ಬೆಳಗಾವಿ-ಮಾಜಿ ಸಚಿವ ರಮೇಶ್ ಜಾರಕಿಹೋಳಿ ವಿರುದ್ಧದ ಸಿಡಿ ಷಡ್ಯಂತ್ರದ ಗಲಾಟೆ ಈಗ ದೆಹಲಿಗೆ ಶಿಪ್ಟ್ ಆಗಲಿದೆ.ಸಿಡಿ ಫ್ಯಾಕ್ಟರಿ ಪ್ರಕರಣವನ್ನು.ಸಿಬಿಐಗೆ ವಹಿಸುವಂತೆ ಪಟ್ಟು ಹಿಡಿದ ಸಾಹುಕಾರ ರಮೇಶ್ ಜಾರಕಿಹೋಳಿ ಇಂದು ದಾಖಲೆ ಸಮೇತ ದೆಹಲಿಗೆ ಹೋಗಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಗೊತ್ತಾಗಿದೆ.
ಸಿಡಿ ಷಡ್ಯಂತ್ರದ ಮಹತ್ವದ ದಾಖಲೆಗಳ ಸಮೇತ ದೆಹಲಿಗೆ ಹಾರಲು ಸಿದ್ಧತೆ ಮಾಡಿಕೊಂಡಿರುವ ರಮೇಶ್ ಜಾರಕಿಹೊಳಿ,ಇಂದು ಮದ್ಯಾಹ್ನ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲು ತಯಾರಿ ನಡೆಸಿದ್ದಾರೆ.ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರ ಅವರ ಭೇಟಿಗಾಗಿ ಸಮಯ ಕೇಳಿರುವ ಸಾಹುಕಾರ,ಇಂದು ಸಂಜೆ ಅಥವಾ ನಾಳೆ ಅಮೀತ್ ಶಾ ಭೇಟಿ ಮಾಡಿ ದಾಖಲೆ ಸಲ್ಲಿಸುವ ಸಾಧ್ಯತೆ ಇದೆ.
ನಿನ್ನೆ ಸಿಎಂ ಭೇಟಿ ಮಾಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸುವ ಕುರಿತು ಚರ್ಚೆ ಮಾಡಿರುವ ರಮೇಶ್ ಜಾರಕಿಹೊಳಿ,ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ನೇರವಾಗಿ ಬೆಂಗಳೂರಿಗೆ ತೆರಳಿದ ರಮೇಶ್
ಸಿಡಿ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಪಾತ್ರ ಇದೆ.ಅದಕ್ಕೆ ನನ್ನ ಬಹಳಿ ದಾಖಲೆ ಇದೆ ಎಂದಿದ್ದಾರೆ, ಈ ಪ್ರಕರಣವನ್ನು ಸಿಬಿಐ ಗೆ ನೀಡುವಂತೆ ರಮೇಶ್ ಜಾರಕಿಹೊಳಿ ಅವರು ಪಟ್ಟು ಹಿಡಿದಿದ್ದಾರೆ.
ಒಟ್ಡಾರೆ ಸಿಡಿ,ರಾಡಿ,ಯಾರಿಗೆ ಸಿಡಿಯುತ್ತೋ ಗೊತ್ತಿಲ್ಲ,ಆದ್ರೆ ಸಿಡಿ ರಿಲೀಸ್ ಆಗದಿದ್ದರೂ ಬಾಕ್ಸ್ ಆಫೀಸ್ ಫುಲ್ ಆಗಿದ್ದು ಸತ್ಯ.ಬರುವ ಚುನಾವಣೆಯಲ್ಲಿ ಸಿಡಿ ಮತ್ತೆ ಸದ್ದು ಮಾಡುವ ಎಲ್ಲ ಲಕ್ಷಣಗಳು ಕಂಡು ಬಂದಿವೆ.