ಬೆಳಗಾವಿ- ಕಿತ್ತೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಬಾಬಾಸಾಹೇಬ್ ಪಾಟೀಲ ಅವರನ್ನು ಕಣಕ್ಕಿಳಿಸುವ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಕಿತ್ತೂರು ಕ್ಷೇತ್ರದಲ್ಲಿ ಬಂಡಾಯದ ಬಿರುಗಾಳಿ ಭುಗಿಲೆದ್ದಿದೆ.
ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಖಂಡಿಸಿ ಡಿ.ಬಿ ಇನಾಮದಾರ್ ಅಭಿಮಾನಿಗಳು ನೇಗಿನಹಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿದ ಬೆನ್ನಲ್ಲಿಯೇ ಡಿ.ಬಿ ಇನಾಮದಾರ್ ಕುಟುಂಬದ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕವಾಗಿ ರಿಸೈನ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ಗುರುವಾರ ಸಂಜೆ ನೇಗಿನಹಾಳ ಗ್ರಾಮದ ಡಿ.ಬಿ ಇನಾಮದಾರ್ ಮನೆಯಲ್ಲಿ ಸೇರಿದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಡಿ.ಬಿ ಇನಾಮದಾರ್ ಸೊಸೆ ಲಕ್ಷ್ಮೀ ವಿಕ್ರಂ ಇನಾಮದಾರ್ , ದೊಡ್ಡ ಧನ್ಯಾರ ಆರೋಗ್ಯ ಸರಿ ಇಲ್ಲ,ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಧರ್ಭದಲ್ಲಿ ಕಾಂಗ್ರೆಸ್ ನಮಗೆ ಮತ್ತಷ್ಟು ನೋವು ನೀಡುವ ನಿರ್ಧಾರ ಕೈಗೊಂಡಿದೆ.ನಾವು ಕುಟುಂಬದ ಎಲ್ಲ ಸದಸ್ಯರು ಕಾಂಗ್ರೆಸ್ಸಿಗೆ ರಿಸೈನ್ ಮಾಡಲು ನಿರ್ಧರಿಸಿದ್ದೇವೆ.ಇನ್ಮುಂದೆ ನಮ್ದು ಕಾಂಗ್ರೆಸ್ ಜೊತೆಗಿನ ಜಾಪ್ಟರ್ ಕ್ಲೋಸ್ ಆಗಿದೆ.ಎಂದು ಹೇಳುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಡಿ.ಬಿ ಇನಾಮದಾರ್ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ.ನಾವು ಅವರ ಪರವಾಗಿ ಹೇಳಿಕೆ ನೀಡುವಷ್ಟು ದೊಡ್ಡವರೂ ಅಲ್ಲ.ಕಾಂಗ್ರೆಸ್ಸಿನ ರಿಸೈನ್ ಮಾಡುವುದು ಕುಟುಂಬದ ಸದಸ್ಯರ ನಿರ್ಧಾರ ಎಂದು ಹೇಳಿದ ಲಕ್ಷ್ಮೀ ಅಭಿಮಾನಿಗಳ ಎದುರು ಕಣ್ಣೀರು ಹಾಕಿದ್ದಾರೆ.