ಬೆಳಗಾವಿ- ವಿಧಾನಸಭೆಯ ಚುನಾವಣೆ ಸಮೀಪ ಬಂದಾಗ,ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಡಾ.ರವಿ ಪಾಟೀಲ ಅವರು ಪ್ರದರ್ಶಿಸಿದ ನಾಟಕ ಬೆಳಗಾವಿ ಜಿಲ್ಲೆಯ ಜನರ ಗಮನ ಸೆಳೆದಿದೆ.
ಅದು ಎಂಎಲ್ಎ ಇಲೆಕ್ಷನ್ ಇರಲಿ,ಅಥವಾ ಎಂಪಿ ಇಲೆಕ್ಷನ್ ಇರಲಿ ಯಾವುದೇ ಇಲೆಕ್ಷನ್ ಬಂದ್ರೂ ಸಹ ಎಲ್ಲ ಇಲೆಕ್ಷನ್ ಗಳಲ್ಲಿ ಡಾ.ರವಿ ಪಾಟೀಲ ಅವರು ಬಿಜೆಪಿ ಟಿಕೆಟ್ ಕೇಳ್ತಾರೆ, ಕೊನೆಯ ಹಂತದವರೆಗೂ ಡಾ.ರವಿ ಪಾಟೀಲ ಅವರೇ ಪ್ರಬಲ ಆಕಾಂಕ್ಷಿಯಾಗಿರ್ತಾರೆ.ಇಲೆಕ್ಷನ್ ಬಂದಾಗ ಡಾ. ರವಿ ಪಾಟೀಲ ಫುಲ್ ಆ್ಯಕ್ಟೀವ್ ಆಗಿರ್ತಾರೆ,ಟಿಕೆಟ್ ಸಿಗಲಿಲ್ಲ ಅಂದ್ರೆ ಡಾಕ್ಟರ್ ಸಾಹೇಬ್ರು ಮತ್ತೆ ಆಸ್ಪತ್ರೆಯಲ್ಲಿ ಬ್ಯಸಿ ಆಗಿ ಬಿಡ್ತಾರೆ,ಇದು ಡಾ.ರವಿ ಪಾಟೀಲ ಅವರ ಸ್ಪೇಶ್ಯಾಲಿಟಿ.
ಈ ಬಾರಿಯೂ ಡಾ.ರವಿ ಪಾಟೀಲ ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ,ಇಲೆಕ್ಷನ್ ಬರುತ್ತಿದ್ದಂತೆಯೇ ಡಾ.ರವಿ ಪಾಟೀಲ ಬೆಳಗಾವಿ ನಗರದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ನಾಟಕ ಪ್ರದರ್ಶಿಸಲು ಲಕ್ಷಾಂತರ ರೂ ಖರ್ಚು ಮಾಡಿ,ಬೆಳಗಾವಿ ಜಿಲ್ಲೆಯಲ್ಲಿ ಎಲ್ಲರ ಮೆಚ್ವುಗೆಗೆ ಡಾ.ರವಿ ಪಾಟೀಲ ಪಾತ್ರರಾಗಿದ್ದಾರೆ.
ಪ್ರತಿ ಬಾರಿಯೂ ಡಾ.ರವಿ ಪಾಟೀಲ ಅವರಿಗೆ ಬಿಜೆಪಿ ನಾಯಕರು ಟಿಕೆಟ್ ಕೊಡದೇ ಕೈ ಕೊಡುತ್ತಲೇ ಬಂದಿದ್ದು,ಈ ಬಾರಿ ಟಿಕೆಟ್ ಸಿಗದಿದ್ದರೆ,ಬಂಡಾಯದ ಬಾವುಟ ಹಾರಿಸುವದಾಗಿ ಡಾ.ರವಿ ಪಾಟೀಲ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡ ವಿಚಾರ ಈಗ ಬಿಜೆಪಿ ನಾಯಕರ ಕಿವಿಗೂ ಬಿದ್ದಿದೆ. ಡಾಕ್ಟರ್ ಸಾಹೇಬ್ರು ಬಂಡಾಯದ ವಿಚಾರ ಹರಿಬಿಟ್ಟು ಬಿಜೆಪಿಗೆ ಇಂಜೆಕ್ಷನ್ ಕೊಡಲು ಹೊರಟಿದ್ದರು,ಆದ್ರೆ ಈ ಇಂಜೆಕ್ಷನ್ ರಿಯಾಕ್ಷನ್ ಆಗಿದೆ ಅನ್ನೋ ಸುದ್ಧಿಯೂ ಇದೆ.
ಡಾ.ರವಿ ಪಾಟೀಲ ಈ ಬಾರಿ ನನಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಬಂಡಾಯದ ಬಾವುಟ ಹಾರಿಸುವದಾಗಿ ಆಪ್ತರಬಳಿ ಹೇಳಿಕೊಂಡ ವಿಚಾರದ ಕುರಿತು ಬಿಜೆಪಿ ನಾಯಕರು ರವಿ ಪಾಟೀಲ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಳಗಾವಿ ಉತ್ತರದಲ್ಲಿ ಬಿಜೆಪಿ ಶಾಸಕರು ಇದ್ದಾರೆ ಇವರನ್ನು ಬಿಟ್ಟು ಬೇರೆ ನಾಯಕರಿಗೆ ಟಿಕೆಟ್ ಕೊಡಲು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ. ಒಟ್ಟಾರೆ ಇಲೆಕ್ಷನ್ ಬಂದಾಗ ಡಾ.ರವಿ ಪಾಟೀಲ ಅವರು ಪ್ರದರ್ಶಿಸಿದ ನಾಟಕ ಎಲ್ಲರ ಗಮನ ಸೆಳೆದಿದ್ದು ನಿಜ
ಡಾ. ರವಿ ಪಾಟೀಲ ಇಲೆಕ್ಷನ್ ಬಂದಾಗ ಪ್ರತ್ಯಕ್ಷವಾಗ್ತಾರೆ,ಆದ್ರೆ ಹಲವಾರು ದಶಕಗಳಿಂದ ಬಿಜೆಪಿ ಪಕ್ಷದಲ್ಲಿ ನಿಷ್ಠೆಯಿಂದ ಸೇವೆ ಮಾಡುತ್ತ ಬಂದಿರುವ ಎಂ.ಬಿ ಝಿರಲಿ,ರಾಜೇಂದ್ರ ಹರಕುಣಿ ಯಂತಹ ನಾಯಕರಿಗೆ ಟಿಕೆಟ್ ಸಿಗದಿದ್ದರೂ ಅವರು ಯಾವತ್ತೂ ಬಂಡಾಯದ ಕುರಿತು ತುಟಿ ಬಿಚ್ವಿಲ್ಲ.ಟಿಕೆಟ್ ಕೊಡದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದೆ ಮಾಡ್ತೀನಿ ಎಂದು ಯಾವತ್ತೂ ಪಕ್ಷಕ್ಕೆ ಬ್ಲ್ಯಾಕ್ ಮೇಲ್ ಮಾಡಿಲ್ಲ, ಟಿಕೆಟ್ ಸಿಗಲಿ ಬಿಡಲಿ,ಇವರು ಯಾವತ್ತೂ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷದ ಸೇವೆ ಮಾಡುತ್ತಲೇ ಇದ್ದಾರೆ.
ಡಾ.ರವಿ ಪಾಟೀಲ ಅವರು ಧೈರ್ಯ ಮಾಡಿ ವೀರರಾಣಿ ಚನ್ನಮ್ಮಾಜಿಯ ನಾಟಕ ಪ್ರದರ್ಶನ ಮಾಡಿಸಿದ್ದು, ಕನ್ನಡಿಗರ ಪರವಾಗಿ ಡಾ.ರವಿ ಪಾಟೀಲ ಅವರು ಮಾಡಿದ ಕಾರ್ಯ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.ಡಾ.ರವಿ ಪಾಟೀಲ ಅವರ ಕನ್ನಡದ ಸೇವೆ ಬಿಜೆಪಿಯ ಇತರ ನಾಯಕರಿಗೆ ಮಾದರಿಯಾಗಿದೆ.