ಬೆಳಗಾವಿ-ಮಧ್ಯಪ್ರದೇಶದ ಮೊರೊನಾದಲ್ಲಿ ಯುದ್ಧವಿಮಾನ ಡಿಕ್ಕಿ ಹೊಡೆದ ಘಟನೆಯಲ್ಲಿಬೆಳಗಾವಿಯ ಗಣೇಶಪುರದ ವಿಂಗ್‌ಕಮಾಂಡರ್ ಹನುಮಂತರಾವ್ ಸಾರಥಿ ಹುತಾತ್ಮರಾಗಿದ್ದಾರೆ.
ಗಣೇಶಪುರದ ಸಂಭಾಜಿ ನಗರದಲ್ಲಿರುವ ಅವರ ನಿವಾಸದಲ್ಲಿ ನೀರವ ಮೌನ,ಸಂಬಂಧಿಗಳು ಆಪ್ತರು,ಅಪಾರ ಅಭಿಮಾನಿಗಳು, ಗಣೇಶಪೂರದ ಮನೆಗೆ ದೌಡಾಯಿಸಿ ತೀವ್ರ ತಂತಾಪ ವ್ಯಕ್ತಪಡಿಸುತ್ತಿದ್ದಾರೆ
ಬೀದರ್ ಏರ್‌ಬೇಸ್‌ನಲ್ಲಿ ಸೇವೆ ಸಲ್ಲಿಸಿದ್ದ ಹನುಮಂತರಾವ್ ಸಾರಥಿ,ಈ ವೇಳೆ ಬೃಹದಾಕಾರದ ಹನುಮಂತರಾವ್ ಸಾರಥಿ ಫೋಟೋ ಮೇಲೆ ಶುಭ ಸಂದೇಶ ಬರೆದು ಗಿಫ್ಟ್ ನೀಡಿದ್ದ ಸಹೋದ್ಯೋಗಿಗಳು,ಸದ್ಯ ಅದೇ ಫೋಟೋಗೆ ಪುಷ್ಪಾಲಂಕಾರ ಮಾಡುತ್ತಿರುವ ಸ್ನೇಹಿತರು ಕುಟುಂಬಸ್ಥರು.
ಮಗನ ನೆನೆದು ಕಣ್ಣೀರಿಟ್ಟ ತಾಯಿ ಸಾವಿತ್ರಮ್ಮ, ತಂದೆ ರೇವಣಸಿದ್ದಪ್ಪ, ಸಹೋದರಿ ಡಾ.ಪ್ರತಿಮಾ ಹುತಾತ್ಮ ಹನುಮಂತರಾವ್ ತಾಯಿ ಸಾವಿತ್ರಮ್ಮ ಕಣ್ಣೀರು ಹಾಕಿದ್ದಾರೆ.
ಸಣ್ಣ ವಯಸ್ಸಿನಲ್ಲಿಯೇ ಮಗ ನಮ್ಮನ್ನ ಬಿಟ್ಟು ಹೋದ,ಇಬ್ಬರು ಚಿಕ್ಕ ಚಿಕ್ಕ ಮಕ್ಕಳಿದ್ದಾರೆ.ನನ್ನ ಮಕ್ಕಳು ದೇಶ ಸೇವೆ ಮಾಡುತ್ತಿದ್ದಾರೆ ಎಂದು ನಮಗೆ ಹೆಮ್ಮೆ ಇತ್ತು. 18ನೇ ವಯಸ್ಸಿನಲ್ಲಿ ವಾಯು ಸೇನೆಗೆ ಆಯ್ಕೆಯಾಗಿದ್ದ ಹನುಮಂತರಾವ್ ಸಾರಥಿ.ಬಳಿಕ ವಾಯುಸೇನೆಯಲ್ಲಿಯೇ ಪುಣೆಯಲ್ಲಿ ಬಿಎಸ್‌ಸಿ ವ್ಯಾಸಂಗ ಮಾಡಿದ್ದರು.ಬಳಿಕ ಹೈದರಾಬಾದ್ ಏರ್‌ಪೋರ್ಸ್ ಅಕಾಡೆಮಿಗೆ ತೆರಳಿದ್ದ ಹನುಮಂತರಾವ್ ಸಾರಥಿ,ಅವರು ಸದ್ಯ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಗ್ವಾಲಿಯರ್ ಸಮೀಪ ನಡೆದ ವಾಯುಪಡೆಯ ಯುದ್ಧ ವಿಮಾನಗಳ ಪತನ ವೇಳೆ ಮೃತಪಟ್ಟಿರುವ ಪೈಲಟ್, ವಿಂಗ್ ಕಮಾಂಡರ್ ಬೆಳಗಾವಿಯ ಗಣೇಶಪುರದ ಹನುಮಂತರಾವ್ ರೇವಣಸಿದ್ದಪ್ಪ ಸಾರಥಿ ಅವರ ಪಾರ್ಥೀವ ಶರೀರ ಇಂದು 11.30 ಗಂಟೆಯ ವೇಳೆಗೆ ಸಾಂಬ್ರಾ ವಿಮಾನ ನಿಲ್ದಾಣ ತಲುಪಲಿದೆ.
ಅಲ್ಲಿ ಗೌರವ ಸಮರ್ಪಣೆ ಬಳಿಕ ಪಾರ್ಥೀವ ಶರೀರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗುವುದು. ನಂತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿಸಲಾಗಿರುತ್ತದೆ.
ಮಧ್ಯಾಹ್ನ ವೇಳೆ ಬೆನಕನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರ ನಿರ್ಧರಿಸಿದ್ದಾರೆ.