ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಸಮಬಲದ ಟಕ್ಕರ್ ಕೊಡಲು ಬಿಜೆಪಿ ಹೈಕಮಾಂಡ್ ಬಿಜೆಪಿಯ ನಿಪ್ಪಾಣಿ ಕ್ಷೇತ್ರದ ಶಾಸಕಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿಸುವ ಚಿಂತನೆ ನಡೆಸಿದೆ,ಎನ್ನುವ ವಿಚಾರದ ಕುರಿತು ಶಶಿಕಲಾ ಜೊಲ್ಲೆ ಅವರನ್ನು ಮಾದ್ಯಮಗಳು ಪ್ರಶ್ನೆ ಮಾಡಿದಾಗ, ಶಶಿಕಲಾ ಅವರು ಈ ವಿಚಾರವನ್ನು ನಿರಾಕರಿಸಲಿಲ್ಲ ಆದ್ರೆ ನೋ..ಕಾಮೇಂಟ್ಸ್ ಎಂದು ಉತ್ತರಿಸಿದ್ದು ವಿಶೇಷ.
ಮಾದ್ಯಮ ಪ್ರತಿನಿಧಿಗಳು ಶಶಿಕಲಾ ಜೊಲ್ಲೆ ಅವರನ್ನು, ಮಾದ್ಯಮ ಪ್ರತಿನಿಧಿಗಳು ನಿಮ್ಮನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿಸುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ ಇದು ನಿಜಾನಾ ? ಎಂದು ಪ್ರಶ್ನಿಸಿದಾಗ,ಅದು ನಿಮ್ಮ ಕಿವಿಗೆ ಬಿದ್ದಿರಬಹುದು ನನ್ನ ಕಿವಿಗೆ ಬಿದ್ದಿಲ್ಲಾ,ಅಂದ್ರು, ಒಂದು ವೇಳೆ ಪಕ್ಷ ಬಯಸಿದರೇ ನಿಲ್ತೀರಾ ಎಂದು ಮರು ಪ್ರಶ್ನೆ ಕೇಳಿದಾಗ,ಸುಮ್ಮನೇ ನನ್ನ ಬಾಯಿ ಬಿಚ್ವಿಸಬೇಡಿ ನೋ ಕಾಮೇಂಟ್ಸ್ ಎಂದು ಉತ್ತರ ನಿಡಿದ್ರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗ್ತಾರೆ,ಎನ್ನುವ ವಿಚಾರ ಈಗ ತೀವ್ರ ಕುತೂಹಲ ಕೆರಳಿಸಿದೆ.ಮಾಜಿ ಶಾಸಕ ಸಂಜಯ ಪಾಟೀಲ ಅವರು ಬಿಜೆಪಿ ಟಿಕೆಟ್ ಗಾಗಿ ಎಲ್ಲಿಲ್ಲದ ಪ್ರಯತ್ನ ನಡೆಸಿದ್ದಾರೆ.ಜೊತೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಮನವೊಲಿಸಲು ಅನೇಕ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಮರಾಠಾ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಳಿಸುವ ವಿಚಾರವನ್ನು ಬಹಿರಂಗ ಪಡಿಸಿರುವ ಹಿನ್ನಲೆಯಲ್ಲಿ ಸಂಜಯ ಪಾಟೀಲ ಬೆಂಬಲಿಗರು,ಶೀಘ್ರದಲ್ಲೇ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ, ಸಂಜಯ ಪಾಟೀಲ ಅವರನ್ನೇ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಮನವಿ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.