ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಉಡುಗೊರೆ ಗಳ ಹಂಚಿಕೆ,ಬಾಡೂಟ,ಜೋರಾಗಿಯೇ ನಡೆದಿತ್ತು,ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಇಬ್ಬರು ಆಪ್ತರ ಮೇಲೆ ಕೇಸ್ ದಾಖಲಾಗಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂತಿ ಬಸ್ತವಾಡದಲ್ಲಿ ನಡೆದ ರಾಜಕೀಯ ಕಾರ್ಯಕ್ರಮದಲ್ಲಿ ಮೂರು ಸಾವಿರ ಜನರಿಗೆ ಬಾಡೂಟ ಮಾಡಿಸಿದ ದೂರು ಬಂದ ಹಿನ್ನಲೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮನ್ನೋಳಕರ,ಹಾಗು ರಮೇಶ್ ಜಾರಕಿಹೊಳಿ ಅವರ ಆಪ್ತ ನಾಗೇಂದ್ರ ಬಾಳಪ್ಪ ನಾಯಕ ಇಬ್ಬರ ವಿರುದ್ಧ ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಸಂತಿ ಬಸ್ತವಾಡದಲ್ಲಿ ಬಾಡೂಟದ ಕುರಿತು ದೂರು ಬಂದ ಹಿನ್ನಲೆಯಲ್ಲಿ ದಾಳಿ ಮಾಡಿರುವ ಅಧಿಕಾರಿಗಳ ವಿಶೇಷ ತಂಡ, ಚುನಾವಣಾ ಆಯೋಗದ ಆದೇಶ ಉಲ್ಲಂಘಿಸಿ ಬಾಡೂಟದ ವ್ಯವಸ್ಥೆ ಮಾಡಿದ ರಮೇಶ್ ಜಾರಕಿಹೊಳಿ ಅವರ ಇಬ್ಬರು ಆಪ್ತರ ಮೇಲೆ ಕೇಸ್ ಬಿದ್ದಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣೆ ಘೋಷಣೆಯಾಗುವ ಮುನ್ನವೇ ಅನೇಕ ಉಡುಗೊರೆ ಹಂಚಲು, ಬಗೆಬಗೆಯ ಗೀಪ್ಟ್ ಕೊಡಲು ಕೆಲವರು ತಯಾರಿ ಮಾಡಿಕೊಂಡಿದ್ದರು.ಆದ್ರೆ ಚುನಾವಣಾ ಆಯೋಗದ ಮುಂಜಾಗ್ರತಾ ಕ್ರಮದಿಂದಾಗಿ ಈಗ ಎಲ್ಲ ಗಿಫ್ಟ್ ಗಳು ಇದ್ದಲ್ಲಿಯೇ ಲಾಕ್ ಆದಂತಾಗಿದೆ.