ಬೆಳಗಾವಿ-ಶಿವಸೇನೆ ವಕ್ತಾರ, ರಾಜ್ಯ ಸಭೆ ಸದಸ್ಯ ಸಂಜಯ್ ರಾವುತ್ ಸೇರಿ ಇಬ್ಬರಿಗೆ ಬೆಳಗಾವಿಯಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ಬೆಳಗಾವಿಯ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶಮುಸ್ತಫಾ ಹುಸೇನ್‌ರಿಂದ ಆದೇಶ ಮಾಡಲಾಗಿದೆ.50 ಸಾವಿರ ರೂ ಭದ್ರತೆ, ನಿಗದಿತ ಸಮಯದಲ್ಲಿ ಕೋರ್ಟ್‌ಗೆ ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ.
ರಾವುತ್ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಪ್ರಚೋದನಾತ್ಮಕ ಭಾಷಣ ಮಾಡಿರುವ ಆರೋಪದ ಮೇಲೆ,12 ಮೇ 2018ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ ಹಿನ್ನಲೆಯಲ್ಲಿ,ಈ ಸಂಬಂಧ ಟಿಳಕವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದ ಚುನಾವಣೆ ಆಯೋಗದ ಅಧಿಕಾರಿಗಳು,ಸಂಜಯ ರಾವುತ್ ವಿರುದ್ದ ಕೇಸ್ ಹಾಕಿದ್ರು,
ಎರಡು ತಿಂಗಳ ಹಿಂದಷ್ಡೇ ಸಂಜಯ್ ರಾವುತ್‌ಗೆ ಸಮನ್ಸ್ ಜಾರಿಗೊಳಿಸಿದ್ದಬೆಳಗಾವಿಯ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯ,ಡಿಸೆಂಬರ್ 1 ಕ್ಕೆ ಕೋರ್ಟ್‌ಗೆ ಹಾಜರಾಗಿ ಸಮಯ ಕೇಳಿದ್ದ ಸಂಜಯ್ ರಾವುತ್ ಪರ ವಕೀಲರು ನೀರೀಕ್ಷಣಾ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು.