ಬೆಳಗಾವಿ- ಜಿಲ್ಲಾಧಿಕಾರಿ ಕಚೇರಿ ಎದುರಿಗಿನ ರಸ್ತೆಯಲ್ಲಿ ತೆರವಾಗಿದ್ದ ಡಿವೈಡರ್ ಈಗ ಬ್ಯಾರಿಕೇಡ್ ಹಾಕಿ ಫುಲ್ ಪ್ಯಾಕ್ ಮಾಡಲಾಗಿದ್ದು ಡಿಸಿ ಕಚೇರಿ ಬಳಿಯಿಂದ ಕೋರ್ಟ್ ಗೆ ಹೋಗಲು ಇನ್ಮುಂದೆ ಅಂಡರ್ ಪಾಸ್ ವೇ ಬಾಯಪಾಸ್ ರಸ್ತೆಯಾಗಲಿದೆ
ನ್ಯಾಯವಾದಿಗಳ ಒತ್ತಾಯದ ಮೇರೆಗೆ ಉಮೇಶ ಕತ್ತಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸರ್ಕಾರದ ನೂರು ಕೋಟಿ ರೂ ವಿಶೇಷ ಅನುದಾನದಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ಡಿಸಿ ಕಚೇರಿ ಎದುರು ಅಂಡರ್ ಪಾಸ್ ನಿರ್ಮಾಣ ಮಾಡಲಾಗಿತ್ತು ಆದರೆ ಸಾರ್ವಜನಿಕರು ಈ ಅಂಡರ್ ಪಾಸ್ ಉಪಯೀಗಿಸದೇ ಎಲ್ಲರೂ ರಸ್ತೆಯ ಮೇಲೆಯೇ ಅಡ್ಡಾದಿಡ್ಡಿಯಾಗಿ ಓಡಾಡುವದನ್ನು ರೂಢಿ ಮಾಡಿಕೊಂಡಿದ್ದರು
ರಸ್ತೆಯ ಮೇಲಿನ ಡಿವೈಡರ್ ಖುಲ್ಲಾ ಆಗಿದ್ದರಿಂದ ಕೋರ್ಟ ಕಡೆಯಿಂದ ಡಿಸಿ ಕಚೇರಿಯ ಕಡೆಗೆ ವಾಹನಗಳು ನುಗ್ಗುವದು ಸಾರ್ವಜನಿಕರೂ ಅಂಡರ್ ಪಾಸ್ ಇದ್ದರೂ ರಸ್ತೆಯ ಮೇಲೆ ಓಡಾಡುವದು ಸಾಮಾನ್ಯವಾಗಿತ್ತು
ಒಂದು ಕೋಟಿ ರೂ ಖರ್ಚು ಮಾಡಿ ನಿರ್ಮಿಸಿದ ಅಂಡರ್ ಪಾಸ್ ಸಂಪೂರ್ಣವಾಗಿ ವೇಸ್ಟ ಆಗಿತ್ತು ಇದನ್ನೆಲ್ಲ ಗಮನಿಸಿದ ಪೋಲೀಸರು ರಸ್ತೆಯೇಲಿನ ಡಿವೈಡರ್ ಗಳಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆಯಲ್ಲಿ ಯಾರೊಬ್ಬರು ಓಡಾಡದಂತೆ ಕ್ರಮ ಕೈಗೊಂಡಿರುವದರಿಂದ ಬೆಳಗಾವಿ ನಾಗರಿಕರಿಗೆ ಈಗ ಡಿಸಿ ಕಚೇರಿಯಿಂದ ಕೋರ್ಟ್ ಕಡೆಗೆ ಹೋಗಲು ಅಂಡರ್ ಪಾಸ್ ವೇ ಗತಿ ಪೋಲೀಸರ ಈ ಕಾರ್ಯ ನಿಜವಾಗಲೂ ಶ್ಲಾಘನೀಯ