ಬಿಜೆಪಿ ಗೆಲ್ಲಿಸುವ ಸುಫಾರಿಯನ್ನು ಸಿದ್ದರಾಮಯ್ಯ ಪಡೆದಿದ್ದಾರೆ.- ಕುಮಾರಸ್ವಾಮಿ
ಬೆಳಗಾವಿ-ಬಿಜೆಪಿ ಗೆಲ್ಲಿಸುವ ಸುಫಾರಿಯನ್ನು ಸಿದ್ದರಾಮಯ್ಯ ಪಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.ಬೈಲಹೊಂಗಲ ತಾಲೂಕಿನ ತಡಸಲೂರು ಗ್ರಾಮದಲ್ಲಿ ಮಾತನಾಡಿದ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಇಡೀ ರಾಜ್ಯದಲ್ಲಿ ಪಂಚರತ್ನ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಎರಡನೇ ಹಂತದ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ 10 ಅಭ್ಯರ್ಥಿಗಳ ನೇಮಕ,ಸಮರ್ಥವಾದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇನೆ.ಎಂದು ಹೇಳಿದರು.
1994 ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜನತಾ ದಳಕ್ಕೆ ಆಶೀರ್ವಾದ ಮಾಡಿದ್ರು.ಇದೇ ರೀತಿಯ ವಾತಾವರಣ ಇಂದು ಬೆಳಗಾವಿ ಜಿಲ್ಲೆಯಲ್ಲಿ ನಿರ್ಮಾಣ ಆಗಿದೆ.
ಸಾಲ ಮನ್ನಾದಿಂದ ಬೆಳಗಾವಿ ಜಿಲ್ಲೆಗೆ ಅತಿ ಹೆಚ್ಚು ಲಾಭ ಸಿಕ್ಕಿದೆ.ರಾಜ್ಯದಲ್ಲಿ ಮೂರು ಸಾವಿರ ಕೋಟಿ ರೂಪಾಯಿ ಉಪಯೋಗಕ್ಕೆ ಬಂದಿದೆ.ಪ್ರತಿಯೊಂದರಲ್ಲೂ ಅನಕೂಲ ಮಾಡಿದ್ದೀಯಾ ನಿನ್ನ ಋಣ ತೀರಿಸ್ತಿವಿ ಅಂತ ಜನ ಹೇಳಿತ್ತಿದ್ದಾರೆ.ಪಂಚರತ್ನ ಯೋಜನೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತಿದೆ.ಸ್ವತಂತ್ರ ಸರ್ಕಾರದ ಗುರಿ ಇಟ್ಟುಕೊಂಡು ಹೋರಟಿದ್ದೇನೆ.ಅದರಲ್ಲಿ ಯಶಸ್ಸು ಕಾರುಣ ಭರವಸೆ ಇದೆ ಎಂದರು
ಬೆಳಗಾವಿ ಜಿಲ್ಲೆಯಲ್ಲಿ ಯಾವ ದೊಡ್ಡ ನಾಯಕರು ಬರ್ತಾರೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.ಕೋಲಾರದಲ್ಲು ದಲಿತ ಸಿಎಂ ಅಭಿಯಾನ ವಿಚಾರ.ಕಾಂಗ್ರೆಸ್ ನಾಯಕರೇ ಮಾಡುತ್ತಿರಬೇಕು, ನೋಡೊಣ.ದಲಿತ ಸಿಎಂ ಆಗಬಾರದು ಎಂಬುದು ಎಲ್ಲಿಯೂ ಇಲ್ಲ.ಯಾವುದೇ ಸಮಾಜದವರು ಸಿಎಂ ಆಗಲು ಸಂವಿಧಾನದಲ್ಲಿ ಹಕ್ಕು ಇದೆ.
ಶಾಸಕರ ಬೆಂಬಲದ ಸಂಖ್ಯೆಗೆ ಅನುಗುಣವಾಗಿ ಸಿಎಂ ಆಗಬಹುದು.ಚನ್ನಪಟ್ಟಣದಲ್ಲಿ ನಟಿ ರಮ್ಯ ಸ್ಪರ್ಧೆ ಮಾಡ್ತಾರೆ ಅನ್ನೋ ವದಂತಿ ವಿಚಾರ.ಯಾರ ಬೇಕಾದ್ರು ಸ್ಪರ್ಧೆ ಮಾಡಲಿ.ಇದು ಆಯಾ ಪಕ್ಷಕ್ಕೆ ಬಿಟ್ಟ ವಿಚಾರ
ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ, ನನ್ನ ಕೆಲಸ ನಾನು ಮಾಡುತ್ತೇನೆ.ಈಗಲೂ ರಾಮನಗರ, ಚನ್ನಪಟ್ಟಣದಲ್ಲಿ ಜೆಡಿಎಸ್ ಬಗ್ಗೆ ಜನರಲ್ಲಿ ವಿಶ್ವಾಸ ಇದೆ.
ಈ ಸಲ ನನ್ನ ವಿರುದ್ಧ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಇಲ್ಲ.
ಜನರಿಗೆ ನನ್ನ ಮೇಲೆ ವಿಶ್ವಾಸ ಇದೆ.
ಚನ್ನಪಟ್ಟಣದಲ್ಲಿ ಮನೆ ಮಗನಿಂತ ಹೆಚ್ಚಾಗಿ ಪ್ರಿತಿಸುತ್ತಾರೆ.ಎಂದು ಕುಮಾರಸ್ವಾಮಿ ಹೇಳಿದರು.
ಮಗನ ಗೆಲುವಿಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪ್ರಾರ್ಥನೆ ವಿಚಾರ.ಮಗ ಚುನಾವಣೆ ನಿಂತಾಗ ಗೆಲ್ಲಬೇಕು ಎನ್ನುವುದು ಎಲ್ಲಾ ಕುಟುಂಬದಲ್ಲಿ ಇರುತ್ತೆ.
ಇದರ ಬಗ್ಗೆ ಹೆಚ್ಚಿನ ಚರ್ಚೆ ಮಾಡೋದು ಅನಗತ್ಯ.
ಸಿದ್ದರಾಮಯ್ಯ ಕೆಣಕಿ, ಕೆಣಕಿ ಮನೆಗೆ ಹೋಗೊ ಕಾಲ ಬಂದಿದೆ.ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ,
ಈ ಚುನಾವಣೆ ನೋಡೊಣ ಏನಾಗುತ್ತೆ ಅಂತ.
ಕೋಲಾರದಲ್ಲಿ ಏನಾಗುತ್ತೆ ಅಂತ ಕಾದು ನೋಡಿ.
ಸಿದ್ದರಾಮಯ್ಯ, ಯಡಿಯೂರಪ್ಪ ಆತಂತರಿಕವಾಗಿ ವಿಶ್ವಾಸದಲ್ಲಿ ಇದ್ದಾರೆ.2008ರಲ್ಲಿ ಉಪಚುನಾವಣೆಯಲ್ಲಿ 8 ಆಪರೇಷನ್ ಕಮಲದ ಚುನಾವಣೆ.ಚುನಾವಣೆಯಲ್ಲಿ ಸಿದ್ದರಾಮಯ್ಯ ಸುಫಾರಿ ತಗೊಂಡ್ರು.
ಸುಫಾರಿಗೆ ಎಷ್ಟು ತಗೊಂಡಿದ್ದಾರೆ.
ನಾನು ಸಾವಿರ ಸಲ ಕೇಳಿದ್ದೇನೆ ಈವರೆಗೆ ಉತ್ತರ ಸಿಕ್ಕಿಲ್ಲ ಎಂದು ಕುಮಾರಸ್ವಾಮಿ ಅವರು ಸಿದ್ರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ರು..
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಕಾರಣ ಎನ್ನುತ್ತಾರೆ.ರಾಜ್ಯದಲ್ಲಿ ಬಿಜೆಪಿ ಸಧೃಢವಾಗಿ ಬೆಳೆಯಲು ಸಿದ್ದರಾಮಯ್ಯ ನಡುವಳಿಕೆ ಕಾರಣ.
ಮೊದಲು ಅವರು ಆತ್ಮವಾಲೋಕನೆ ಮಾಡಿಕೊಳ್ಳಬೇಕು.
ಈಗಲೂ ಬಿಜೆಪಿ ಗೆಲ್ಲಿಸುವ ಸುಫಾರಿಯನ್ನು ಸಿದ್ದರಾಮಯ್ಯ ಪಡೆದಿದ್ದಾರೆ.ಅವರ ಸಿಎಂ ಆದ್ರೆ ಮಾತ್ರ ಕಾಂಗ್ರೆಸ್, ಇಲ್ಲವೇ ಪಕ್ಷ ಸಂಪೂರ್ಣವಾಗಿ ನಿರ್ಣಾಮ ಆಗಬೇಕು ಎನ್ನುವ ಉದ್ದೇಶ ಅಷ್ಟೇ ಅವರದು.ಸೂರ್ಯ, ಚಂದ್ರ ಇರೋದು ಎಷ್ಟು ನಿಜ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಜ ಎನ್ನುತ್ತಾರೆ.ಕಾಂಗ್ರೆಸ್ ಈ ಬಾರಿ ನೆಲ ಕಚ್ಚಲಿದೆ.ಎಂದು ಕುಮಾರಸ್ವಾಮಿ ಭವಿಷ್ಯ ನುಡಿದ್ರು.