Breaking News

ವಿರೋಧ ಪಕ್ಷದ ಸ್ಥಾನಕ್ಕಾಗಿ, ಕಾಂಗ್ರೆಸ್ಸಿನಲ್ಲಿ ತಿಕ್ಕಾಟ…!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು,ಬಿಜೆಪಿ ನಗರ ಸೇವಕರು,ಮತ್ತು ನಾಯಕರು, ಮಹಾಪೌರ,ಉಪಮಹಾಪೌರ ಯಾರಾಗಬೇಕು ಎಂದು ನಿರ್ಧರಿಸಲು ಇಂದು ಸಂಜೆ ಕೋರ್ ಕಮೀಟಿ ಸಭೆ ನಡೆಸುತ್ತಿದ್ದಾರೆ,ಇನ್ನೊಂದು ಕಡೆ ಕಾಂಗ್ರೆಸ್ ನಗರ ಸೇವಕರು ಹಾಗೂ ಪಕ್ಷೇತರ ನಗರ ಸೇವಕರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ತಿಕ್ಕಾಟ ನಡೆಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಮುಝಮ್ಮಿಲ್ ಡೋಣಿ,ಬಾಬಾಜಾನ್ ಮತವಾಲೆ ಇಬ್ಬರ ನಡುವೆ ತಿಕ್ಕಾಟ ನಡೆದಿದ್ದು ಮುಝಮ್ಮಿಲ್ ಡೋಣಿಗೆ ಸೇಠ ಸಹೋದರರ ಬೆಂಬಲವಿದ್ದು,ಬಾಬಾಜಾನ್ ಮತವಾಲೆಗೆ ಜಾರಕಿಹೊಳಿ ಸಹೋದರರ ಬೆಂಬಲ ಇದೆ,ಎಂದು ಹೇಳಲಾಗುತ್ತಿದ್ದು, ನಿನ್ನೆ ಶನಿವಾರ ರಾತ್ರಿ ಸತೀಶ್ ಜಾರಕಿಹೊಳಿ ಬೆಂಬಲಿಗ ನಗರಸೇವಕರು ಬೆಳಗಾವಿಯ UK27 ಹೊಟೇಲ್ ನಲ್ಲಿ ಪ್ರತ್ಯೇಕವಾಗಿ ಔತನಕೂಟ ಏರ್ಪಡಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಸತೀಶ್ ಜಾರಕಿಹೊಳಿ ಅವರು ಏರ್ಪಡಿಸಿದ ಔತನಕೂಟದಲ್ಲಿ ಅಜೀಂ ಪಟವೇಗಾರ್,ಬಾಬಾಜಾನ್ ಮತವಾಲೆ,ರಿಯಾಜ್ ಕಿಲ್ಲೇದಾರ್,ಶಕೀಲ ಮುಲ್ಲಾ,ಎಂಐಎಂ ನಗರ ಸೇವಕ ಶಾಹೀದ್ ಪಠಾಣ,ಇಮ್ರಾನ್ ಫತೇಖಾನ್ಸೇರಿದಂತೆ ಹಲವಾರು ಜನ ಪಕ್ಷೇತರ ನಗರ ಸೇವಕರು ಭಾಗವಹಿಸಿದ್ದರು.

ಸೇಠ ಸಹೋದರರ ಗುಂಪಿನ ನಗರ ಸೇವಕರು ಸತೀಶ್ ಜಾರಕಿಹೊಳಿ ಅವರು ಏರ್ಪಡಿಸಿದ ಔತನಕೂಟದಲ್ಲಿ ಭಾಗವಹಿಸಿರಲಿಲ್ಲ,ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ,ಸೇಠ ಸಹೋದರರು ಹಾಗೂ ಸತೀಶ್ ಜಾರಕಿಹೊಳಿ ಅವರ ನಡುವೆ ಭಿನ್ನಾಭಿಪ್ರಾಯ ಈಗಲೂ ಇದೆ ಎನ್ನುವದು ಸ್ಪಷ್ಟವಾಗುತ್ತದೆ.

ಮುಝಮ್ಮಿಲ್ ಡೋಣಿ,ಸೇಠ ಗುಂಪಿನಲ್ಲಿ ಗುರುತಿಸಿಕೊಂಡು, ಪಾಲಿಕೆಯ ವಿರೋಧ ಪಕ್ಷದ ಸ್ಥಾನಕ್ಕೆ ಕಸರತ್ರು ನಡೆಸಿದ್ದು, ಬಾಬಾಜಾನ್ ಮತವಾಲೆ ಸತೀಶ್ ಜಾರಕಿಹೊಳಿ ಗುಂಪಿನ ಜೊತೆ ಗುರುತಿಸಿಕೊಂಡು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಲಾಭಿ ನಡೆಸಿದ್ದಾರೆ.

ಈ ಎರಡೂ ಗುಂಪುಗಳಲ್ಲಿ ಇಬ್ಬರು ನಗರಸೇವಕರು ತಿಕ್ಕಾಟ ನಡೆಸಿರುವದನ್ನು ಗಮನಿಸಿರುವ ,ಎರಡು ಗುಂಪುಗಳಲ್ಲಿ ಒಮ್ಮತ ಮೂಡಿಸಲು ಇಮ್ರಾನ್ ಫತೇಖಾನ್ ಸಂಧಾನ ಮಾಡಿಸುವ ಪ್ರಯತ್ನ ನಡೆಸಿದ್ದಾರೆ  ಪಾಲಿಕೆಯ ವಿರೋಧಪಕ್ಷದ ನಾಯಕನ ಸ್ಥಾನಕ್ಕಾಗಿ ಕಾಂಗ್ರೆಸ್ ನಗರಸೇವಕರಲ್ಲಿ ತಿಕ್ಕಾಟ ಶುರುವಾಗಿದೆ.ಈ ತಿಕ್ಕಾಟ ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಂತಿದೆ.ಬೆಳಗಾವಿ ನಗರ ಕಾಂಗ್ರೆಸ್ ನಲ್ಲಿ ಭುಗಿಲೆದ್ದಿರುವ ಭಿನ್ನಾಭಿಪ್ರಾಯ,ಗುಂಪುಗಾರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ್ರೆ,ಬೂದಿ ಮುಚ್ಚಿದ ಕೆಂಡದಂತಿದೆ.

ಇಮ್ರಾನ್ ಫತೇಖಾನ್ ಅವರ ತಾಯಿ ನಗರ ಸೇವಕಿಯಾಗಿದ್ದು,ಇಮ್ರಾನ್ ಫತೇಖಾನ್ ಎರಡೂ ಗುಂಪುಗಳಲ್ಲಿ ಒಮ್ಮತ ಮೂಡಿಸುವ ಪ್ರಯತ್ನ ಮುಂದುವರೆಸಿದ್ದಾರೆ,ಸಂಧಾನದ ಕೊಂಡಿಯಾಗಿ ಶ್ರಮಿಸುತ್ತಿದ್ದಾರೆ.

ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಮುಝಮ್ಮಿಲ್ ಡೋಣಿ ಹಾಗೂ ಬಾಬಾಜಾನ್ ಮತವಾಲೆ ನಡುವೆ ತಿಕ್ಕಾಟ ಮುಂದುವರದಿದ್ದೇ ಆದಲ್ಲಿ ನಗರ ಸೇವಕ ಸೋಹೇಲ್ ಸಂಗೊಳ್ಳಿ ವಿರೋಧ ಪಕ್ಷದ ನಾಯಕನಾಗುವ ಸಾಧ್ಯತೆ ಇದೆ,

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *