯರಾಗಿದ್ದರು,ರುದ್ರಣ್ಣಾ ಚಂದರಗಿ ಅವರು ಈಗ ಸಂಸದೆ ಮಂಗಲಾ ಅಂಗಡಿ ಅವರ ಮುಖೇನ ಸವದತ್ತಿ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಎಲ್ಲಿಲ್ಲದ ಲಾಭಿ ನಡೆಸಿದ್ದು ರುದ್ರಣ್ಣ ಈಗಾಗಲೇ ಕೈ ಮುಗಿಯುತ್ತ. ಸವದತ್ತಿ ಕ್ಷೇತ್ರದಲ್ಲಿ ಒಂದು ರೌಂಡ್ಸ್ ಹಾಕಿದ್ದಾರೆ.
ಒಟ್ಟಾರೆಯಾಗಿ ಸವದತ್ತಿ ಕ್ಷೇತ್ರದಲ್ಲಿ ರತ್ನಾ ಮಾಮನಿ ಅವರನ್ನು ಹೊರತುಪಡಿಸಿ ಬೇರೆ ಆಕಾಂಕ್ಷಿಗಳೂ ಪ್ರಬಲ ಪೈಪೋಟಿ ನಡೆಸಿದ್ದು ಬಿಜೆಪಿ ಹೈಕಮಾಂಡ್ ಕುಟುಂಬ ರಾಜಕಾರಣಕ್ಕೆ ಸೈ ಅಂದಲ್ಲಿ,ರತ್ನಾ ಮಾಮನಿ ಅವರಿಗೆ ಟಿಕೆಟ್ ಸಿಗೋದು ಖಚಿತ,ಬಿಜೆಪಿ ನಾಯಕರು ಕುಟುಂಬ ರಾಜಕಾರಣ ಕೈ ಬಿಟ್ಟರೆ,ಬಿದರಗಟ್ಟಿ,ನವಲಗುಂದ,ಮತ್ತು ಚಂದರಗಿ ಅವರ ನಡುವೆ ಬಿಜೆಪಿ ಟಿಕೆಟ್ ಗಾಗಿ ತ್ರೀಕೋಣ ಸ್ಪರ್ದೆ ನಡೆಯೋದು ಗ್ಯಾರಂಟಿ.
ಬಸವರಾಜ ಪಟ್ಟಣಶೆಟ್ಟಿ, ಅಜಿತಕುಮಾರ್ ದೇಸಾಯಿ ಅವರೂ ಬಿಜೆಪಿ ಟಿಕೆಟ್ ಗೆ ಪ್ರಬಲ ಪೈಪೋಟಿ ನಡೆಸಿದ್ದಾರೆ. ಕ್ಷೇತ್ರದಾದ್ಯಂತ ಸಂಚರಿಸಿ ಮತದಾರರ ಮನ ಗೆಲ್ಲಲು ಕಸರತ್ತು ನಡೆಸುತ್ತಿದ್ದಾರೆ.