Breaking News

ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ!!

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಾಹುಕಾರ್ ಮತ ಬೇಟೆ.

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ಅಭಿಮಾನಿಗಳ ಸಮಾವೇಶ ನಡೆಯಿತು.ರಮೇಶ್ ಜಾರಕಿಹೊಳಿ ಮೇಲೆ ಪುಷ್ಪಗಳನ್ನ ಸುರಿಸಿ ವೇದಿಕೆಗೆ ಅದ್ದೂರಿ ಸ್ವಾಗತ ಮಾಡಲಾಯಿತು.
*ಬಿಜೆಪಿ ಪಕ್ಷದಲ್ಲಿದ್ರೂ ಪಕ್ಷಾತೀತವಾಗಿ ಸಮಾವೇಶ ಮಾಡುತ್ತಿರುವ ರಮೇಶ್ ಜಾರಕಿಹೊಳಿ ಅವರಿಗೆ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದಲ್ಲಿ ಭಾರೀ ಬೆಂಬಲ ಸಿಗುತ್ತಿದೆ.ರಮೇಶ್ ಅಭಿಮಾನಿ ಬಳಗದಿಂದ ಅಭಿಮಾನದ ಕಾರ್ಯಕರ್ತರ ಸಮಾವೇಶ ಹೆಸರಲ್ಲಿ ನಡೆದ ಕಾರ್ಯಕ್ರಮದಲ್ಲಿ
ಸಾವಿರಾರು ಜನ ಅಭಿಮಾನಿಗಳು, ಆಪ್ತರು ಸಮಾವೇಶದಲ್ಲಿ ಭಾಗಿಯಾಗಿದ್ದರು.ಹೆಬ್ಬಾಳ್ಕರ್ ಸೋಲಿಸಲು ಪಣ ತೊಟ್ಟು ಗ್ರಾಮೀಣ ಕ್ಷೇತ್ರದಲ್ಲಿ ಸಮಾವೇಶಗಳನ್ನು ಮಾಡುತ್ತಿರುವ ಸಾಹುಕಾರ್ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಬೃಹತ್ ಸಮಾವೇಶ ಮಾಡಿದ್ದಾರೆ.

ಸಮಾವೇಶದಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಭಾಷಣ.

ಕಳೆದ ಎರಡು ಸಭೆಯಲ್ಲಿ ಮಾತಾಡಿದಾಗ ಕೆಲವು ಅಂಶಗಳನ್ನ ಆಕ್ಷೇಪ ವ್ಯಕ್ತಪಡಿಸಿದ್ರೂ.ನನ್ನ ಮೇಲೆ, ಕಟೀಲ್ ಹಾಗೂ ಬೊಮ್ಮಾಯಿ ಅವರ ಮೇಲೆ ಕೇಸ್ ಕೊಟ್ರೂ.ದುರ್ದೈವ ಸಂಗತಿ ಅಂದ್ರೇ ಕಾಂಗ್ರೆಸ್ ಪಕ್ಷದವರು ರೋಡ್ ಮೇಲೆ ಹಂಚುವುದನ್ನ ಕಂಡು ಸುಮ್ಮನಿದ್ದೇವೆ.
ಇವತ್ತು ಕಾಂಗ್ರೆಸ್ ಪಕ್ಷ ಇಷ್ಟು ಕೆಳಮಟ್ಟಕ್ಕೆ ಬಂದಿರುವುದು ಖೇದ ಆಗುತ್ತೆ,ಗ್ರಾಮೀಣ ಕ್ಷೇತ್ರದಲ್ಲಿ ಮಾಡಿರುವುದನ್ನೇ ರಾಷ್ಟ್ರ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಕಳೆದ ಐದು ವರ್ಷದ ಹಿಂದೆ ನಾವೇ ಎಷ್ಟು ಕಷ್ಟ ಪಟ್ಟು ಶಾಸಕರನ್ನ ಮಾಡಿದ್ದೇವೆ.ರೋಡ್, ಗಟಾರ್ ಮಾಡಿದ್ದೇನೆ ಅಂತಾರೆ ಅದನ್ನ ಗ್ರಾಪಂ, ನಗರ ಸಭೆ ಸದ್ಯರು ಮಾಡ್ತಾರೆ.
ಪಂಚಾಯಿತಿಗೆ ಪಂಡ್ ಬಂದಂಗೆ ಶಾಸಕರಿಗೆ ಬರುತ್ತೆ ಮಾಡ್ತಾರೆ.ಬಾಗೇವಾಡಿಯಲ್ಲಿ ಸುಧಾರಣೆ ಮಾಡಿದ್ದಕ್ಕೆ ಇಬ್ಬರು ಗುತ್ತಿಗೆದಾರರು ದೊಡ್ಡವರಾಗಿದ್ದಾರೆ.
ಅವರು ಗುಂಡೂಗಾರಿ ಮಾಡ್ತಾ, ಅವರೇ ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ ಅಂತಾರೆ ಎಂದು ರಮೇಶ್ ಜಾರಕಿಹೊಳಿಪರೋಕ್ಷವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಟಾಂಗ್ ಕೊಟ್ರು.

ಬಿಜೆಪಿಗೆ ಯಾರು ಅಭ್ಯರ್ಥಿ ಪೈನಲ್ ಆಗಿಲ್ಲ

ನೀರಾವರಿ ಇಲಾಖೆಯಲ್ಲಿ ಗೋಲ್ ಮಾಲ್ ಮಾಡ್ತಿದ್ದಾರೆ ಅಂತಾ ಡಿಕೆ ಶಿವಕುಮಾರ್ ಹೇಳ್ತಿದ್ದಾರೆ.ಹಿರೇಬಾಗೇವಾಡಿ ಗ್ರಾಮದಲ್ಲಿ ಕೆರೆ ಕಟ್ಟುವುದ್ರಲ್ಲಿ ದೊಡ್ಡ ಮಟ್ಟದ ಗೋಲ್ ಮಾಲ್ ಮಾಡ್ತಿದ್ರೂ.ಆ ಗೋಲ್ ಮಾಲ್ ನಲ್ಲಿ ನೂರಾರು ಕೋಟಿ ತಿಂದು ಮುಚ್ಚುವರಿದ್ರೂ.
ಇದೇ ವಿಚಾರದಿಂದ ನಾನು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು.ಗ್ರಾಮೀಣ ಕ್ಷೇತ್ರ, ಬೆಳಗಾವಿ ರಾಜಕೀಯವಾಗಿ ನಾವು ತಯಾರು ಮಾಡಿರುವ ಕ್ಷೇತ್ರ.ಇಲ್ಲಿನ ಶಾಸಕರು ಎದೆ ತಟ್ಟಿಕೊಂಡು ನಾನೇ ಅಭಿವೃದ್ಧಿ ಮಾಡಿದೆ ಅಂತಾರೆ.ಬಿಜೆಪಿ ಸರ್ಕಾರ ಇದೆ ಅವರು ಅನುದಾನ ಕೊಟ್ಡಿದ್ದಾರೆ.ಬರೀ ಸುಳ್ಳು ಹೇಳ್ತಾರೆ ಕಮಿಷನ್‌ಗೆ ಬೆನ್ನು ಬಿದ್ದಿದ್ದಾರೆ.ಇನ್ನೂ ಎರಡು ತಿಂಗಳಲ್ಲಿ ಎಲ್ಲವೂ ಖಾಲಿ ಆಗುತ್ತೆ.ಅವರ ಗಾಡಿಯಲ್ಲಿ ಮಗ, ತಮ್ಮ ಏಜೆಂಟರ್‌ಗಳು ಉಳಿಯುತ್ತಾರೆ.ಚುನಾವಣೆ ನಂತರ ಹೆಬ್ಬಾಳ್ಕರ್ ಜತಗೆ ಯಾರು ಇರಲ್ಲಾ ಎಂದು ರಮೇಶ್ ಜಾರಕಿಹೊಳಿ ಕಿಡಿಕಾರಿದ್ರು.ಬಿಜೆಪಿಗೆ ಯಾರು ಅಭ್ಯರ್ಥಿ ಪೈನಲ್ ಆಗಿಲ್ಲ ವರಿಷ್ಠರ ಹೇಳಿದಂತೆ ಆಯ್ಕೆ ಮಾಡೋಣ‌.
ಒಳ್ಳೆ ಅಭ್ಯರ್ಥಿ ಕೊಡಿ ಅಂತಾ ಅವರ ಬಳಿ ಬೇಡಿಕೊಳ್ತೇವಿ.
ದಿನಗಳಲ್ಲಿ ಪಕ್ಷದ ವೇದಿಕೆಯಲ್ಲಿ ಎಲ್ಲರನ್ನೂ ಕರೆದುಕೊಂಡು ಕಾರ್ಯಕ್ರಮ ಮಾಡ್ತೇನಿ.ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು.

ಆಡಿಯೋ ಎಡಿಟ್ ಮಾಡಿ ಕಿತ್ತೂರು ಚನ್ನಮ್ಮಗೆ ಅಪಮಾನ ಮಾಡಿದ್ದಾರೆ

ಮಹಾನಾಯಕ, ಗ್ರಾಮೀಣ ಶಾಸಕಿ ಬಗ್ಗೆ ನಾನು ಪೋನ್ ನಲ್ಲಿ ಮಾತಾಡ್ತಿದ್ದೆ.ಗ್ರಾಮೀಣ ಶಾಸಕಿ ವಿಧಾನಸಭೆಯಲ್ಲಿ ಕಿತ್ತೂರು ಚನ್ನಮ್ಮ ವಂಶಸ್ಥರು ಅಂತಾ ಮಾತಾಡ್ತಿದ್ರೂ.
ಆಗ ನಾನು ಪೋನ್ ನಲ್ಲಿ ಚನ್ನಮ್ಮ ವಂಶಸ್ಥರು ಅಂತಾರೆ ಅಂತಾ ಶಾಸಕಿ ಬಗ್ಗೆ ಕೆಟ್ಟ ಶಬ್ದ ಮಾತಾಡಿದ್ದೆ.
ಈಗ ಆ ಆಡಿಯೋವನ್ನ ಎಡಿಟ್ ಮಾಡಿ ಕಿತ್ತೂರು ಚನ್ನಮ್ಮಗೆ ಅಪಮಾನ ಮಾಡಿದ್ದಾರೆ ಅಂತಾ ಮಾಡಲು ಹೊರಟ್ಟಿದ್ದಾರೆ.
ಚುನಾವಣೆ ವೇಳೆ ಕಿತ್ತೂರು ಚನ್ನಮ್ಮಗೆ ಅಪಮಾನ ಆದ್ರೇ ಅದಕ್ಕೆ ಡಿಕೆಶಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಹೊಣೆ ಅಂದ್ರು ರಮೇಶ್.

ರಾಜಹಂಸಗಡಕ್ಕೆ ಸಿಎಂ ಬರ್ತಾರೆ ನಾನೂ ಹೋಗ್ತೀನಿ

ರಾಜಂಹಸಗಡ ಕೋಟೆಯಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಉದ್ಘಾಟನೆ ಮಾಡ್ತಿದ್ದಾರೆ.ಅದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಎಲ್ಲರನ್ನ ತರ್ತಾರೆ ಅಂತಾ ಗೊತ್ತಾಗಿದೆ.
ಬೊಮ್ಮಾಯಿ ಅವರು ಇನ್ನೂ ಜೀವಂತ ಇದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರಿದ್ದಾರೆ.
ಈ ಕಾರ್ಯಕ್ರಮಕ್ಕೆ ಇಡೀ ಕಾಂಗ್ರೆಸ್ ನಾಯಕರ ಲಿಸ್ಟ್ ಕೊಟ್ಟಿದ್ದಾರೆ.ಅದಕ್ಕೆ ಪ್ರತಿಭಟನೆ ಮಾಡ್ತೇವಿ ಶಿವಾಜಿ ಪುತ್ಥಳಿ ಕಾರ್ಯಕ್ರಮ ಸರ್ಕಾರದಿಂದ ಆಗಬೇಕು.
ಐದನೇ ತಾರಿಖೀಗೆ ಕಾರ್ಯಕ್ರಮ ಆಗಬೇಕು ಅಲ್ಲಿ ನಾನು ವಿಜಿಟ್ ಮಾಡ್ತೇನಿ.ಅದು ಸರ್ಕಾರಿ ಕಾರ್ಯಕ್ರಮ ಅಲ್ಲಿ ಎನಾದ್ರೂ ಹೆಚ್ಚು ಕಮ್ಮಿ ಆದ್ರೇ ಅದಕ್ಕೆ ಅವರೇ ಜವಾಬ್ದಾರಿ.
ನೀವೆನಾದ್ರೂ ಮಾಡಿಕೊಳ್ಳುವುದಿದ್ರೇ ಮನೆಯಲ್ಲಿ ಮಾಡಿಕೊಳ್ಳಿ.ಎಂದು ರಮೇಶ್ ಜಾರಕಿಹೊಳಿ ಸವಾಲ್ ಹಾಕಿದ್ದಾರೆ.

ಅವರು ಎನ್ ಕೊಡ್ತಾರೆ ಎರಡು ಪಟ್ಟು ಕೊಡಲು ರೆಡಿ.

ಗ್ರಾಮೀಣ ಶಾಸಕಿಯನ್ನ ಈ ಚುನಾವಣೆಯಲ್ಲಿ ಸೋಲಿಸಬೇಕು.ಇಲ್ಲವಾದ್ರೇ ನಿಮ್ಮ ಜಮೀನು, ಮನೆ ಹೋಗ್ತವೆ.ಶಾಸಕರ ಸಂಬಂಧಿಕರೇ ಮೊದಲು ನಿಮ್ಮ ಜಮೀನು ಮಾರಬೇಕಾಗುತ್ತೆ.ಈ ಚುನಾವಣೆ ಬಹಳ ಮುಖ್ಯವಾದ ಚುನಾವಣೆ ಇದೆ.ಚುನಾವಣೆಯಲ್ಲಿ ಅವರು ಎನ್ ಮಾಡ್ತಾರೆ ಅದಕ್ಕೆ ನಾವು ಗಟ್ಟಿ ಇದ್ದೇವೆ.
ಅವರು ಎನ್ ಕೊಡ್ತಾರೆ ಎರಡು ಪಟ್ಟು ಕೊಡಲು ರೆಡಿ.
ಪರೋಕ್ಷವಾಗಿ ಚುನಾವಣೆಯಲ್ಲಿ ಖರ್ಚು ಮಾಡಲು ರೆಡಿ ಎಂದ ರಮೇಶ್.ಇಲ್ಲಿ ನಿಮ್ಮ ಜಾತಿವರು ಅಂತಾರೆ, ಪಶ್ಚಿಮ ಕಡೆ ಹೋಗಿ ನಿಮ್ಮ ಮಗಳು ಅಂತಾರೆ.
ಬಹಳ ಕಲಾಕಾರ ಇದಾರೆ ಅವರು ಎನೋ ಪಾಪ ಇರಲಿ ಅಂತಾ ಆಯ್ಕೆ ಮಾಡಿ ಎನ್ನುತ್ತಿದ್ದೇವೆ.
ರಾಜ್ಯಕ್ಕೆ ಒಳ್ಳೆಯದಾಗಬೇಕು ಅಂದ್ರೇ ನೀವು ಗಟ್ಟಿಯಾಗಿ ಚುನಾವಣೆ ಮಾಡಬೇಕು.ಗ್ರಾಮೀಣ ಭಾಗದಲ್ಲಿ ನಾಲ್ಕು ವರ್ಷದಿಂದ ಸಂಘಟನೆ ಕುಂಠಿತ ಆಗಿತ್ತು.
ಈಗ ಎಲ್ಲರೂ ಒಂದೇ ವೇದಿಕೆಯಲ್ಲಿ ಬರುತ್ತೇವೆ ಅಭಿವೃದ್ಧಿ ಮಾಡುತ್ತೇವೆ ಎಂದ ರಮೇಶ್ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳಕರ ವಾಗ್ದಾಳಿ ನಡೆಸಿದ್ರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *