Breaking News
Home / Breaking News / ಶಾಸಕ ಅಭಯ ಪಾಟೀಲರ ಸಲಹೆಗೆ, ಸಚಿವೆ ಶೋಭಾ ಕರಂದ್ಲಾಚೆ ಮೆಚ್ಚುಗೆ!!

ಶಾಸಕ ಅಭಯ ಪಾಟೀಲರ ಸಲಹೆಗೆ, ಸಚಿವೆ ಶೋಭಾ ಕರಂದ್ಲಾಚೆ ಮೆಚ್ಚುಗೆ!!

ಶಾಸಕ ಅಭಯ ಪಾಟೀಲರ ಸಲಹೆ,ವಿಭಿನ್ನ ಜೊತೆಗೆ ಅರ್ಥಪೂರ್ಣ!

ಬೆಳಗಾವಿ-ಕುಂದಾನಗರಿಯಲ್ಲಿ ನಡೆಯಲ್ಲಿರುವ ಮೋದಿ ಶೋಡ್ ಶೋ ವಿಭಿನ್ನ- ವಿಶಿಷ್ಟವಾಗಿ ನಡೆಸಲು ಅಭಯ್ ಪಾಟೀಲ್ ಭರ್ಜರಿ ತಯಾರಿ ನಡೆಸಿದ್ದಾರೆ.
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮುಂದಿಟ್ಟುಕೊಂಡು ಇದೇ ಫೆ.27ರಂದು ಕುಂದಾನಗರಿ ಬೆಳಗಾವಿಗೆ ಆಗಮಿಸಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನ ವಿಶಿಷ್ಟ ರೀತಿಯಲ್ಲಿ ಬರಮಾಡಿಕೊಳ್ಳಲು ಸಿದ್ಧತೆ ನಡೆದಿದೆ.

ಬೆಳಗಾವಿಯ ಸಿಪಿಎಡ್ ಮೈದಾನಕ್ಕೆ ಅಂದು ಮದ್ಹಾಹ್ನ ಬಂದಿಳಿಯಲ್ಲಿರುವ ಪ್ರಧಾನಿಗೆ ದೇಶದಲ್ಲಿಯೇ ವಿನೂತನ ರೀತಿಯ ಸ್ವಾಗತಕ್ಕೆ ಪ್ಲ್ಯಾನ್ ನಡೆದಿದೆ. ಶಾಸಕರು,ಸಚಿವರು, ನಾಯಕರ ಬದಲು ದೇಶದಲ್ಲಿ ಪ್ರಥಮ ಬಾರಿ ಶ್ರಮಿಕ‌ ವರ್ಗದವರಿಂದಲೇ ಹೂ ನೀಡಿ ಸ್ವಾಗತಿಸಲು ಚಿಂತನೆ ನಡೆದಿದೆ.ಸ್ವಾಗತವನ್ನು ಪೌರಕಾರ್ಮಿಕ, ರೈತ, ಕೃಷಿ ಕೂಲಿ ಕಾರ್ಮಿಕ, ಕಟ್ಟಡ ಕಾರ್ಮಿಕ, ಅಟೋ‌ ಚಾಲಕ, ಕ್ಷೌರೀಕ, ಅಗಸ, ಟೇಲರ್,ನೇಕಾರ, ಹೀಗೆ ಹತ್ತು ಜನ ಕಾಯಕಯೋಗಿಗಳು ಸ್ವಾಗತ ಮಾಡಬೇಕು ಎಂದು ಶಾಸಕ ಅಭಯ ಪಾಟೀಲ ಅವರು,ಇಂದು ಸವರ್ಣ ವಿಧಾನಸೌಧದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಚೆ ಅವರಿಗೆ ಸಲಹೆ ನೀಡಿದ್ದು,ಈ ಅಲಹೆ ಅತ್ಯುತ್ತಮವಾಗಿದ್ದು,ಅರ್ಥಪೂರ್ಣವಾಗಿದ್ದು ಅಭಯ ಪಾಟೀಲರು ನೀಡಿರುವ ಸಲಹೆ ಸೂಕ್ತವಾಗಿದ್ದು, ಈ ಬಗ್ಗೆ ವಿಶೇಷ ಗಮನ ಹರಿಸುವಂತೆ,ಸಚಿವೆ ಶೋಭಾ ಕರಂದ್ಲಾಚೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಇದಕ್ಕೆ ಪ್ರಧಾನಿ ಕಾರ್ಯಾಲಯದಲ್ಲಿ ಗ್ರೀನ್ ಸಿಗ್ನಲ್‌ ಸಿಕ್ಕಲ್ಲಿ ಬೆಳಗಾವಿಯ ಪ್ರಧಾನಿ ಸ್ವಾಗತ ಕಾರ್ಯಕ್ರಮ ರಾಷ್ಟ್ರದ ಗಮನ ಸೆಳೆಯುವಲ್ಲಿ ಅನುಮಾನವೇ ಇಲ್ಲ.

ಇನ್ನೂ ಸಿಪಿಎಡ್ ಮೈದಾನದಿಂದ ಅಂದಾಜು 10ಕಿ.ಮೀ.ರೋಡ ಶೋ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ತಮ್ಮ ಕ್ಷೇತ್ರಕ್ಕೆ ಮೋದಿ ರೋಡ್ ಶೋ ಎಂಟ್ರಿಯಾಗುತ್ತಿದ್ದಂತೆಯೇ ರಸ್ತೆಯುದ್ಧಕ್ಕೂ ಸಾಂಸ್ಕೃತಿಕ ಲೋಕವೇ ಅನಾವರಣಗೊಳ್ಳುವಂತೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.ರೋಡ ಶೋ ನಡೆಯುವ ರಸ್ತೆಯ ಎರಡೂ ಬದಿಗಳಲ್ಲಿ ಭಾರತದ ಬೇರೆ ಬೇರೆ ರಾಜ್ಯ, ಪ್ರಾಂತಗಳ ವಿಶಿಷ್ಟ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಏರ್ಪಡಿಸಲು ತಯಾರಿ ಮಾಡಿಕೊಂಡಿದ್ದಾರೆ.

ಅಷ್ಟೇ ಏಕೆ ಬೆಳಗಾವಿಯ ಮಹಾನ್ ನಾಯಕರ ಮಹಾಪುರುಷರ ಪರಿಚಯ ಮಾಡುವ ಭಿತ್ತಿಚಿತ್ರಗಳ ಹಾಕಲು ತಯಾರಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು ಭಾರತ ಹೇಗಿತ್ತು ಈಗ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತ ಯಾವ ರೀತಿಯಲ್ಲಿ ಬದಲಾಗಿದೆ ಅನ್ನೋದನ್ನು ಬಿತ್ತಿಚಿತ್ರಗಳ ಮೂಲಕ ಸಂದೇಶ ಸಾರಲು ಶಾಸಕ ಅಭಯ ಪಾಟೀಲ ಸಿದ್ಧತೆ ನಡೆಸಿದ್ದಾರೆ.

ಒಟ್ಟಾರೆ ದೇಶದಲ್ಲಿಯೇ‌ ವಿನೂತನ, ವಿಶಿಷ್ಟ ರೀತಿಯಲ್ಲಿ ದೇಶದ ಪ್ರಧಾನಿ‌ ಸ್ವಾಗತಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿರುವ ಶಾಸಕ ಅಭಯ ಪಾಟೀಲ ವಿಭಿನ್ನ ಆಲೋಚನೆಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಮಾರ್ಗದ ವಿವರ

ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಹೆಲಿಕಾಪ್ಟರ್ ಮೂಲಕ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಕ್ಲಬ್ ರಸ್ತೆ,ಕಾಲೇಜು ರಸ್ತೆ, ಧರ್ಮವೀರ ಸಂಬಾಜಿ ವೃತ್ತ,ರಾಮಲಿಂಗಖಿಂಡ ಗಲ್ಲಿ, ಶನಿ ಮಂದಿರ,ಕಪಿಲೇಶ್ವರ ರೇಲ್ವೆ ಸೇತುವೆ,ಶಿವಾಜಿ ಉದ್ಯಾನವನ,ಶಿವಚರಿತ್ರೆ ರಸ್ತೆ,ಮೂಲಜ ಸಂಚರಿಸಿ ಯಡಿಯೂರಪ್ಪ ಮಾರ್ಗದ ಮೂಲಕ ಮಾಲಿನಿ ಸಿಟಿಗೆ ತಲುಪಲಿದೆ.

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *