ಬೆಳಗಾವಿ-ಬೈಕ್ ಮೇಲೆ ಹೊರಟಿದ್ದ ವ್ಯಕ್ತಿಯ ರುಂಡ ಕಡಿದು ಹತ್ಯೆ ಮಾಡಿದ ಘಟನೆ,ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಳಿ ,ಭೀಕರ ಕೊಲೆ ನಡೆದಿದೆ.
ತಾರಿಹಾಳ ಕ್ರಾಸ್ ಬಳಿ ಶಿಂದೊಳ್ಳಿ ಮಠಗಲ್ಲಿಯ, ನಿವಾಸಿ ಗದಗಯ್ಯ(40) ಎಂಬ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಬೈಕ್ ಮೇಲೆ ಹೊರಟಿದ್ದ ಗದಗಯ್ಯನ ರುಂಡ ಕಡಿದು ಹಂತಕರು ಪರಾರಿಯಾಗಿದ್ದಾರೆ.ಹರಿತವಾದ ಆಯುಧದಿಂದ ರುಂಡ ಕಡಿದು ಪರಾರಿಯಾದ ಹಂತಕರನ್ನು ಪತ್ತೆ ಮಾಡಲು ಪೋಲೀಸರು ತನಿಖೆ ಶುರು ಮಾಡಿದ್ದಾರೆ.
ಬೈಕ್ ಮೇಲೆ ಬಿದ್ದಿರುವ ಮೃತದೇಹ ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದುಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಕೊಲೆಗೆ ಕಾರಣ ಏನು ಎಂಬುದು ಇನ್ನುವರೆಗೆ ಗೊತ್ತಾಗಿಲ್ಲ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ