.ಬೆಳಗಾವಿ- ಪಕ್ಕದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ ಇವತ್ತು ಸಂಜೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರ್ತಾರಂತ ಎಲ್ಲ,ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು ಆದ್ರೆ ಅವರು ಬೆಳಗಾವಿಗೆ ಬರಲಿಲ್ಲ.
ಮಹಾರಾಷ್ಟ್ರ ಸಿಎಂ ಇಂದು ಸಂಜೆ ಕೊಲ್ಹಾಪೂರಕ್ಕೆ ಬರುವ ಕಾರ್ಯಕ್ರಮ ನಿಗದಿಯಾಗಿತ್ತು,ಕೊಲ್ಹಾಪೂರ ದಲ್ಲಿ ಹವಾಮಾನ ವೈಪರೀತ್ಯದಿಂದ ಅವರ ವಿಮಾನ ಅಲ್ಲಿ ಲ್ಯಾಂಡೀಂಗ್ ಮಾಡಲು ಸಾಧ್ಯವಾಗದೇ ಇದ್ರೆ,ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ದಲ್ಲಿ ಲ್ಯಾಂಡಿಂಗ್ ಮಾಡಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.ಪ್ರೋಟೋಕಾಲ್ ಪ್ರಕಾರ ಎಲ್ಲ ಭದ್ರತಾ ಅಧಿಕಾರಿಗಳು ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಆಗಮಿಸಿದ್ಸರು.
ಸಂಜೆ 4-40 ಕ್ಕೆ ಏಕನಾಥ ಶಿಂದೆ ಅವರ ವಿಮಾನ ಕೊಲ್ಹಾಪೂರ ಏರ್ ಪೋರ್ಟಿನಲ್ಲಿ ಲ್ಯಾಂಡಿಂಗ್ ಆಯ್ತು, ನಂತರ ಈ ವಿಮಾನ ಟೇಕಪ್ ಆಗದಿದ್ದರೆ ಮಹಾ ಸಿಎಂ ರಸ್ತೆಯ ಮೂಲಕ ಕೊಲ್ಹಾಪೂರ ದಿಂದ ಬೆಳಗಾವಿಗೆ ಬರುವ ಸಾಧ್ಯತೆ ಇತ್ತು. ಹೀಗಾಗಿ ಬೆಳಗಾವಿಯ ಭದ್ರತಾ ಸಿಬ್ಬಂದಿ ಕುಗನೋಳಿ ಚೆಕ್ ಪೋಸ್ಟ್ ಬಳಿ ದಾರಿ ಕಾಯುತ್ತಿದ್ದರು . ಆದ್ರೆ ಏಕನಾಥ ಶಿಂಧೆ ಅವರ ವಿಮಾನ ಕೊಲ್ಹಾಪೂರ ಏರ್ ಪೋರ್ಟಿನಿಂದಲೇ ಟೇಕಫ್ ಆಯ್ರು .ಹೀಗಾಗಿ ಇವತ್ತು ಬೆಳಗಾವಿಗೆ ಬರಬೇಕಿದ್ದ ಏಕನಾಥ ಶಿಂಧೆ ಕೊಲ್ಹಾಪೂರದಿಂದಲೇ ಮುಂಬಯಿಗೆ ಪ್ರಯಾಣ ಬೆಳೆಸಿದರು.