ಬೆಳಗಾವಿ-ಅಥಣಿ ಬಿಜೆಪಿ ಟಿಕೆಟ್‌ಗೆ ಸವದಿ – ಕುಮಟಳ್ಳಿ ಮಧ್ಯೆ ಫೈಟ್ ನಡೆದಿದ್ದು ಈ ವಿಚಾರವಾಗಿ ರಮೇಶ್ ಜಾರಕಿಹೊಳಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು,ಯಾಕಿಷ್ಟು ಚಡಪಡಿಸುತ್ತಿದ್ದೀಯಾ ಲಕ್ಷ್ಮಣ್ ಅಣ್ಣಾ?,ದಯವಿಟ್ಟು ಅರಾಮಾಗಿರು ಎಂದು ರಮೇಶ್ ಸವದಿಗೆ ಟಾಂಗ್ ಕೊಟ್ಟಿದ್ದಾರೆ.
ಮಹಾರಾಷ್ಟ್ರದ ಶಿನ್ನೊಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು,ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಲು ಆಗಲ್ಲ,
ನನಗೆ ನೂರಕ್ಕೆ ನೂರರಷ್ಟು ವಿಶ್ವಾಸ ಇದೆ, ಮಹೇಶ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ಸಿಗುತ್ತೆ.ಮಹೇಶ್ ಜೊತೆಗೆ ಶ್ರೀಮಂತ ಪಾಟೀಲ ಸೇರಿ ಬಿಜೆಪಿ ಸೇರಿದ ಎಲ್ಲರಿಗೂ ಬಿಜೆಪಿ ಟಿಕೆಟ್ ಸಿಗಲಿದೆ.ಈ ಹಿಂದೆ ಬಿಜೆಪಿ ಸೇರಿದ 17 ಶಾಸಕರಿಗೂ ಬಿಜೆಪಿ ಹೈಕಮಾಂಡ್ ಆಶೀರ್ವಾದ ಮಾಡುತ್ತೆ,ಎಂದು ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಿ ಸೋತ್ರೆ ಅದರ ಹಣೆಪಟ್ಟಿ ಕಟ್ಟಲು ಷಡ್ಯಂತ್ರ ನಡೀತಿದೆ ಎಂಬ ಲಕ್ಷ್ಮಣ್ ಸವದಿ ಹೇಳಿಕೆ ವಿಚಾರ,ಸೋಲು ಗೆಲುವು ದೇವರಿಚ್ಚೆ,ಲಕ್ಷ್ಮಣ್ ಸವದಿ ಏಕೆ ಹತಾಶರಾಗಿ ಮಾತನಾಡ್ತಿದ್ದಾರೆ ಅರ್ಥವಾಗುತ್ತಿಲ್ಲ,ನಮಗೆ ವರಿಷ್ಠರಿದ್ದಾರೆ, ನಾನು ಹಾಗೂ ಲಕ್ಷ್ಮಣ ಸವದಿ ಸಣ್ಣ ಗಿಡದ ತಪ್ಪಲು,ನಮ್ಮ ರಾಷ್ಟ್ರೀಯ ನಾಯಕರು ಹೆಮ್ಮರವಾಗಿದ್ದಾರೆ, ಅವರು ನಿರ್ಣಯ ತೆಗೆದುಕೊಳ್ಳುತ್ತಾರೆ,ಯಾಕಿಷ್ಟು ಚಡಪಡಿಸುತ್ತಿದ್ದೀಯಾ ಲಕ್ಷ್ಮಣ್ ಅಣ್ಣಾ?,
ದಯವಿಟ್ಟು ಅರಾಮಾಗಿರು ಎಂದ ರಮೇಶ್ ಜಾರಕಿಹೊಳಿ ಸವದಿಗೆ ಟಾಂಗ್ ಕೊಟ್ಟೊದ್ದಾರೆ.
ಗ್ರಾಮೀಣ ಶಾಸಕರಿಂದ ದುಡ್ಡು ಪಡೆದು ಮಾಧ್ಯಮದಲ್ಲಿ ಕೆಡಿಸೋದು ತಪ್ಪು.
ಮಹಾರಾಷ್ಟ್ರದ ಶಿನೋಳಿಯಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ವಿಚಾರ,ಇದು ಚುನಾವಣಾ ಪ್ರಚಾರ ಸಭೆಯಲ್ಲ ಎಂದ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಇದು ನಾಗೇಶ ಮನ್ನೋಳಕರ್ ಸಂಬಂಧಿಯ ಫ್ಯಾಕ್ಟರಿ ಪೂಜೆ ಇದೆ ಅದಕ್ಕೆ ಬಂದಿದಿನಿ,ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಚಂದಗಡ ತಾಲೂಕಿನ ಗ್ರಾಮದಲ್ಲಿಎಲ್ಲರೂ ಕೂಡಿ ಊಟ ಮಾಡಲು ಇದೊಂದು ಸಂದರ್ಭ ಅಷ್ಟೇ.ನಾನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಭೆ ಮಾಡೋದಾದ್ರೆ ಬೆಳಗಾವಿಯಲ್ಲಿ ಮಾಡ್ತೀನಿ,ನಾಗೇಶ್ ಮನ್ನೋಳಕರ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಇದ್ದಾನೆ.ಇದೊಂದು ಸಂದರ್ಭ ಅದಕ್ಕೋಸ್ಕರ ಜನ ಬಂದಿರಬಹುದು,ನೀತಿ ಸಂಹಿತೆ ಉಲ್ಲಂಘನೆ ಆಗುತ್ತೆ ಅಂತ ಸಭೆ ಇಲ್ಲಿಗೆ ಶಿಪ್ಟ್ ಆಯ್ತಾ ಅಂತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಮೇಶ್ ಜಾರಕಿಹೊಳಿ,ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ ಎಂದ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಟಿಕೆಟ್ ಯಾವಾಗ ಅನೌನ್ಸ್ ಆಗುತ್ತೆ ಗೊತ್ತಿಲ್ಲ, ಏ.10 ಅಥವಾ 11ರಂದು ಆಗಬಹುದು.ಮಾಧ್ಯಮಗಳಿಗೆ ನಿರ್ಭಂಧ ಹೇರಿದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಮೇಶ್,ಇದು ನಮ್ಮ ಅಪ್ಪಂದಲ್ಲ ನೀವು ಇಲ್ಲಿಗೆ ನೀವು ಬಂದಿದ್ದೆ ತಪ್ಪು .ನೀವು ಇಲ್ಲಿಗೆ ಬಂದು ನಮಗೆ ಡಿಸ್ಟರ್ಬ್ ಮಾಡ್ತಿದ್ದಿರಿ.ಬೇಕಾದರೇ ನಾನೇ ಬಂದು ಹೇಳ್ತೀನಿ.ನಾಗೇಶ ಮನ್ನೋಳಕರ್ ಬಿಜೆಪಿ ಟಿಕೆಟ್ ಆಕಾಂಕ್ಷಿ.ಅವರ ಸಂಬಂಧಿಕರ ಕಾರ್ಖಾನೆ ಪೂಜೆ ಇದೆ.ಪ್ರಚಾರ ಮಾಡಲು ಒಂದು ಸಂದರ್ಭ ಇದು, ಅದೇನು ಅಪರಾಧ ಅಲ್ಲ.ಕೆಲವೊಬ್ಬ ಮಾಧ್ಯಮದವರು ಗ್ರಾಮೀಣ ಶಾಸಕರಿಂದ ದುಡ್ಡು ಪಡೆದು ಮಾಧ್ಯಮದಲ್ಲಿ ಕೆಡಿಸೋದು ತಪ್ಪು.ಎಲ್ಲರೂ ಅಲ್ಲ ಕೆಲವೊಂದು ಮಾಧ್ಯಮದವರು,ದಯವಿಟ್ಟು ಹಾಗೇ ಮಾಡೋಕೆ ಹೋಗಬೇಡಿ.ಮಾಧ್ಯಮಗಳಿಗೆ ಪ್ರಜಾಪ್ರಭುತ್ವದಲ್ಲಿ ಗೌರವವಿದೆ.ಅಲ್ಲಿಂದ ದುಡ್ಡು ಕೊಟ್ಟು ಕಳಿಸಿದ್ದಾರೆ ಅಂತಾ ನನಗೆ ಮೊದಲೇ ಮಾಹಿತಿ ಬಂದಿತ್ತು.ದಯವಿಟ್ಟು ಹಾಗೇ ಮಾಡಬೇಡಿ.ನಾಗೇಶ ಕರೆದಿದ್ದಾರೆ ನಾನು ಗೆಸ್ಟ್ ಆಗಿ ಬಂದಿದ್ದೆನೆ.ನಿಮ್ಮ ದಬಾನಿಕೆ ಆಯ್ತಲ್ಲಪ್ಪ, ಇದು ತಪ್ಪು.ಎಂದು ರಮೇಶ್ ಮಾದ್ಯಮಗಳ ಎದುರು ಕಿಡಿಕಾರಿದ್ದಾರೆ.
ನಾನು ನಾಗೇಶ್ ಇಲ್ಲಿ ಗೆಸ್ಟ್ ಅಷ್ಟೇ ಎಂದು ಮಾಧ್ಯಮಗಳ ಮೇಲೆ ರಮೇಶ ಜಾರಕಿಹೊಳಿ ಗರಂ ಆಗಿದ್ದಾರೆ.