ಬೆಳಗಾವಿ- ರಮೇಶ್ ಜಾರಕಿಹೊಳಿ ಹಠಮಾರಿ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮೇಲುಗೈ ಸಾಧಿಸಿರುವ ಸಾಹುಕಾರ್ ತಮ್ಮ ಪರಮಾಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ನಾಗೇಶ್ ಮನ್ನೋಳಕರ,ಅಥಣಿಯಿಂದ ಮಹೇಶ್ ಕುಮಟೊಳ್ಳಿ ರಾಮದುರ್ಗದಿಂದ ಚಿಕ್ಕ ರೇವಣ್ಣ,ಹಾಗು ಖಾನಾಪೂರ ಕ್ಷೇತ್ರದಿಂದ ವಿಠ್ಠಲ ಹಲಗೇಕರ ಬೈಲಹೊಂಗಲ ಕ್ಷೇತ್ರದಿಂದ ಜಗದೀಶ್ ಮೆಟಗುಡ್ ಅವರಿಗೆ ಬಿಜೆಪಿ ಟಿಕೆಟ್ ಕೊಡುವಂತೆ ಬಿಜೆಪಿ ವರಿಷ್ಠರ ಮುಂದೆ ರಮೇಶ್ ಜಾರಕಿಹೊಳಿ ಶಿಫಾರಸು ಮಾಡಿದ್ದರು ಎಂದು ಹೇಳಲಾಗಿದೆ.
ಬಿಜೆಪಿಯಲ್ಲಿ ಸಾಹುಕಾರ್ ರಮೇಶ್ ಜಾರಕಿಹೊಳಿ ವರ್ಚಸ್ಸು ಕಳೆದುಕೊಂಡಿದ್ದಾರೆ ಎಂದು ಅವರ ರಾಜಕೀಯ ವಿರೋಧಿಗಳು ಪ್ರಚಾರ ಮಾಡಿದ ಬೆನ್ನಲ್ಲಿಯೇ ಸಾಹುಕಾರ್ ತಮ್ಮ ವರ್ಚಸ್ಸು ತೋರಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಟಿಕೆಟ್ ನಾಗೇಶ್ ಮನ್ನೋಳಕರ ಅವರಿಗೆ ಕೊಡುವಂತೆ ಸಾಹುಕಾರ್ ಪಟ್ಟು ಹಿಡಿದಿದ್ದರು,ಅಥಣಿಯ ಮಹೇಶ್ ಕುಮಟೊಳ್ಳಿ ಅವರಿಗೂ ಟಿಕೆಟ್ ಕೊಡದಿದ್ದರೆ,ನನಗೂ ಟಿಕೆಟ್ ಬೇಡ ಎಂದು ರಮೇಶ್ ಜಾರಕಿಹೊಳಿ ಕುಮಟೊಳ್ಳಿ ಬೆಂಬಲಕ್ಕೆ ನಿಂತಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ