ಬೆಳಗಾವಿ- ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾಷ್ಟ್ರೀಯ ಹೆದ್ಧಾರಿ ಮತ್ತು ರಾಜ್ಯ ಹೆದ್ದಾರಿಯ 500 ಮೀಟರ್ ಸುತ್ತಳತೆಯಲ್ಲಿರುವ ಎಲ್ಲ ಮದ್ಯದ ಅಂಗಡಿಗಳನ್ನು ಬಾರ್ ಆ್ಯಂಡ ರೆಸ್ಟೀರೆಂಟ್ ಗಳನ್ನು ಸ್ಥಳಾಂತರ ಮಾಡುವಂತೆ ಅಬಕಾರಿ ಉಪ ಆಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ
ಬೆಳಗಾವಿ ಜಿಲ್ಲೆಯಲ್ಲಿ 426 ಹೆದ್ದಾರಿ ಪಕ್ಕದಲ್ಲಿ ಸರಾಯಿ ಅಂಗಡಿಗಳು ಮತ್ತು ಬಾರ್ ಗಳಿದ್ದು ಇವುಗಳನ್ನು ಜೂನ್ 30 ಮದ್ಯರಾತ್ರಿಯವರೆಗೆ ಸ್ಥಳಾಂತರ ಮಾಡದಿದ್ದರೆ ಲೈಸನ್ಸ ಸ್ಥಗಿತ ಗೊಳಿಸಲಾಗುವದು ಎನ್ನುವ ಎಚ್ಚರಿಕೆಯನ್ನು ನೋಟಿಸ್ ಮೂಲಕ ಅಬಕಾರಿ ಉಪ ಆಯುಕ್ತರು ನೀಡಿದ್ದಾರೆ
ಪಕ್ಕದ ಮಹಾರಾಷ್ಟ ಮತ್ತು ಗೋವಾ ರಾಜ್ಯಗಳಲ್ಲಿ ನೂರಕ್ಕೆ ನೂರರಷ್ಟು ಹೆದ್ದಾರಿ ಪಕ್ಕದ ಬಾರ್ ಗಳನ್ನು ಸ್ಥಳಾಂತರ ಮಾಡಲಾಗಿದೆ ಬೆಳಗಾವಿ ಜಿಲ್ಕೆಯಲ್ಲಿಯೂ ಹಾಯವೇ ಪಕ್ಜದ ಬಾರ್ ಗಳನ್ನು ಹಠಾವೋ ಅಭಿಯಾನ ಶುರುವಾಗಿದೆ
ಬೆಳಗಾವಿ ಜಿಲ್ಲೆಯಲ್ಲಿ ರಾಷ್ರೀಯ ಹೆದ್ದಾರಿ ಮತ್ತು ರಾಜ್ಯಹೆದ್ದಾರಿಗಳಿದ್ದು ಬೆಳಗಾವಿ ನಗರದಲ್ಲಿಯೂ ಬೆಳಗಾವಿ ಖಾನಾಪೂರ ರಸ್ತೆಯಲ್ಲಿನ ಬಾರ್ ಗಳು ಶಿಪ್ಟ ಆಗಲಿವೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ