ಬೆಳಗಾವಿ-ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇಲೆಕ್ಷನ್ ಅಖಾಡಾ ಸಿದ್ಧಗಿಂಡಿದ್ದು ಈ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ಯುಗಾದಿ ಹಬ್ಬದ ನಿಮಿತ್ಯ ಬೆಳಗಾವಿಯ ಹಿಂಡಲಗಾ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿ ಚುನಾವಣಾ ಪ್ರಚಾರದ ವಿಶೇಷ ವಾಹನದಲ್ಲಿ ಕುಳಿತು ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ಅವರ ಸಹೋದರ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಹಾಗೂ ಅವರ ಕುಟುಂಬದ ಸದಸ್ಯರು, ಇಂದು ಬೆಳಗ್ಗೆ ಹಿಂಡಲಗಾ ಗಣಪತಿ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಸಕ್ತ ವಿಧಾನಸಭೆ ಚುನಾವಣೆಗೆ ಗ್ರಾಮೀಣ ಕ್ಷೇತ್ರದಲ್ಲಿ ಅಧಿಕೃತವಾಗಿ ಇಲೆಕ್ಷನ್ ಪ್ರಚಾರಕ್ಕೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ನಾಯಕರು ಪ್ರಮುಖ ಕಾರ್ಯಕರ್ತರು ವಿವಿಧ ಸಮುದಾಯಗಳ ಮುಖಂಡರು ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.
ಲಕ್ಷ್ಮೀ ಹೆಬ್ಬಾಳಕರ ಹಾಗೂ ಚನ್ನರಾಜ್ ಹಟ್ಟಿಹೊಳಿ ಹಿರಿಯ ಕಾಂಗ್ರೆಸ್ ಮುಖಂಡ ಯುವರಾಜ ಕದಂ ಅವರು ಚುನಾವಣಾ ಪ್ರಚಾರಕ್ಕಾಗಿಯೇ ಸಿದ್ಧಪಡಿಸಿದ ವಿಶೇಷ ವಾಹನದಲ್ಲಿ ಕುಳಿತು ಹಿಂಡಲಗಾ ಗ್ರಾಮದಲ್ಲಿ ಪ್ರಚಾರ ಶುರು ಮಾಡಿದ್ರು.
ಈ ಸಂಧರ್ಭದಲ್ಲಿ ಮಾತನಾಡಿದ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ವಿಘ್ನೇಶ್ವರನ ಆಶೀರ್ವಾದ ಪಡೆದು ಯುಗಾದಿ ಹಬ್ಬದ ದಿನ ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ.ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅಭಿವೃದ್ಧಿಯ ಹೊಳೆ ಹರಿಸಿದ್ದಾರೆ.ಎಲ್ಲ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.ಕ್ಷೇತ್ರದ ಮಂದಿರಗಳ ಜೀರ್ಣೋದ್ಧಾರ ಮಾಡಿದ್ದಾರೆ.ಯುವಕರಿಗಾಗಿ ಹಲವಾರು ಗ್ರಾಮಗಳಲ್ಲಿ ಜಿಮ್ ಗಳನ್ನು ಶುರು ಮಾಡಿದ್ದಾರೆ.ರೈತರ ಅನಕೂಲಕ್ಕಾ ಚಿಕ್ಕ ಬಾಂಧಾರಗಳ ನಿರ್ಮಾಣ ಮಾಡಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ಲಕ್ಷ್ಮೀ ಹೆಬ್ಬಾಳಕರ ಅವರ ಜೊತೆಗಿದ್ದು ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಲಕ್ಷ್ಮೀ ಅಕ್ಕಾಗೆ ಮೊತ್ತೊಮ್ಮೆ ಆಶೀರ್ವಾದ ಮಾಡ್ತಾರೆ, ಎಂದು ಚನ್ಬರಾಜ್ ವಿಶ್ವಾಸ ವ್ಯಕ್ತಪಡಿಸಿದರು.