ಬೆಳಗಾವಿ ದಕ್ಷಿಣದಿಂದ ಪ್ರಭಾವತಿ ಫೈನಲ್!!

ಬೆಳಗಾವಿ- ಪ್ರಭಾವತಿ ಚಾವಡಿ, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಫೈನಲ್ ಆಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಪ್ರಭಾವತಿ ಚಾವಡಿ,ಅವರು ಕಳೆದ ಆರು ತಿಂಗಳುಗಳಿಂದ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹೊಸ ಶಕ್ತಿ ತುಂಬಿರುವ ಪ್ರಭಾವತಿ ಚಾವಡಿ ಅಲ್ಪಾವಧಿಯಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದ್ದು ಪಕ್ಷದ ನಾಯಕರು ಬೆಳಗಾವಿ ದಕ್ಷಿಣದಿಂದ ಪ್ರಭಾವತಿ ಚಾವಡಿ ಅವರನ್ನೇ ಕಣಕ್ಕಿಳಿಸುವ ನಿರ್ದಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಅವರ ಹೆಸರು ಘೋಷಣೆ ಆಗುವದಷ್ಟೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ರಮೇಶ್ ಗೋರಲ್,ಪ್ರಭಾವತಿ ಚಾವಡಿ,ಪ್ರಭು ಯತ್ನಟ್ಟಿ,ಸೇರಿದಂತೆ ಹಲವಾರು ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು ಆದ್ರೆ ಪ್ರಭಾವತಿ ಚಾವಡಿ ಅವರ ಹೆಸರೇ ಫೈನಲ್ ಆಗಿದೆ ಎನ್ನುವ ಸುದ್ದಿ ಹರದಾಡುತ್ತಿದೆ.ಕಾಂಗ್ರೆಸ್ಸಿನ ಎರಡನೇಯ ಪಟ್ಟಿ ಬಿಡುಗಡೆಯಾದ ಬಳಿಕ ಅಭ್ಯರ್ಥಿ ಯಾರು? ಅನ್ನೋದು ಅಧಿಕೃತವಾಗಲಿದೆ.

Check Also

ಹೆಂಡತಿಯ ಜತೆ ಜಗಳಾಡಿದ್ದ ಪತಿ, ಅನುಮಾನಾಸ್ಪದ ಸಾವು.

ಬೆಳಗಾವಿ-ಪತ್ನಿಯೊಡನೆ ಜಗಳವಾಡಿ ಮನೆಯಿಂದ ಹೊರಗೆ ಹೋಗಿದ್ದ ಪತಿ ಅನುಮಾನಾಸ್ಪದ ಸಾವನ್ನಪ್ಪಿದ ಘಟನೆಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮುಸಗುಪ್ಪಿ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *