Breaking News

ಗೋವಾ ಬೀಚ್ ನಲ್ಲಿ ಮಜಾ ಮಾಡುವ ಮೊದಲೇ ಕೈಗಳಿಗೆ ಬೇಡಿ ಬಿತ್ತು….

 

ಬೆಳಗಾವಿ- ಬೆಳಗಾವಿ ವ್ಯಾಪಾ ರಿಯೊಬ್ಬನ ಕಣ್ಣಿಗೆ ಕಾರದಪುಡಿ ಎರಚಿ ಒಂಬತ್ತು ಲಕ್ಷ 88 ಸಾವಿರ ದೋಚಿಕೊಂಡು ಗೋವಾ ಬೀಚ್ ಗೆ ಹೋಗಿ ಮಸಾಜ್ ಮಾಡಿಸಿಕೊಂಡು ಕ್ಯಾಸಿನೋ ದಲ್ಲಿ ಇನ್ನಷ್ಟು ಹಣ ಸಂಪಾದಿಸಬೇಕೆಂದು ಪ್ಲ್ತಾನ್ ಮಾಡಿಕೊಂಡಿದ್ದ ಖದೀಮರು ಗೋವಾ ಬೀಚ್ ನಲ್ಲಿ ಮಜಾ ಮಾಡುವ ಮೊದಲೇ ಕೈಗಳಿಗೆ ಬೇಡಿ ಹಾಕಿಸಿಕೊಂಡಿದ್ದಾರೆ

ಜೂನ್ 1 ರಂದು ರಾತ್ರಿ ಬೆಳಗಾವಿಯ ವ್ಯಾಪಾರಿ ಅನೀಲ ಪೋರವಾಲ ಕಣ್ಣಿಗೆ ಕಾರದಪುಡಿ ಎರಚಿ 9 ಲಕ್ಷ 88 ಸಾವಿರ ರೂ ಹಣ ದೋಚಿಕೊಂಡು ಪರಾರಿಯಾಗಿದ್ದ ಐದು ಜನ ಆರೋಪಿಗಳನ್ನು ಬಂಧಿಸಿರುವ ಬೆಳಗಾವಿ ಪೋಲೀಸರು ಆರೋಪಿಗಳಿಂದ 7 ಲಕ್ಷ 52 ಸಾವಿರ ಹಣ ಮತ್ತು ಒಂದು ಬೈಕ್ ವಶ ಪಡಿಸಿಕೊಂಡಿದ್ದಾರೆ

ವ್ಯಾಪಾರಿಯ ಕಣ್ಣಿಗೆ ಕಾರದಪುಡಿ ಎರಚಿ ಹಣ ದೋಚಿ ಪರಾರಿಯಾಗಿದ್ದ ಯಮನಾಪೂರ ಗ್ರಾಮದ ಕಿರಣ ಮದನ್ನವರ 27 ,ಬಿಕೆ ಕಂಗ್ರಾಳಿ ಗ್ರಾಮದ ರವಿ ತಳವಾರ ಬೆಳಗಾವಿ ಬಾಂಧೂರ ಗಲ್ಲಿಯ ಜ್ಯೋತಿಬಾ ಹಂಚಿನಮನಿ ಕೋನವಾಳ ಗಲ್ಲಿಯ ಅನೀಲ ಪಡೆಣ್ಣವರ ಕುಲಕರ್ಣಿ ಗಲ್ಲಿಯ ರಾಜೇಶ ವರೂರ ಇವರನ್ನು ಬಂಧಿಸಿರುವ ಪೋಲೀಸರು ಮುಖ್ಯ ಆರೋಪಿ ಮಲ್ಲೇಶ ಬುಡ್ರಿ ಎಂಬಾತನ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ
9 ಲಕ್ಷ 88 ಹಣ ದೋಚಿಕೊಂಡಿದ್ದ ಈ ಖದೀಮರು ತಾವು ಮಾಡಿಕೊಂಡ ಸಣ್ಣ ಪುಟ್ಟ ಸಾಲ ಚುಕ್ತಾ ಮಾಡಿ ಗೋವಾ ಬೀಚ್ ಗೆ ಹೋಗಿ ಬಳ್ಳೊಳ್ಳಿ ಎಣ್ಣೆ ಮಸಾಜ್ ಮಾಡಿಸಿಕೊಂಡು ಮಜಾ ಮಾಡಿ ಕ್ಯಾಸಿನೋ ಗೆ ಹೋಗಿ ಕೋಟ್ಯಾಂತರ ರೂ ಹಣ ಸಂಪಾದಿಸುವ ಕನಸು ಕಂಡಿದ್ದ ಈ ದರೋಡೆ ಕೋರರ ಕನಸು ನನಸಾಗುವ ಮೊದಲೇ ಬೆಳಗಾವಿ ಪೋಲೀಸರು ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನು ಬಂಧಿಸಿ ದೋಚಿದ ಹಣವನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಕಾರ್ಯಾಚರಣೆ ನಡೆಸಿದ ಪೋಲೀಸ್ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುವದು ಎಂದು ಡಿಸಿಪಿ ಅಮರನಾಥ ರೆಡ್ಡಿ ಘೋಷಿಸಿದ್ದಾರೆ
ಕಣ್ಣಿಗೆ ಕಾರದಪುಡಿ ಎರಚಿ ಪರಾರಿಯಾಗಿದ್ದ ದರೋಡೆಕೋರರನ್ನ ಬಂಧಿಸಲು ಕಾರ್ಯಾಚರಣೆ ನಡೆಸಿದ ಪೋಲೀಸ್ ತಂಡಕ್ಕೆ ಪೋಲೀಸ್ ಆಯುಕ್ತರು ಮಾರ್ಗದರ್ಶನ ನೀಡಿದ್ದರು ಸಿಸಿಬಿ ಸಿಪಿಐ ಗಡ್ಡೇಕರ ಎಸ್ ಎಂ ದೇಶನೂರ ಶಂಕರ ಪಾಟೀಲ ಸೇರಿದಂತೆ ಅನೇಕ ಜನ ಪೋಲೀಸ್ ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿದರೆ ಡಿಸಿಪಿ ಅಮರನಾಥ ರೆಡ್ಡಿ ಕಾರ್ಯಾಚರಣೆಯ ಕ್ಯಾಪ್ಟನ್ ಆಗಿದ್ದರು

ಕಳ್ಳತನ ಪ್ರಕರಣಗಳ ಪತ್ತೆ 5.20 ಲಕ್ಷದ ಚಿನ್ನಾಭರಣ ವಶ

ಬೆಳಗಾವಿ ನಗರದ ಮಾಳಮಾರುತಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೋಲೀಸರು ಮೂವರು ಆರೋಪಿಗಳನ್ನು ಬಂಧಿಸಿ 15 ರಿಂದ 16 ವಯಸ್ಸಿನ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ
ಮೂವರು ಜನ ಬಾಲ ಅಪರಾಧಿ ಗಳನ್ನು ಬಂಧಿಸಿಸಿ 185 ಗ್ರಾಮ ಚಿನ್ನ 560 ಗ್ರಾಮ ಬೆಳ್ಳಿ ಮತ್ತು 35 ಸಾವಿರ ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ

Check Also

ಬೆಳಗಾವಿಯ ಮಾಸ್ಟರ್ ಮೈಂಡ್..ಲಕ್ಕೀ ಸಿಎಂ…ಆಗಬಹುದಾ…??

ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇವಲ ಒಂದೇ ಚರ್ಚೆ ನಡೆಯುತ್ತಿದೆ ಅದೇನಂದ್ರೆ ಸಿದ್ರಾಮಯ್ಯ ಬದಲಾದ್ರೆ ಸತೀಶ್ ಸಾಹುಕಾರ್ ಸಿಎಂ ಆಗ್ತಾರೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.