ಬೆಳಗಾವಿ- ಬಾಲಚಂದ್ರ ಜಾರಕಿಹೊಳಿ ಎಲ್ಲ ನಾಯಕರಿಗಿಂರ ಡಿಫ್ರಂಟ್,ಯಾಕಂದ್ರೆ ಅವರ ಆಲೋಚನೆ, ಅವರು ಮಾಡುವ ಸಾಮಾಜಿಕ ಕಾರ್ಯಗಳು, ಕ್ಷೇತ್ರದ ಜನ ಸಂಕಷ್ಟದಲ್ಲಿದ್ದಾಗ ಅವರು ಸ್ಪಂದಿಸುವ ಶೈಲಿಯೂ ವಿಭಿನ್ನ,ಹೀಗಾಗಿ ಅವರನ್ನು ಕ್ಷೇತ್ರದ ಜನ ನಮ್ಮ ಪಾಲಿನ ದೇವರು ಅಂತಾನೇ ಕರೀತಾರೆ.
ಜಾರಕಿಹೊಳಿ ನಿಂತ್ರೆ ಜಾತ್ರೆ,ನಡೆದ್ರೆ ಮೆರವಣಿಗೆ ಅನ್ನೋ ರೀತಿಯಲ್ಲಿ ಜನ ಅವರನ್ನು ಸುತ್ತುವರೆಯುತ್ತಾರೆ.ಜಾರಕಿಹೊಳಿ ಸಹೋದರರಲ್ಲಿ ಬಾಲಚಂದ್ರ ಜಾರಕಿಹೊಳಿ ಅವರನ್ನು ಗೋಕಾಕ್ ತಾಲ್ಲೂಕಿನ ಜನ ಪೂಜ್ಯ ಭಾವನೆಯಿಂದ ನೋಡ್ತಾರೆ, ಯಾಕಂದ್ರೆ ಜನರ ಸಂಕಷ್ಟಗಳಿಗೆ ಅವರು ಸ್ಪಂದಿಸುತ್ತಲೇ ಬಂದಿದ್ದು,ಸಹಾಯ ಕೇಳಲು ಬಾಲಚಂದ್ರ ಜಾರಕಿಹೊಳಿ ಅವರ ಬಳಿ ಹೋದವರು ಯಾವತ್ತೂ ಬರಿಗೈಯಲ್ಲಿ ಮರಳಿದ ಉದಾಹರಣೆ ಇಲ್ಲ.
ಅರಭಾವಿ ಕ್ಷೇತ್ರದ ಎಲ್ಲ ಸಮಾಜಗಳ ಜೊತೆ,ಎಲ್ಲ ವರ್ಗಗಳ ಜೊತೆಗೆ ಆತ್ಮೀಯ ಒಡನಾಟ ಹೊಂದಿರುವ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಕ್ಷೇತ್ರದಲ್ಲಿ,ಸರ್ವೇ ಜನಾ: ಸುಖಿನೋ ಭವಂತು ಮಂತ್ರ ಜಪಿಸುತ್ತಿದ್ದಾರೆ.ಎಲ್ಲ ಸಮಾಜದ ಸಮಾವೇಶಗಳನ್ನು ಪ್ರತ್ಯೇಕವಾಗಿ ನಡೆಸಿ ಆಯಾ ಸಮಾಜದ ಶ್ರೀಗಳನ್ನು ಗೌರವಿಸುವ ಮೂಲಕ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಸಂದೇಶ ಸಾರಿದ್ದು ಬಾಲಚಂದ್ರ ಜಾರಕಿಹೊಳಿ.
ಸವಿತಾ,ಸಮಾಜ,ರೆಡ್ಡಿ ಸಮಾಜ, ಕ್ಷತ್ರೀಯ ಮರಾಠಾ ಸಮಾಜ,ಸೇರಿದಂತೆ ಹತ್ತು ಹಲವು ಸಮಾಜದ ಸಮಾವೇಶಗಳನ್ನು ಮಾಡಿರುವ ಬಾಲಚಂದ್ರ ಜಾರಕಿಹೊಳಿ ಅವರು ಇವತ್ತು ಮೂಡಲಗಿಯಲ್ಲಿ ವಿಶ್ವಕರ್ಮ ಸಮಾಜದ ಸಮಾವೇಶ ನಡೆಸುತ್ತಿರುವದು ವಿಶೇಷ,ಇತ್ತೀಚಿಗೆ ಗೋಕಾಕಿನಲ್ಲಿ ನಡೆದ ಮರಾಠಾ ಸಮಾವೇಶದಲ್ಲಿ, ಮರಾಠಾ ಸಮಾಜಕ್ಕೆ ನಿವೇಶನ ಮಂಜೂರು ಮಾಡಿರುವ ಆದೇಶ ಪ್ರತಿಯನ್ನು ನೀಡುವ ಮೂಲಕ ಬಾಲಚಂದ್ರ ಜಾರಕಿಹೊಳಿ,ಹಾಗೂ ರಮೇಶ್ ಜಾರಕಿಹೊಳಿ ಇಬ್ಬರೂ ಸಹೋದರರು ಮರಾಠಾ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅರಭಾವಿ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಈ ಸಮಾಜದ ಅನಕೂಲಕ್ಕಾಗಿ ಹಲವಾರು ಸೇವಾ ಕಾರ್ಯಗಳನ್ನು ಮಾಡಿರುವ ಬಾಲಚಂದ್ರ ಜಾರಕಿಹೊಳಿ ಲಿಂಗಾಯತ ಸಮಾಜದ ಜನರ ಒಳತಿಗಾಗಿ ಒಂದೂವರೆ ಕೋಟಿ ಸ್ವಂತ ಖರ್ಚಿನಲ್ಲಿ ಕಲ್ಯಾಣ ಮಂಟಪ ನಿರ್ಮಿಸಿದ ವಿಚಾರ ರಾಜ್ಯದ ಗಮನ ಸೆಳೆದಿದೆ. ಇದು ಬಾಲಚಂದ್ರ ಜಾರಕಿಹೊಳಿ ಅವರ ಸ್ಪೇಶ್ಯಾಲಿಟಿ.