ಕೆಲವು ದಿನಗಳ ಗೆಳೆಯ ಗಿಳಿ ಇಂದು ಸಂಜೆ ಮೃತಪಟ್ಟಿದೆ. ಕೆಲ ದಿನಗಳ ಹಿಂದೆ ಬೆಳಗಾವಿಯ ಸರ್ಕ್ಯೂಟ್ ಹೌಸ್ ನಲ್ಲಿ ಮರದ ಮೇಲಿಂದ ಗಿಳಿಯೊಂದು ಬಿದ್ದಿತ್ತು. ಮೇಲಿಂದ ಬಿದ್ದು ಕಾಲು ಮುರಿದುಕೊಂಡಿದ್ದ ಮುದ್ದಾದ ಗಿಳಿಗೆ ಮಾಧ್ಯಮ ಮಿತ್ರರಾದ ನಮ್ಮ ವಿಡಿಯೋ ಜರ್ನಲಿಸ್ಟ್ ಪ್ರತಾಪ್, ಪ್ರವೀಣ, ವಿನಾಯಕ ರಕ್ಷಣೆ ನೀಡಿದ್ದರು.
ಕೆಲಸ ಒತ್ತಡದ ನಡುವೆ ಗಿಳಿಗೆ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಸಹ ಕೊಡಿಸಿದ್ರು. ನಂತರ ಬೆಳಗ್ಗೆ, ಸಂಜೆ ಅದಕ್ಕೆ ಔಷಧಿ ನೀಡಿದ್ದರು. ಗಿಳಿಗಾಗಿ ಸೀಬೆ ಹಣ್ಣು, ಹಸಿ ಮೆಣಸಿನಕಾಯಿ ಆಹಾರ ಸಹ ನೀಡುತ್ತಿದ್ದರು. ಕೊರೊನಾ ಸಮಯದಲ್ಲಿ ಸಿಕ್ಕ ಗಿಳಿ ಕೊರೊನಾ ಗಿಳಿ ಅಂತಾನೇ ಫೇಮಸ್ ಆಗಿತ್ತು. ಆದರೆ ಗಿಳಿಯ ಆರೋಗ್ಯದಲ್ಲಿ ಮಾತ್ರ ಯಾವುದೇ ರೀತಿ ಚೇತರಿಕೆ ಕಂಡಿರಲಿಲ್ಲ. ಇಂದು ಬೆಳಗ್ಗೆ ಪಶು ವೈದ್ಯ ಡಾ. ಆನಂದ್ ಪಾಟೀಲ್ ಗಿಳಿಯ ಆರೋಗ್ಯ ತಪಾಸಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಗಿಳಿಗೆ ಪಾರ್ಶ್ವವಾಯು ಆಗಿದೆ ರಾಣಿಕೇತ್ ರೋಗ…ಅಂತಾ ಬೇರೊಂದು ಔಷಧಿ ನೀಡಿದ್ದರು. ಗಿಳಿಗೆ ತಿನ್ನಿಸಲು ನವಣಿ ಸಹ ತರಲಾಗಿತ್ತು. ಆದರೆ ದುರದೃಷ್ಟವಶಾತ್ ಇಂದು ಸಂಜೆಯ ವೇಳೆಗೆ ಗಿಳಿ ಕೊನೆಯುಸಿರೆಳೆಯಿತು. ರಾತ್ರಿ 8.35ಕ್ಕೆ ಗಿಳಿ ಅಂತ್ಯಕ್ರಿಯೆ ನಡೆಸಲಾಯಿತು. ಇಷ್ಟು ದಿನ ಪ್ರೀತಿಯಿಂದ ಆರೈಕೆ ಮಾಡಿದ್ದ ಮುದ್ದಾದ ಗಿಳಿಯ ಅಂತ್ಯಕ್ರಿಯೆ ವೇಳೆ ವಿಡಿಯೋ ಜರ್ನಲಿಸ್ಟ್‌ಗಳು, ರಿಪೋಟರ್ಸ್ ಪಾಲ್ಗೊಂಡಿದ್ದರು.
– ಪ್ರತ್ಯಕ್ಷದರ್ಶಿಗಳು