ಕುದುರೆಮನಿ ಗ್ರಾಮದಲ್ಲಿ ಅಧಿಕಾರಿಗಳ ದಾಳಿ : ಮತದಾರರಿಗೆ ಹಂಚಲು ತಂದಿದ್ದ ಟಿಪ್ಪಿನ್ ಬಾಕ್ಸ್ ಸೇರಿದಂತೆ ಸಾಮಗ್ರಿಗಳ ವಶ
ಬೆಳಗಾವಿ : ಗ್ರಾಮೀಣ ಮತಕ್ಷೇತ್ರದ ಮತದಾರರಿಗೆ ಹಂಚಲು ಬಿಜೆಪಿ ಮುಖಂಡನ ಮನೆಯಲ್ಲಿ ಸಂಗ್ರಹಿಸಲಾಗಿದ್ದ ಟಿಪ್ಪಿನ್ ಬಾಕ್ಸ್ ಸೇರಿದಂತೆ ಕೆಲವು ಗಿಪ್ಟ್ ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಕುದುರೆಮನಿ ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬರುವ ಕುದುರೆಮನಿ ಗ್ರಾಮದ ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ ಮತದಾರರಿಗೆ ಟಿಪ್ಪಿನ್ ಬಾಕ್ಸ್ ಸೇರಿದಂತೆ ಕೆಲವು ಸಾಮಗ್ರಿಗಳನ್ನು ಸಂಗ್ರಹಿಸಿ ಇಡಲಾಗಿತ್ತು.
ಆದರೆ ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸ ಮತ್ತು ಕಂದಾಯ ಹಾಗೂ ತೆರಿಗೆ ಅಧಿಕಾರಿಗಳು ಸೇರಿ ದಾಳಿ ನಡೆಸಿ ಮನೆಯಲ್ಲಿ ಸಂಗ್ರಹಿಸಿ ಇರಿಸಲಾಗಿದ್ದ ಟಿಪ್ಪಿನ್ ಬಾಕ್ಸ್ ಹಾಗೂ ಕೆಲ ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಟಿಪ್ಪಿನ್ ಬಾಕ್ಸ್ ಹಾಗೂ ಸಾಮಗ್ರಿಗಳ ಮೇಲೆ ಬಿಜೆಪಿ ಮುಖಂಡ ನಾಗೇಶ ಮನ್ನೋಳಕರ್ ಅವರ ಭಾವಚಿತ್ರವನ್ನು ಹಾಕಲಾಗಿದೆ. ಚುನಾವಣೆ ಸಮಿಸುತ್ತಿದ್ದಂತೆ ಗ್ರಾಮೀಣ ಕ್ಷೇತ್ರದ ಮತದಾರರಿಗೆ ಹಂಚಲು ಈ ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು. ಆದರೆ ಅಧಿಕಾರಿಗಳ ದಾಳಿಯಿಂದ ಈ ಪ್ರಕರಣ ಬಯಲಿಗೆ ಬಂದಿದೆ ಎನ್ನಲಾಗಿದೆ.ಈ ಅಕ್ರಮ ಸಂಗ್ರಹನೆ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.