ಬೆಳಗಾವಿ-ಯುವಕನ ಕೊಲೆ ಮಾಡಿ ಬಾವಿಗೆ ಎಸೆದು ಹಂತಕರು ಪರಾರಿಯಾದ ಘಟನೆ,ಬೆಳಗಾವಿ ತಾಲೂಕಿನ ಬಸರಿಕಟ್ಟಿ ಹೊರವಲಯದಲ್ಲಿ ನಡೆದಿದೆ.
32 ವರ್ಷದ ಮಾರುತಿ ಕನ್ನೀಕರ್ ಕೊಲೆಯಾದ ಯುವಕನಾಗಿದ್ದಾನೆ.ಬಸರಿಕಟ್ಟಿಯಲ್ಲಿ ಫೋಟೋ ಸ್ಟುಡಿಯೋ ಇಟ್ಟುಕೊಂಡಿದ್ದ ಮಾರುತಿ,
ಜೊತೆಗೆ ಜಮೀನಿನಲ್ಲಿ ಕೋಳಿ ಫಾರಂ ಮಾಡಿಕೊಂಡಿದ್ದ,
ಲನಿನ್ನೆ ರಾತ್ರಿ ಮನೆಯಿಂದ ಕೋಳಿ ಫಾರಂಗೆ ತೆರಳುತ್ತಿರೋದಾಗಿ ಹೇಳಿ ತೆರಳಿದ್ದ ಮಾರುತಿಯ ಶವ ಇಂದು ಬಾವಿಯಲ್ಲಿ ಪತ್ತೆಯಾಗಿದೆ.
ಈ ವೇಳೆ ಊರ ಹೊರವಲಯದಲ್ಲಿ ಮದ್ಯಪಾನ ಮಾಡುತ್ತಿದ್ದ ಕೆಲ ಪರಿಚಯಸ್ಥ ಯುವಕರು,ಯುವಕರು ಕರೆದ ಹಿನ್ನೆಲೆ ಅವರ ಬಳಿ ತೆರಳಿದ್ದ ಮಾರುತಿಗೆಈ ವೇಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ,
ಬಳಿಕ ಜಮೀನಿನೊಂದರ ಬಾವಿಯಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದುಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ